ಭಾರತೀಯ ಸೇನೆಯಲ್ಲಿ ಇದೀಗ ಮಹಿಳೆಯರಿಗೆ ಅಗ್ನಿವೀರ್ ಆಗುವ ಸುವರ್ಣಾವಕಾಶ …!
ಇತ್ತೀಚಿಗೆ ಭಾರತ ಸರಕಾರ ಜಾರಿ ತಂದಿರುವ ಅಗ್ನಿಪಥ್ (Agnipat) ಯೋಜನೆಯಡಿ ಇದೀಗ ದೇಶದ ಮಹಿಳೆಯರು ಕೂಡ ಅಗ್ನಿವೀರರಾಗಿ ಭಾರತೀಯ ಸೇನೆಯಲ್ಲಿ(Indianarmy) ಸೇವೆ ಮಾಡುವ ಅವಕಾಶ ನೀಡಲಾಗಿದೆ. ಇದರ ಅನುಸಾರ ಮಹಿಳಾ ಸೇನಾ ಪೊಲೀಸ್ ಆಗಿ ಸೇವೆ ಮಾಡಬಹುದಾಗಿದೆ. ಈ ಮೇಲಿನ ಹುದ್ದೆಗಳಿಗೆ ಆಗಸ್ಟ್ 9 ರಿಂದ ಸೆಪ್ಟೆಂಬರ್ 7 ರ ತನಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ಹದಿನೇಳುವರೆ ವರ್ಷ ದಿಂದ ಇಪ್ಪಂತೊಂದು ವರ್ಷ ದವರಾಗಿದ್ದು ಹತ್ತನೇ ತರಗತಿ ಮುಗಿಸದ್ರೆ, ಮಾಹಿತಿ ಅಭಾವದಿಂದ ಅರ್ಜಿ ಸಲ್ಲಿಸದಿದ್ರೆ ಕೊಡಲೇ ಇಂಡಿಯನ್ ಆರ್ಮಿ ಅಫೀಷಿಯಲ್ ವೆಬ್ಸೈಟ್ ಮೂಲಕ ಲಾಗ್ ಇನ್ ಆಗಿ ನಿಮ್ಮ ಅರ್ಜಿಯನ್ನು ನೀಡಬಹುದಾಗಿದೆ. ನವೆಂಬರ್ 1 ರಿಂದ 3 ತನಕ ಬೆಂಗಳೂರಿನ ಮಾಣಿಕ್ಷಾ ಪೆರೇಡ್ ಮೈದಾನದಲ್ಲಿ ಭರ್ತಿ ನಡೆಯಲಿದೆ.
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ , ಕೇರಳ ಲಕ್ಷದ್ವೀಪ , ತಮಿಳುನಾಡು, ಪಾಂಡಿಚೇರಿ ಆಂಧ್ರಪ್ರದೇಶ , ತೆಲಂಗಾಣ ಮತ್ತು ಅಂಡಮಾನ್ ನಿಕೋಬಾರ್ (South Indian states) ಜನ ಅವಕಾಶವನ್ನು ಅಗ್ನಿಪಥ್ ಯೋಜನೆಯಡಿ ಸದುಪಯೋಗಪಡಿಸಬಹುದು.








