ಮಾಸ್ ಲುಕ್, ಖರಾಬ್ ಡೈಲಾಗ್ಸ್, ಸಖತ್ ಸಾಂಗ್ಸ್, ಸೆಂಟಿಮೆಂಟ್.. ವಾವ್ ಏನ್ ಸಿನಿಮಾ ಗುರು ಈ ‘ಪೊಗರು’..!
ಮಾಸ್ ಲುಕ್, ಖರಾಬ್ ಡೈಲಾಗ್ಸ್, ಸಖತ್ ಸಾಂಗ್ಸ್, ಸೆಂಟಿಮೆಂಟ್.. ವಾವ್ ಏನ್ ಸಿನಿಮಾ ಗುರು ಸಖತ್ತಾಗಿದೆ… ಈ ರೀತಿಯಾದ ಸೂಪರ್ ರೆಸ್ಪಾನ್ಸ್ ಸಿಗ್ತಿರೋದು ಮತ್ಯಾವ ಸಿನಿಮಾಗೂ ಅಲ್ಲ. ಅದೇ ಸ್ಯಾಂಡಲ್ ವುಡ್ ಹೈ ಓಲ್ಟೇಜ್ ಸಿನಿಮಾ ಪೊಗರು. ಥಿಯೇಟರ್ ಗಳಲ್ಲಿ ಪೊಗರು ಹವಾಗೆ ಅಭಿಮಾನಿಗಳು ಫಿದಾ ಆಗಿ ಶಿಳ್ಳೆ ಚಪ್ಪಾಳೆಗಳನ್ನ ಬಾರಿಸುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಈ ಸಿನಿಮಾ ಮೊದಲಿಗೆ ರೌಡಿಸಂ ಆಧರಿತ ಅಥವ ಮಾಸ್ ಆಡಿಯನ್ಸ್ ಇಷ್ಟವಾಗುವ ಸಿನಿಮಾ ಎಂದೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಸರ್ಫೈಸ್ ಎಂಬಂತೆ ಸಿನಿಮಾದಲ್ಲಿ ಆ ಎಮೋಷನ್ ಆಡಿಯನ್ಸ್ ಗಳನ್ನ ಕನೆಕ್ಟ್ ಮಾಡುತ್ತೆ. ಒಂದು ಚೂರು ರೋಮ್ಯಾನ್ಸ್, ಫ್ಲಾಶ್ ಬ್ಯಾಕ್ , ಧ್ರುವ ಸ್ಟನ್ನಿಂಗ್ ಲುಕ್ಸ್ ಅಭಿಮಾನಿಗಳ ಹೃದಯ ಮುಟ್ಟಿದೆ.
ಈ ವರ್ಷದ ಮೊದಲ ಸ್ಟಾರ್ ಸಿನಿಮಾವಾಗಿ ತೆರೆಕಂಡಿರುವ ಪೊಗರು ಭರ್ಜರಿ ಓಪನಿಂಗ್ ಆರಂಭಿಸಿದೆ. ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲುಕ್ ಡೈಲಾಗ್ಸ್ ಫೈಟ್ ಇವೆಲ್ಲವೂ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಬುಹತೇಕ ಮಾಸ್ ಸಿನಿಮಾಗಳಲ್ಲಿ ಬ್ಯುಲ್ಡ್ ಅಪ್, ಫೈಟ್ಸ್ , ಡೈಲಾಗ್ಸ್ ಹೈಲೈಟ್ಸ್ ಆಗಿರುತ್ತೆ. ಅಂದ್ರೆ ಚಿತ್ರಕಥೆ ಹಾಗೂ ಸನ್ನಿವೇಶಗಳ ಮೇಲೆ ಸಿನಿಮಾ ನಿಂತಿರುತ್ತವೆ. ಆದ್ರೆ ಈ ಸಿನಿಮಾದಲ್ಲಿ ಮಾಸ್ ಡೈಲಾಗ್ಸ್, ಪೈಟ್ಸ್ ಜೊತೆಗೆ ಎಮೋಷನಲ್ ಕಥೆ ಕೂಡ ಹೆಣೆಯಲಾಗಿದೆ. ಈ ಸಿನಿಮಾ ಒಂದು ಕಮರ್ಷಿಯಲ್ ಸಿನಿಮಾ ಜೊತೆಗೆ ಪಕ್ಕಾ ಫ್ಯಾಮಿಲಿ ಓರಿಎಂಟೆಡ್. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಇದೆ.
