‘ಕುಮಾರಸ್ವಾಮಿ ಅವರಿಗೆ ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ’: ರೇಣುಕಾಚಾರ್ಯ
ಬೆಂಗಳೂರು : ಕುಮಾರಸ್ವಾಮಿ ಅವರಿಗೆ ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಹೇಳಿದ್ದಾರೆ. ನಗರದಲ್ಲಿ ಮಾತನಾಡಿರೋ ಅವರು ಕುಮಾರಸ್ವಾಮಿ ಅದೃಷ್ಟದ ಮುಖ್ಯಮಂತ್ರಿ. 37 ಸ್ಥಾನ ಪಡೆದು ಲಾಟ್ರಿ ಮುಖ್ಯಮಂತ್ರಿಯಾದರು. ಅವರ ಪಕ್ಷದ ಶಾಸಕರೇ ಬೇಸತ್ತು. ನಮ್ಮ ಕಡೆ ಬಂದಾಗ ನಾವು ಸರ್ಕಾರ ರಚನೆ ಮಾಡಿದೆವು. ಕುಮಾರಸ್ವಾಮಿ ಅವರಿಗೆ ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ ಎಂದಿದ್ದಾರೆ.
‘ಕೈ’ ನಾಯಕರಿಗೆ ಹೆಚ್ ಡಿಕೆ ಮೋಸ ಮಾಡಿದ್ರು’ : ರೇಣುಕಾಚಾರ್ಯ..!
ಮುಂದುವರೆದು ಮಾತನಾಡಿದ ಅವರು ಕುಮಾರಸ್ವಾಮಿಗೆ 2006ರಲ್ಲಿ ಬಿಜೆಪಿ ಅಸ್ತಿತ್ವ ಕೊಟ್ಟಿತು. ಆಗ ಕುಮಾರಸ್ವಾಮಿ ವಚನ ಭ್ರಷ್ಟರಾದರು. ವಚನ ಭ್ರಷ್ಟರಾದ ಮೇಲೆ ಕುಮಾರಸ್ವಾಮಿ ರಾಜಕೀಯ ಜೀವನ ಹೀನಾಯವಾಯಿತು. ಇನ್ನೂ ಈ ಹಿಂದೆ ಕುಮಾರಸ್ವಾಮಿ ಕೈ ನಾಯಕರಿಗೆ ವಂಚಿಸಿದ್ದರು. ಹೀಗಾಗಿ ಮೈತ್ರಿ ಸರ್ಕಾರದಿಂದ ಕಾಂಗ್ರೆಸ್ ಶಾಸಕರು ಹೊರ ಹೋಗುವಂತೆ ಕಾಂಗ್ರೆಸ್ ನಾಯಕರೇ ಮಾಡಿದ್ರು. ಎಂದು ವಾಗ್ದಾಳಿ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








