ಬದುಕಿದ್ದಾಗ ಮಾತಾಡಿದ್ರೆ ಗಂಡಸ್ತನ : ಕಿಚ್ಚ ವಾರ್ನಿಂಗ್
ಚಂದನವನದ ಯಜಮಾನ, ಸಾಹನ ಸಿಂಹ ವಿಷ್ಟುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ನಾಲಿಗೆ ಹರಿಬಿಟ್ಟಿದ್ದು, ಇದೀಗ ಸ್ಯಾಂಡಲ್ ವುಡ್ ನಟರು ಸೇರಿದಂತೆ ವಿಷ್ಣುದಾದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ರಂಗರಾಜು ಹೇಳಿಕೆ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ನಟನಾಗಿ, ಅದಕ್ಕಿಂತು ಮುಖ್ಯವಾಗಿವಿಷ್ಣು ಸರ್ ಅಭಿಮಾನಿಯಾಗಿ ಮಾತನಾಡುತ್ತಿದ್ದೇನೆ. ವಿಜಯ್ ರಂಗರಾಜು ಅವರೇ ಒಬ್ಬ ವ್ಯಕ್ತಿಯ ಬಗ್ಗೆ ಏನ್ ಮಾತನಾಡಬೇಕು ಅನ್ನೋದು ನಿಮಗೆ ಬಿಟ್ಟಿದ್ದು.
ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ರೆ ಗಂಡಸ್ತನ ಇರತ್ತೆ ಎಂಬ ನಂಬಿಕೆ ಇದೆ. ಅವರು ನಿಧನರಾದ ಮೇಲೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಕೋಟ್ಯಾಂತರ ಮಂದಿ ಆರಾಧ್ಯ ದೇವರಾದಂತಹವಿಷ್ಣು ಸರ್ ಬಗ್ಗೆ ನೀವು ಈ ರೀತಿ ಮಾತನಾಡೋದು ತುಂಬಾ ದೊಡ್ಡ ತಪ್ಪು. ಎಂದು ತೆಲುಗು ನಟನ ಮೇಲೆ ಕಿಚ್ಚ ಗರಂ ಆಗಿದ್ದಾರೆ.
ಬದುಕಿದ್ದಾಗ ಮಾತಾಡಿದ್ರೆ ಗಂಡಸ್ತನ : ತೆಲುಗು ನಟನಿಗೆ ಕಿಚ್ಚ ವಾರ್ನಿಂಗ್
‘ದಾದ’ನ ಬಗ್ಗೆ ಮಾತನಾಡಿದ ತೆಲುಗು ನಟನಿಗೆ ವಾರ್ನಿಂಗ್ ಕೊಟ್ಟ ಪವರ್ ಸ್ಟಾರ್..!
ಸಾಹನ ಸಿಂಹ ವಿಷ್ಟುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ಹೇಳಿಕೆ ಹಿನ್ನೆಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಟ್ವೀಟ್ ಮೂಲಕ ಕಿಡಿಕಾರಿದ್ದು, ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಯಬೇಕು.
“ಮೊದಲು ಮಾನವನಾಗು” ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ತೋರುವುದು ಯಾವುದೇ ಭಾಷೆಯ ನಟರಾದರು ಗೌರವ ಮೊದಲು ಅಂತ ಬರೆದುಕೊಂಡಿದ್ದಾರೆ.
ಅಯ್ಯೋ ಮದುವೆಯಾಗಿ ತಪ್ಪು ಮಾಡಿದೆ… ನಾನು ದಿವಾಳೆಯಾದೆ : ರಾಖಿ ಸಾವಂತ್
ಅಯ್ಯೋ ಮದುವೆಯಾಗಿ ತಪ್ಪು ಮಾಡಿದೆ… ನಾನು ದಿವಾಳೆಯಾದೆ : ರಾಖಿ ಸಾವಂತ್
ಮದುವೆಯಾದ ನಂತರದ ದುರಾದೃಷ್ಟಕರ ಬದುಕಿನ ಬಗ್ಗೆ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ನಾನು ಮದುವೆಯಾಗಿ ತಪ್ಪು ಮಾಡಿಬಿಟ್ಟೆ. ತಪ್ಪಿನ ಪ್ರತಿಫಲವನ್ನ ಈಗ ಅನುಭವಿಸುತ್ತಿದ್ದೇನೆ. ಶ್ರೀಮಂತ ವ್ಯಕ್ತಿಯನ್ನು ಮದುವೆಯಾದರೆ ನನ್ನ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ಕಾರಣಕ್ಕೆ ಶ್ರೀಮಂತ ವ್ಯಕ್ತಿಯನ್ನು ಮದುವೆಯಾದೆ, ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ. ಮದುವೆಯಾಗಿ ನಾನು ತಪ್ಪು ಮಾಡಿದೆ. ಆ ವ್ಯಕ್ತಿಯನ್ನು ನಾನು ಮದುವೆ ಆಗಬಾರದಿತ್ತು. ಆರ್ಥಿಕವಾಗಿಯೂ ದಿವಾಳಿಯಾಗಿದ್ದೇನೆ ಎಮದಿದ್ದಾರೆ.
‘ಡರ್ಟಿ ಪಿಕ್ಚರ್’ ಖ್ಯಾತಿಯ ಆರ್ಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..!
‘ಡರ್ಟಿ ಪಿಕ್ಚರ್’ ಖ್ಯಾತಿಯ ಆರ್ಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..!