ಈ ಹಿಂದಿನ ಮೂರು ಸಿನಿಮಾಗಳಿಗಿಂತ ಧ್ರುವ ಅವರು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವಗೆ ನಾಯಕಿ ರಶ್ಮಿಕಾ ಕಾಣಿಸಿಕೊಂಡಿದ್ದರೂ ಅವರು ಸಿನಿಮಾದಲ್ಲಿ ಎಲ್ಲೂ ಅಷ್ಟಾಗಿ ಹೈಲೆಟ್ ಆಗಿಲ್ಲ. ಸಂಪತ್, ರವಿಶಂಕರ್, ಪವಿತ್ರಾ ಲೋಕೇಶ್, ಧನಂಜಯ್, ಚಿಕ್ಕಣ್ಣ, ಮಯೂರಿ, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನೂ ಚಂದನ್ ಶೆಟ್ಟಿಯ ಹಾಡುಗಳು ಮಾಸ್ ಪ್ರಿಯರು ಹೇಗೆ ಇಷ್ಟ ಪಡ್ತಾರೋ ಅದಕ್ಕೆ ತಕ್ಕನಂತೆಯೇ ಇದ್ದು, ಈಗಾಗಗಲೇ ಖರಾಬು ಪೊಗರು ಸಾಂಗ್ಸ್ ಯಾವ ರೀತಿ ಮೋಡಿ ಮಾಡಿದೆ ಅನ್ನೋ ವಿಚಾರವೂ ಎಲ್ಲರಿಗೂ ಗೊತ್ತೇ ಇದೆ.
ನಂದಕಿಶೋರ್ ಡೈರೆಕ್ಷನ್ ನಲ್ಲಿ ಪೊಗರು ಜಬರದಸ್ತಾಗಿ ಮೂಡಿಬಂದಿದೆ. ಒಂದೊಳ್ಳೆ ಮೆಸೇಜ್ ಅನ್ನ ಈ ಸಿನಿಮಾ ಮೂಲಕ ನೀಡಲಾಗಿದೆ. ನಿರ್ಮಾಪಕರು ಇಡೀ ಸಿನಿಮಾವನ್ನು ತುಂಬಾ ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಮೇಕಿಂಗ್ ಅದ್ಧೂರಿಯಾಗಿದೆ.
ಇನ್ನೂ ಸಿನಿಮಾದ ರಿವೀವ್ ಬಿಟ್ಟು ಪ್ರೇಕ್ಷಕರ ರೆಸ್ಪಾನ್ಸ್ ಬಗ್ಗೆ ಮಾತನಾಡೋದಾದ್ರೆ ಸಿನಿಮಾಗೆ ಸಖತ್ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ತೆಲುಗಿನಲ್ಲೂ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಫೆಬ್ರವರಿ 19ರಂದು ತೆರೆಗೆ ಬಂದ ಪೊಗರು ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಆಗಿ ಓಡಿದೆ. ಇನ್ನೂ ಈ ಸಿನಿಮಾ ಮೊದಲ ದಿನ ಒಟ್ಟಾರೆ 6 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ.
ಅಭಿಮಾನಿಗಳಿಗೋಸ್ಕರ ಮುಂಜಾನೆ 6 ಗಂಟೆಗೇ ಶೋ ಇಡಲಾಗಿತ್ತು. ಅಲ್ಲದೆ, ಯಾವುದೆ ದೊಡ್ಡ ಸಿನಿಮಾ ರಿಲೀಸ್ ಆಗದ ಕಾರಣ ಪೊಗರಿಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದವು. ಇದು ಸಿನಿಮಾದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣವೂ ಆಗಿದೆ.
ಪೊಗರು ಸಿನಿಮಾ ಮಲ್ಟಿಫ್ಲೆಕ್ಸ್ಗಳಿಗಿಂತ ಬಿ ಹಾಗೂ ಸಿ ಸಾಲಿನ ಚಿತ್ರಮಂದರಿಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಭಿಮಾನಿಗಳು ಮತ್ತೆ ಮತ್ತೆ ಬಂದು ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೊರೊನಾದಿಂದ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ನಂಬಿಕೆ ಇತ್ತು. ಆದರೆ, ಪೊಗರು ಈ ನಂಬಿಕೆಯನ್ನು ಸುಳ್ಳು ಮಾಡಿದೆ. ಅಷ್ಟೇ ಅಲ್ಲ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಅನೇಕ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡೋಕೆ ಹಿಂಜರಿದಿದ್ದರು. ಈಗ ಪೊಗರು ಸಿನಿಮಾ ಇವರೆಲ್ಲರಿಗೂ ಬಲ ನೀಡಿದೆ.
ಮುಂದಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ದರ್ಶನ್ ನಟನೆಯ ರಾಬರ್ಟ್, ರಿಷಬ್ ಶೆಟ್ಟಿ ಅಭಿನಯದ ಹೀರೋ, ಪುನೀತ್ ಹೀರೋ ಆಗಿ ಕಾಣಿಸಿಕೊಂಡಿರುವ ಯುವರತ್ನ, ಕೋಟಿಗೊಬ್ಬರ 3, ಕೆಜಿಎಫ್ ಚಾಪ್ಟರ್ 2ಗಳು ಬಿಡುಗಡೆ ಆಗುತ್ತಿವೆ. ಒಟ್ಟಾರೆ 2021 ರಲ್ಲಿ ಸಿನಿಪ್ರೇಕ್ಷರಿಗೆ ಭರಪೂರ ಮನರಂಜನೆ ಸಿಗೋದ್ರಲ್ಲಿ ನೋ ಡೌಟ್..