‘ಮಾದಕ’ ಬೆಡಗಿ ಸಂಜನಾಗೆ ಕೊನೆಗೂ ಸಿಕ್ತು ಜಾಮೀನು..! ಶರತ್ತುಗಳೇನು..?
ಸ್ಯಾಂಡಲ್ ವುಡ್ ನ ಡ್ರಗ್ಸ್ ಲಿಂಕ್ ಕೇಸ್ ನಲ್ಲಿ ಸಿಲುಕಿ 84 ದಿನಗಳ ಕಾಲ ಜೈಲಿನಲ್ಲಿದ್ದ ಮಾದಕ ನಟಿ ಸಂಜನಾ ಗಗಲ್ರಾನಿಗೆ ಕೊನೆಗೂ ಶರತ್ತು ಬದ್ಧ ಜಾಮೀನು ಮಂಜೂರಾಗಿದೆ. ಹೌದು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಜಾಮೀನು ನೀಡುವಂತೆ ಕೋರಿ ನಟಿ ಸಂಜನಾ ಗಲ್ರಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶರತ್ತುಗಳ ವಿಧಿಸಿ ಬೇಲ್ ನೀಡಿದೆ.
3 ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಒದಗಿಸಬೇಕು, ಪ್ರಕರಣದ ತನಿಖೆಗೆ ಸಂಪೂರ್ಣ ಸಹಕರಿಸಬೇಕು, ಸಾಕ್ಷ್ಯಗಳನ್ನ ತಿರುಚದಂತೆ ಸೇರಿ ಅನೇಕ ಶರತ್ತುಗಳನ್ನ ನ್ಯಾಯಾಯವು ವಿಧಿಸಿದೆ. ನ್ಯಾಯಮೂರ್ತಿಗಳಾದ ನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ಪೀಠ ಕೆಲ ಶರತ್ತುಗಳನ್ನ ವಿಧಿಸಿದೆ.
“ಜೊತೆಜೊತೆಯಲಿ” ಧಾರಾವಾಹಿಯಿಂದ ಅನಿರುದ್ಧ ಔಟ್ ..? ಕಾರಣ ಬಿಗ್ ಬಾಸ್ ..!
ಇನ್ನೂ ಇತ್ತೀಚೆಗೆ ಸಂಜನಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವೇಳೆ ಸಂಜನಾ ಗಲ್ರಾನಿಗೆ ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವಿದೆ ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಹೈಕೋರ್ಟ್‌ಗೆ ವರದಿ ನೀಡಿದ್ದರು. ಇದರ ಆಧಾರದ ಮೇಲೆ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಇನ್ನೂ ಸಂಜನಾ ಗಲ್ರಾನಿ ಅರೆಸ್ಟ್ ಆದ ಟೈಮ್ ನಲ್ಲೇ ತುಪ್ಪದ ಬೆಡಗಿ ರಾಗಿಣಿ ಸಹ ಬಂಧನವಾಗಿದ್ದರು. ಇಬ್ಬರು ಸೆಪ್ಟೆಂಬರ್ ನಿಂದಲೂ ಪರಪ್ಪನ ಅಗ್ರಹಾರದಲ್ಲೇ ಕಂಬಿ ಎಣಿಸುತ್ತಿದ್ದರು. ರಾಗಿಣಿ ಬೇಲ್ ಗೆ ಪ್ರಯತ್ನ ಮಾಡುತ್ತಲೇ ಇದ್ದು, ಈವರೆಗೂ ಜಾಮೀನು ಸಿಕ್ಕಿಲ್ಲ. ಸಂಜನಾಗೆ ಈಗಾಗಲೇ ಬೇಲ್ ಮಂಜೂರಾಗಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಗಲ್ರಾನಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