ಬಾಲಿವುಡ್ ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಮೂಲತಹ ಬೆಂಗಾಲಿ ನಟಿಯಾಗಿದ್ದ ಆರ್ಯ ಬ್ಯಾನರ್ಜಿ ಇದೀಗ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಡರ್ಟಿ ಪಿಚ್ಚರ್ ಖ್ಯಾತಿಯ 33 ವರ್ಷದ ನಟಿಯ ಮೃತ ದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಆರ್ಯ ಮನೆಗೆ ಬಂದ ಕೆಲಸದವರು ಎಷ್ಟೇ ಕೂಗಿದರೂ ಬಾಗಿಲು ತೆರೆಯದ ಹಿನ್ನೆಲೆ ಈ ಬಗ್ಗೆ , ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಬಾಗಿಲು ಹೊಡೆದಾಗ ಆಕೆ ಮೃತಪಟ್ಟಿರೋದು ತಿಳಿದುಬಂದಿದೆ.
ಭೋಜ್ ಪುರಿಯಲ್ಲಿ ‘ಹರ್ಷಿಕಾ’ : ಟ್ವೀಟ್ ನಲ್ಲಿ ಪೂಣಚ್ಚ ಕೇಳಿಕೊಂಡಿದ್ದೇನು..!
ಭೋಜ್ ಪುರಿಯಲ್ಲಿ ‘B3’ ಹುಡುಗಿ ‘ಹರ್ಷಿಕಾ’..!
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಇದೀಗ ಭೋಜ್ ಪುರಿಯತ್ತ ಮುಖ ಮಾಡಿದ್ದಾರೆ. ಹೌದು ಭೋಜ್‌ಪುರಿ ಸೂಪರ್ ಸ್ಟಾರ್ ಪವನ್ ಸಿಂಗ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಮಾಹಿತಿ ನೀಡಿರುವ ಹರ್ಷಿಕಾ ನಿಮ್ಮ ಆಶೀರ್ವಾದದ ಬೇಕೆಂದು ಕೇಳಿಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ ಭೋಜ್‌ಪುರಿ ನಟ ಪವನ್ ಸಿಂಗ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿ ”ಭೋಜ್‌ಪುರಿ ಸಿನಿಮಾ ಆರಂಭಿಸುತ್ತಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ಬೇಕು” ಎಂದಿದ್ದಾರೆ. ಹರ್ಷಿಕಾ ಪೂಣಚ್ಚಗೆ ಅಭಿಮಾನಿಗಳು ಶುಭ ಹಾರೈಸ್ತಿದ್ದಾರೆ.
ಹುಟ್ಟೂರಿನಲ್ಲಿ ಅರಳಿದ ‘ಬಸ್ರೂರು’ ಕನಸು..!
ನಟ , ನಿರ್ದೇಶಕ, ಸಂಭಾಷಣಾಕಾರ,ನಿರ್ಮಾಪಕ ಮತ್ತು ಗೀತರಚನಾಕಾರ ರವಿ ಬಸ್ರೂರು ಅವರು ತಾವು ಹುಟ್ಟಿ ಬೆಳೆದ ಊರಿನಲ್ಲಿ ತಮ್ಮ ಕನಸಿನಂತೆ ಸುಸಜ್ಜಿತ ಮ್ಯೂಸಿಕ್ ಸ್ಟುಡಿಯೋ ನಿರ್ಮಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಹಳ್ಳಿಯಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ಮೇಲೆ ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಹೋಗೋದು ಬೇಡ ಬದಲಾಗಿ ಸೌಥ್ ಸ್ಟಾರ್ ಗಳೆಲ್ಲಾ ಬಸ್ರೂರಿಗೆ ಬರುತ್ತಾರೆ.
ಕುಂದಾಪುರದ ಬಸ್ರೂರಿನಲ್ಲಿ ಜನಿಸಿದ ರವಿ ಬಸ್ರೂರು ಅವರು ಎಲ್ಲರಂತೆಯೇ ಕನ್ನ ಕನಸ ಬೆನ್ನಟ್ಟಿ ಪಟ್ಟಣಕ್ಕೆ ಹೊರಟರು. ಆದರೆ ಹಳ್ಳಿ ಮರೆಯಲಿಲ್ಲ. ತನ್ನವರನ್ನ, ತಾನು ಹುಟ್ಟಿಬೆಳೆದ ಜಾಗವನ್ನ ಮರೆಯಲಿಲ್ಲ. ಈಗ ಬಸ್ರೂರಿನಲ್ಲಿ ಹೈಟೆಕ್ ಸ್ಟುಡಿಯೋ ನಿರ್ಮಾಣ ಮಾಡಿ ಜನಮನ ಗೆದ್ದಿದ್ದಾರೆ. ಇವರ ಈ ಹೊಸ ಮ್ಯೂಸಿಕ್ ಆ್ಯಂಡ್ ಮೂವೀಸ್ ಸ್ಟುಡಿಯೋದಲ್ಲಿ ಸಂಗೀತ, ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮಾಡಲಾಗುತ್ತದೆ. ಕೆ.ಜಿ.ಎಫ್ ಸೇರಿ ಕನ್ನಡ ,ತೆಲುಗು, ಮಲಯಾಳಂ ಸೂಪರ್ ಸ್ಟಾರ್ ಗಳ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗ ಕುಂದಾಪುರದ ಬಸ್ರೂರಲ್ಲೇ ಭರದಿಂದ ಸಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








