ADVERTISEMENT
Wednesday, July 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

Shwetha by Shwetha
July 8, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು : ಮಲ್ಲೇಶ್ವರದ ಪ್ರಸಿದ್ಧ ಸಂಪಿಗೆ ರಸ್ತೆಯಲ್ಲಿ ನಡೆದ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಈಗ ಹೊಸ ತಿರುವು ಪಡೆದುಕೊಂಡಿದೆ. ಬಿಬಿಎಂಪಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿರುವ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು, ಸಂತ್ರಸ್ತ ವ್ಯಾಪಾರಿಗಳಿಂದ ತಲಾ 5,000 ರೂಪಾಯಿ ಹಣ ವಸೂಲಿ ಮಾಡುತ್ತಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕಾನೂನು ಹೋರಾಟದ ನೆಪದಲ್ಲಿ ವಸೂಲಿ

Related posts

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

July 8, 2026
ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

July 8, 2026

ಇತ್ತೀಚೆಗಷ್ಟೇ ಮಲ್ಲೇಶ್ವರದ ಫುಟ್‌ಪಾತ್‌ಗಳಲ್ಲಿದ್ದ ಸುಮಾರು 600ಕ್ಕೂ ಹೆಚ್ಚು ವ್ಯಾಪಾರಿಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಕಾರ್ಯಾಚರಣೆಯ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರಲು ಕೆಲವು ಸ್ವತಂತ್ರ ವ್ಯಾಪಾರಿ ಒಕ್ಕೂಟಗಳು ಮುಂದಾಗಿವೆ. ಈ ಹೋರಾಟದ ವೆಚ್ಚ ಮತ್ತು ವಕೀಲರ ಶುಲ್ಕಕ್ಕಾಗಿ ಪ್ರತಿ ವ್ಯಾಪಾರಿಯಿಂದ ಕಡ್ಡಾಯವಾಗಿ 5,000 ರೂಪಾಯಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಸುಮಾರು 260 ಮಂದಿ ವ್ಯಾಪಾರಿಗಳು ಈ ಹಣವನ್ನು ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ.

ವ್ಯಾಪಾರಿಗಳಲ್ಲೇ ಮೂಡಿದ ಭಿನ್ನಮತ

ಹಣ ಸಂಗ್ರಹದ ವಿಚಾರದಲ್ಲಿ ವ್ಯಾಪಾರಿಗಳಲ್ಲೇ ಈಗ ಭಿನ್ನಾಭಿಪ್ರಾಯ ಮೂಡಿದೆ. ಒಂದು ಗುಂಪು ಕೋರ್ಟ್ ಮೂಲಕ ಹಕ್ಕು ಪಡೆಯಲು ಹಣ ನೀಡುವುದು ಅನಿವಾರ್ಯ ಎನ್ನುತ್ತಿದ್ದರೆ, ಮತ್ತೊಂದು ಗುಂಪು ಇದು ಬಡ ವ್ಯಾಪಾರಿಗಳ ಶೋಷಣೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿರುವಾಗ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಅನೇಕ ಬಡ ವ್ಯಾಪಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ಜಾಗ ಬಿಟ್ಟು ಹಳೆ ಜಾಗಕ್ಕೇ ಲಗ್ಗೆ

ಅಧಿಕಾರಿಗಳು ವ್ಯಾಪಾರಿಗಳಿಗೆ ಪರ್ಯಾಯವಾಗಿ ಪಕ್ಕದ ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ಮಾಡಲು ಸೂಚಿಸಿದ್ದರೂ, ಅಲ್ಲಿ ವ್ಯಾಪಾರವಾಗುತ್ತಿಲ್ಲ ಎಂಬ ಕಾರಣಕ್ಕೆ ಕೆಲವು ವ್ಯಾಪಾರಿಗಳು ಮತ್ತೆ ಸಂಪಿಗೆ ರಸ್ತೆಯ ಫುಟ್‌ಪಾತ್‌ಗೇ ಮರಳುತ್ತಿದ್ದಾರೆ. ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಬುಟ್ಟಿ, ಅಂಗಡಿಗಳನ್ನು ಇಡಲು ಆರಂಭಿಸಿದ್ದು, ಇದು ಸ್ಥಳೀಯ ನಿವಾಸಿಗಳು ಮತ್ತು ಪಾದಚಾರಿಗಳ ಆತಂಕಕ್ಕೆ ಕಾರಣವಾಗಿದೆ. ಒತ್ತುವರಿ ತೆರವುಗೊಳಿಸಿದರೂ ಪರಿಸ್ಥಿತಿ ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಮಲ್ಲೇಶ್ವರಂ ಫುಟ್‌ಪಾತ್ ಕಿತ್ತಾಟ ಈಗ ನ್ಯಾಯಾಲಯದ ಅಂಗಳದತ್ತ ಮುಖ ಮಾಡಿದ್ದು, ಸಂಘಟನೆಗಳ ಈ ಹಣ ಸಂಗ್ರಹ ಎತ್ತ ಸಾಗಲಿದೆ ಎಂಬ ಕುತೂಹಲ ಮೂಡಿಸಿದೆ.

