ಗೋಹತ್ಯೆ ಆಯ್ತು , ಈಗ ಲವ್ ಜಿಹಾದ್ ಕಾಯ್ದೆ ಕಡೆಗೆ ಗಮನ : ಈಶ್ವರಪ್ಪ
ಬಳ್ಳಾರಿ: ಇತ್ತೀಚೆಗೆ ಗೋ ಹತ್ಯೆ ಹಾಗೂ ಲವ್ ಜಿವಾದ್ ಕಡಿವಾಣಕ್ಕೆ ಕಾಯ್ದೆ ತರುವ ವಿಚಾರ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. ಅದರಂತೆ ಇದೀಗ ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದೀಗ ಲವ್ ಜಿಹಾದ್ ಕಾಯ್ದೆ ಕಡೆ ಎಲ್ಲರ ಗಮನ ನೆಟ್ಟಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಈ ವಿಚಾರವಾಗಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಬಳ್ಳಾರಿಯಲ್ಲಿ ಮಾತನಾಡಿದ್ದಾರೆ. ಗೋಹತ್ಯೆ ನಿಷೇಧ ಕಾನೂನು ಆಯ್ತು, ಇನ್ನೂ ಮುಂದೆ ಲವ್ ಜಿಹಾದ್ ಕಾಯ್ದೆ ಕಡೆಗೆ ಗಮನ ಎಂದು ಈಶ್ವರಪ್ಪ ಅವರು ತಿಳಿಸಿದ್ದಾರೆ.
‘ಕುಮಾರಸ್ವಾಮಿ ಅವರಿಗೆ ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ’: ರೇಣುಕಾಚಾರ್ಯ
ಇನ್ನೂ ಲವ್ ಜಿಹಾದ್ ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ನಮ್ಮ ಹಿಂದೂ ಹೆಣ್ಣುಮಕ್ಕಳನ್ನು ನಾವುಗಳು ರಕ್ಷಣೆ ಮಾಡಬೇಕಿದೆ. ಅದಕ್ಕಾಗಿ ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ಮಸೂದೆಯನ್ನು ಮಂಡಿಸಿ, ಬಹುಮತದ ಅಂಗೀಕಾರ ಪಡೆಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಹಿಂಧುತ್ವವನ್ನು ನಾವುಗಳೇ ಉಳಿಸಿ ಬೆಳೆಸಬೇಕಿದೆ ಎಂದಿದ್ದಾರೆ ಈಶ್ವರಪ್ಪ ಅವರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








