ಕೇರಳದಲ್ಲಿಮಹಾಮಾರಿ ಅಬ್ಬರ – ಕೊಡಗು ಗಡಿಯಲ್ಲಿ ಕಟ್ಟಚ್ಚೆರ..!
ಕೊಡಗು: ನೆರೆ ರಾಜ್ಯ ಕೇರಳದಲ್ಲಿ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ ಗಡಿಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಕೊಡಗು ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಜೊತೆಗೆ ಜಿಲ್ಲಾದ್ಯಂತ ವಿವಿಧ ಇಲಾಖೆ ಜೊತೆ ಸಭೆ ನಡೆಸಿ ಅಗತ್ಯಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ದೃಶ್ಯಂ ಚಿತ್ರ ನೋಡಿ ಕಳ್ಳತನಕ್ಕೆ ಸ್ಕೆಚ್ : ಸ್ನೇಹಿತನಿಗೆ ಕನ್ನ ಹಾಕಿದ ಐನಾತಿಗಳು
ಪ್ರಮುಖವಾಗಿ ಕೇರಳ ಗಡಿ ಕುಟ್ಟ, ಮಾಕುಟ್ಟ, ಕರಿಕೆ, ಸಂಪಾಜೆ ಮೂಲಕ ಮುಖ್ಯ ರಸ್ತೆಯಲ್ಲೇ ಆಗಮಿಸಬೇಕು. ಜಿಲ್ಲೆ ಪ್ರವೇಶಿಸುವವರು 72 ಗಂಟೆಗಳ ಒಳಗಾಗಿ ಪಡೆದಿರುವ ನೆಗೆಟಿವ್ ರಿಪೋರ್ಟ್ ಕಡ್ಡಾಯ. ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಕಡ್ಡಾಯ. ವಸತಿ ನಿಲಯದಲ್ಲಿರುವವರು ಆಗಾಗೆ ಕೇರಳಕ್ಕೆ ತರಳುವಂತಿಲ್ಲ. ಪ್ರತಿಯೊಬ್ಬರಿಗೂ ರಾಂಡಮ್ ಟೆಸ್ಟ್ ಕಡ್ಡಾಯ ನಿಯಮಗಳ ಜೊತೆಗೆ, ರೆಸಾರ್ಟ್, ಹೋಂಸ್ಟೇ, ಪ್ರವಾಸಿಗರ ಮೇಲೂ ತೀವ್ರವಾದ ನಿಗಾ ವಹಿಸಲಾಗುತ್ತಿದೆ.