ಭೂಪಾಲ್: ನಿನ್ನೆಯಿಂದ ಮಧ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ.
ಮಧ್ಯಪ್ರದೇಶದಲ್ಲಿ ನಿಸರ್ಗ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸುರಿಯುತ್ತಿದೆ. ನಿನ್ನೆ ಸತತ ೧೦ ಗಂಟೆಗಳ ಕಾಲ ಮಳೆ ಸುರಿದಿದ್ದು, ನೂರಾರು ಜೀವಹಾನಿ ಜತೆಗೆ ೨೫ ಲಕ್ಷ ಟನ್ ಗೋದಿ ಹಾಗೂ ಇತರೆ ಬೆಳೆಗಳು ನಾಶವಾಗಿವೆ.

ಮಧ್ಯಪ್ರದೇಶದ ಶಾಜಾಪುರ ಪ್ರಾಂತ್ಯದ ೨೫ ಕೇಂದ್ರಗಳಲ್ಲಿ ಪಡಿತರ ಆಹಾರ ಸಂಗ್ರಹಿಸಿದ್ದ ಗೋಡೋನ್‌ಗಳಿಗೆ ಮಳೆ ನೀರು ನುಗ್ಗಿದೆ. ರೇಷನ್ ಅಂಗಡಿಗಳಿಗೆ ಕಳಿಸಲು ಸಂಗ್ರಹಿಸಿದ್ದ ನೂರಾರು ಟನ್ ಗೋದಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಜತೆಗೆ ಮಳೆ ನೀರಿನಲ್ಲಿ ಗೋದಿ ಮೂಟೆಗಳು ನೆನೆದು ಹೋಗಿದ್ದರಿಂದ ಅರ್ಧದಷ್ಟು ಗೋದಿ ಕೊಳೆತು ಹೋಗಿದೆ.

೩ ಸಾವಿರ ಮೆಟ್ರಿಕ್ ಟನ್‌ನಷ್ಟು ಗೋದಿಯನ್ನು ಪಡಿತರ ಕೇಂದ್ರಗಳಿಗೆ ರವಾನೆ ಮಾಡಲಾಗಿತ್ತು. ಇದರಲ್ಲಿ ಅಲ್ಪಸ್ವಲ್ಪ ನೆನೆದಿರುವ ಗೋದಿ ಚೀಲಗಳನ್ನು ಬಿಸಿಲಿಗೆ ಹಾಕಿ ಒಣಗಿಸಲು ಸೂಚಿಸಲಾಗಿದೆ ಎಂದು ಶಾಜಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಅಧಿಕಾರಿ ತಿಳಿಸಿದ್ದಾರೆ.








