ನ್ಯೂ ಇಯರ್ ಸೆಲೆಬ್ರೇಷನ್ ಪ್ಲಾನ್ ಕೈಬಿಡೋದು ಒಳ್ಳೇದು : ‘ಹೊಸ ವರ್ಷಾಚರಣೆ’ಗೆ ಬ್ರೇಕ್..!
ಪ್ರತಿ ವರ್ಷದಂತೆ ಈ ಬಾರಿ ಧಾಮ್ ಧೂಮಾಗಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಬ್ಏಕು ಅಂತ ಪ್ಲಾನಿಂಗ್ಸ್ ಮಾಡ್ಕೊಮಡಿದ್ದವರು, ಕನಸು ಕಾಣ್ತಿದ್ದವರ ಪ್ಲಾನ್ ಭಗ್ನವಾಗಿದೆ. ಯಾಕಂದ್ರೆ ಈ ಬಾರಿ
ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಗೆ ಸರ್ಕಾರ ಬ್ರೇಕ್ ಹಾಕಿದೆ. ಈ ಕುರಿತಾದ ನಿಯಮಾವಳಿ ( ಮಾರ್ಗಸೂಚಿ) ಶೀಘ್ರದಲ್ಲೇ ಜಾರಿಯಾಗಲಿದೆ.
ಇನ್ನೂ ಜನರು ಬೇಕಿದ್ರೆ ತಮ್ಮ ತಮ್ಮ ಮನೆಯಲ್ಲಿಯೇ ಹೊಸ ವರ್ಷ ಸಂಭ್ರಮಾಚಾರಣೆ ಮಾಡಬಹುದು. ಆದ್ರೆ ಬ್ರಗೇಡ್ ರೋಡ್ , ಎಂಜಿ ರೋಡ್ ಗಳು ಹೀಗೆ ಪ್ರತಿ ವರ್ಷ ನ್ಯೂಯಿರ್ ಗ್ರ್ಯಾಂಡ್ ಆಗಿ ಆಚರಣೆ ಮಾಡುತ್ತಿದ್ದ ಸ್ಥಳಗಳು ಈ ಬಾರಿ ಹೊಸ ವರ್ಷದ ದಿನ ಕಾಲಿ ಕಾಲಿ ಹೊಡೆಯಲಿವೆ. ಕೊರೊನಾ ಹಾವಳಿಯಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ಮಾಡದಂತೆ ಬ್ರೇಕ್ ಹಾಕಿದೆ.
‘ಮಾದಕ’ ಬೆಡಗಿ ಸಂಜನಾಗೆ ಕೊನೆಗೂ ಸಿಕ್ತು ಜಾಮೀನು..! ಶರತ್ತುಗಳೇನು..?
ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಅವರು ಈ ಬಾರಿ ಬೆಂಗಳೂರು ಸೇರಿದಂತೆ, ರಾಜ್ಯದ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ತಿಳಿಸಿದರು.
ಇನ್ನೂ ಹೋಟೆಲ್ ಹಾಗೂ ಪಬ್ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಪಾಸ್ ಪಡೆದುಕೊಳ್ಳುವುದು ಕಡ್ಡಾಯವಾಗಿರಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಕಳಿಸಿಕೊಡಲಾಗಿದ್ದು, ಅವರು ಅನುಮೋದನೆ ಕೊಟ್ಟ ಬಳಿಕ ನಿಮಯ ಜಾರಿಗೊಳಿಸಲಾಗುವುದು ಎಂದು ಆರ್. ಅಶೋಕ್ ತಿಳಿಸಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








