ಕೋವಿಡ್ ಆರೈಕೆ ಕೇಂದ್ರದಲ್ಲಿ ಅನ್ನಕ್ಕಾಗಿ ಹಾಹಾಕಾರ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೋವಿಡ್ ಪಾಸಿಟಿವ್ ಬಂದ ಜನರನ್ನು ಆರೈಕೆ ಕೇಂದ್ರಕ್ಕೆ ಸೇರಸಲಾಗುತ್ತಿದೆ. ದಾಖಲಾದ ರೋಗಿಗಳಿಗೆ ಆಹಾರ ಸಿಗದೆ ಹಾಹಾಕಾರ ಉಂಟಾಗಿದೆ. ಆಹಾರಕ್ಕಾಗಿ ಹಾಹಾಕಾರ ಎದುರಾಗುತ್ತಿದ್ದರು, ಜಿಲ್ಲಾಡಳಿತ ಇತ್ತ ಗಮನ ಹರಿಸುತ್ತಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಗಂಜಾಂ ರಸ್ತೆಯಲ್ಲಿರುವ ಕೋವಿಡ್ ಅರೈಕೆ ಕೇಂದ್ರದಲ್ಲು 70ಕ್ಕೂ ಹೆಚ್ಚು ಜನ ಇದ್ದು, ಆಹಾರ ಸಿಗದೆ ಎರಡು ದಿನಗಳಿಂದ ಪರದಾಡುತ್ತಿದ್ದಾರೆ. ಈ ಮೊದಲು ಕೋವಿಡ್ ಅರೈಕೆ ಕೇಂದ್ರಕ್ಕೆ ಆಹಾರ ಪೂರೈಸುತ್ತಿದ್ದವರಿಗೆ ಜಿಲ್ಲಾಡಳಿತ ಹಣ ನೀಡದ ಕಾರಣ ಆಹಾರ ಸರಬರಾಜು ಮಾಡಲು ನಿರಾಕರಿಸಿದ್ದಾರೆ. ಸರಬರಾಜು ಮಾಡುವವರಿಗೆ 76 ಲಕ್ಷ ಬಾಕಿ ಕೊಡಬೇಕಿದೆ ಇದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.