ಡಿಜೆ ಹಳ್ಳಿ ಮತ್ತು ಕೆ ಜಿ ಹಳ್ಳಿಯಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಒಟ್ಟು 150 ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಮೂವರು ಹತರಾಗಿದ್ದು, ಗುಂಡೇಟು ತಿಂದ ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ. ಇತ್ತ ಗೋಲಿಬಾರ್ ವೇಳೆ ಗುಂಡೇಟು ತಿಂದು ನಾಪತ್ತೆಯಾಗಿದ್ದ ಓರ್ವನನ್ನು ಪೊಲೀಸರು ಪತ್ತೆಹಚ್ಚಿದ್ದು, ಆತನನ್ನೂ ಸಹ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ
ರಾಜ್ಯ ರಾಜಕಾರಣದ ವಾಕ್ಸಮರ ಈಗ ಅತಿರೇಕಕ್ಕೆ ತಲುಪಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಅಬ್ಬರಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಕಲ್ಬುರ್ಗಿಯಲ್ಲಿ ಅತ್ಯಂತ ಕಟು...