ShareTweetSendShare
Join us on:

Related Posts

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

by Shwetha
July 8, 2026
0

ಮೈಸೂರು ದಸರಾ–2026ರ ಮಹೋತ್ಸವಕ್ಕಾಗಿ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಇಂದು ಮತ್ತಿಗೋಡು ಆನೆ ಶಿಬಿರ ಹಾಗೂ ದುಬಾರೆ ಆನೆ ಶಿಬಿರಗಳಲ್ಲಿ ಪಶುವೈದ್ಯರ ತಂಡವು 20ಕ್ಕೂ...

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

by Shwetha
July 8, 2026
0

ಅಯೋಧ್ಯೆ : ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರದ ಕಾಣಿಕೆ ಪೆಟ್ಟಿಗೆಗೆ ಕನ್ನ ಹಾಕಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈಗ ಬೆಚ್ಚಿಬೀಳಿಸುವ ಸತ್ಯಗಳು ಲಭ್ಯವಾಗಿವೆ. ಭಕ್ತರು ಭಕ್ತಿಯಿಂದ...

E20 ಪೆಟ್ರೋಲ್‌ನಿಂದ ರಬ್ಬರ್ ಭಾಗಗಳಿಗೆ ಹಾನಿ ಸಾಧ್ಯ: ARAI ಎಚ್ಚರಿಕೆ

E20 ಪೆಟ್ರೋಲ್‌ನಿಂದ ರಬ್ಬರ್ ಭಾಗಗಳಿಗೆ ಹಾನಿ ಸಾಧ್ಯ: ARAI ಎಚ್ಚರಿಕೆ

by Shwetha
July 8, 2026
0

ಭಾರತೀಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ (ARAI) ಪ್ರಕಾರ, E10 ಪೆಟ್ರೋಲ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಾಹನಗಳಲ್ಲಿ E20 ಪೆಟ್ರೋಲ್ ಬಳಸಿದರೆ ರಬ್ಬರ್‌ನಿಂದ ತಯಾರಿಸಲಾದ ಕೆಲವು ಎಂಜಿನ್ ಮತ್ತು ಇಂಧನ...

ನಾಯಿ ಕಚ್ಚಿದರೆ ಮಾಲೀಕರೇ ಹೊಣೆ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ : ನಾಯಿ ಕಡಿತ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ನಾಯಿ ಕಚ್ಚಿದರೆ ಮಾಲೀಕರೇ ಹೊಣೆ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ : ನಾಯಿ ಕಡಿತ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

by Shwetha
July 8, 2026
0

ಬೆಂಗಳೂರು : ಮನೆಯಲ್ಲಿ ನಾಯಿ ಸಾಕುವ ಹವ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ನಿಮ್ಮ ಪ್ರೀತಿಯ ಸಾಕುನಾಯಿ ಬೇರೆಯವರ ಮೇಲೆ ದಾಳಿ ಮಾಡಿದರೆ ಅಥವಾ...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಕೃಷಿ ಸಾಲ ಮನ್ನಾ ಕುರಿತು ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್

by Shwetha
July 8, 2026
0

ಸಿಎಂ ಡಿ.ಕೆ. ಶಿವಕುಮಾರ್ ಅವರು, ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಉಂಟಾಗಿರುವ ಬರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram