ಮುಳ್ಳಿನ ಸುತ್ತಲೂ ಸುಂದರವಾಗಿ ಮಿಣುಗುವ ಪ್ರೇಮದ ಸಂಕೇತ ಗುಲಾಬಿಯ ಇಂಟ್ರೆಸ್ಟಿಂಗ್ ವಿಚಾರಗಳು..!
ಗುಲಾಬಿ… ಗುಲಾಬಿ ಅಂದ ತಕ್ಷಣ ರೆಡ್ ರೋಸ್ ವೈಟ್ ರೋಸ್, ಎಲ್ಲೋ ರೋಸ್. ಪಿಂಕ್ ರೋಸ್, ಮೆರೂನ್ ರೋಸ್ ಹೀಗೆ ನಾನಾ ತರಹದ ರೋಸ್ ಗಳು ಕಣ್ಣೆದುರಿಗೆ ಬರುತ್ತವೆ. ಹಾಗೆಯೇ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಇಷ್ಟ ಪಡುವ ಹೂವು ಕೂಡ ಈ ರೋಸ್.. ಅಂದ್ಹಾಗೆ ಅತಿ ಹೆಚ್ಚು ಇಷ್ಟ ಪಡೋದು ರೆಡ್ ರೋಸ್.. ಯಾಕಂದ್ರೆ ಈ ರೋಸ್ ಪ್ರೇಮದ ಸಂಕೇತವಂತೆ. ಪ್ರೇಮ ನಿವೇದನೆ ಇರಬಹುದು ಬೊಕ್ಕೆಯ ರೂಪೊದಲ್ಲಿ ಆಪ್ತರಿಗೆ ನೀಡಲು ರೋಸ್ ಬಳಕೆ ಕಾಮನ್. ಈ ಹೂವಿನ ಸುಗಂಧಕ್ಕೆ ಗುಲಾಬಿ ಎಲ್ಲರ ಫೇವರೇಟ್.
ಅಂದ್ಹಾಗೆ ತನ್ನ ಸೌಂದರ್ಯದಿಂದಾಗಿ ಯಾವಾಗಲೂ ಉತ್ತಮ ಮೌಲ್ಯವನ್ನು ಗಳಿಸಿಕೊಂಡೇ ಬಂದಿದೆ. ಪ್ರೇಮದ ಸಂಕೇತವಾಗಿದ್ದಕ್ಕೆ ನಾನಾ ಕಥೆಗಳಿವೆ. ಗುಲಾಭಿ ಹೂವಿನಲ್ಲಿ ಲೆಕ್ಕವಿಲ್ಲದಷ್ಟು ಪ್ರಜಾತಿಗಳಿವೆ. ಬಾಜಾ ಗುಲಾಬಿ , ಕಸ್ತೂರಿ ಗುಲಾಬಿ, ದಾಲ್ಚಿನಿ ಗುಲಾಬಿ, ಬಹುಪುಷ್ಟೀಯ ಗುಲಾಬಿ, ಸ್ಕಾಚ್ ಗುಲಾಬಿ, ಕಾಡು ಗುಲಾಬಿ, ರೂಗೋಸಾ ಗುಲಾಬಿ, ಕೆಂಪೆಲೆ ಗುಲಾಬಿ ಹೇಗಿ ಸಾಕಷ್ಟು ವಿಧದ ಗುಲಾಬಿಗಳು ಇವೆ.
ಕನ್ನಡದಲ್ಲಿ ಗುಲಾಬಿ ಅಂದ್ರೆ, ಇಂಗ್ಲಿಷ್ ನಲ್ಲಿ ರೋಸ್, ಹಿಂದಿಯಲ್ಲಿ ಗುಲಾಬ್, ಲ್ಯಾಟೀನ್ ರೋಸಾ, ಗ್ರೀಕ್ ನಲ್ಲಿ ರೋಡಿಯಾನ್ ಎಂದು ಕರೆಯಾಗುತ್ತೆ.
ರೋಸ್ ರೋಸೇಸಿ ಎಂಬ ವಂಶಕ್ಕೆ ಸೇರಿದ್ದಾಗಿದೆ. ಇದೊಂದು ಧೀರ್ಗಕಾಲಿಕ ಹೂವಿನ ಪೊದೆಸಸ್ಯ. 100 ಕ್ಕೂ ಜಾತಿಯ ಗುಲಾಬಿ ಹೂಗಳಿವೆ. ಇವುಗಳಲ್ಲಿ ಬಹುತೇಕ ಸಸ್ಯಗಳು ಏಷ್ಯಾಕ್ಕೆ ಸೇರಿದ್ದರೆ, ಅಲ್ಪ ಸಂಖ್ಯೆಯ ಜಾತಿಗಳು ಯುರೋಪ್, ಉತ್ತರ ಅಮೆರಿಕಾ ಮತ್ತು ವಾಯವ್ಯ ಆಫ್ರಿಕಾದ ಮೂಲದವಾಗಿವೆ. ವಿಶ್ವಾದ್ಯಂತದ ವಿವಿಧ ಭಾಗಗಳಿಂದ ಬರುವ ಗುಲಾಬಿ ಜಾತಿಗಳು ಸುಲಭವಾಗಿ ಸಂಕರೀಕೃತಗೊಂಡು, ಉದ್ಯಾನದ ವೈವಿಧ್ಯಮಯ ಗುಲಾಬಿಗಳಾಗಿ ಹೊರಹೊಮ್ಮಿವೆ. ರೋಸ್ ಎಂಬ ಹೆಸರು ಫ್ರೆಂಚ್ಮೂಲದಿಂದ ಬಂದಿದೆ. 
ಗುಲಾಬಿಯ ಕಾಂಡವೊಂದರಾದ್ಯಂತ ಕಂಡುಬರುವ ಚೂಪಾದ ರಚನೆಗಳನ್ನು ಸಾಮಾನ್ಯವಾಗಿ “ಮುಳ್ಳುಗಳು” ಎಂದು ಕರೆಯಲಾಗುತ್ತದೆ. ಆದರೆ ಅವು ವಾಸ್ತವವಾಗಿ ಹೊರತೊಗಟೆಯ ಹೊರಬೆಳವಣಿಗೆಗಳು. ಗುಲಾಬಿಯ ಮುಳ್ಳುಗಂತಿಗಳು ವಿಶಿಷ್ಟವಾದ ಕುಡುಗೋಲಿನಾಕಾರದ ಕೊಕ್ಕೆಗಳನ್ನು ಹೊಂದಿದ್ದು, ಗುಲಾಬಿಯು ಬೆಳೆಯುವಾಗ ಮತ್ತೊಂದು ಸಸ್ಯ ಅಥವಾ ಮರವನ್ನು ಅವಲಂಬಿಸುವಲ್ಲಿ ಅವು ನೆರವಾಗುತ್ತವೆ.
ಮನೆ ಬಾಗಿಲಿಗೆ ಮದುವೆ ಊಟ – ಮದುವೆ ಸಂಭ್ರಮದ ಹೊಸ ಪ್ರವೃತ್ತಿ
ಇನ್ನೂ ಗುಲಾಬಿಯನ್ನ ಮುಡಿಯಲು, ಅಲಂಕಾರಕ್ಕೆ, ಪೂಜೆಗೆ , ಇಷ್ಟಕ್ಕೆ ಮಾತ್ರವೇ ಬಳಸುವುದಿಲ್ಲ. ಗುಲಾಬಿಯನ್ನ ತಿನ್ನುವುದರಿಂದ ಹಿಡಿದು, ತ್ವಚೆಯ ಕಾಂತಿಗೆ ಬಳಕೆ ಸೇರಿ ನಾನಾ ಉಪಯೋಗಗಳು ಹಾಗೂ ಆಹಾರ ಪ್ರಯೋಜನಗಳಿವೆ.
ಆಹಾರ ಪಾರ್ಥಗಳು : ಮುಖ್ಯವಾಗಿ ರುಚಿಕರ ಗುಲ್ಕನ್ ಗೆ ಮೂಲ ಮುಖ್ಯವಾಗಿ ಬಳಸುವುದು ಗುಲಾಬಿ ಎಲೆಗಳನ್ನ. ಅದ್ರಲ್ಲೂ ಕೆಂಪು ಗುಲಾಬಿಯನ್ನ ಗುಲ್ಕನ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತೆ. ಇನ್ನೂ ಗುಲಾಬಿ ಹೂವಿನಿಂದ ಹಲವು ಬಗೆಯ ಖಾದ್ಯಗಳನ್ನ ತಯಾರಿಸಲಾಗುತ್ತೆ.
ಆರೋಗ್ಯ ಪ್ರಯೋಜನಗಳು
ಅಲ್ಸರ್ ನಿವಾರಣೆ: ಹೊಟ್ಟೆ ಉರಿಯುತ್ತಿದ್ದರೆ, ಅಲ್ಸರ್ ಸಮಸ್ಯೆಯಿದ್ದರೆ ಗುಲಾಬಿ ಸೇವನೆಯಿಂದ ಗುಣವಾಗುತ್ತದೆ. ಈ ಹೂವಿನ ಎಸಳುಗಳ ಕಷಾಯ ಮಾಡಿ ಕುಡಿದರೆ ಅಲ್ಸರ್ ನಿವಾರಣೆ ಆಗುತ್ತೆ.
ನಿರ್ಜೀವ ಚರ್ಮದಿಂದ ಮುಕ್ತಿ : ನಿರ್ಜೀವ ಚರ್ಮ ಉದುರಿ ಮುಖದ ಕಾಂತಿ ಮತ್ತೆ ಮರಳಲು ಗುಲಾಬಿ ಸಹಾಯ ಮಾಡುತ್ತೆ.
ಮಲಬದ್ಧತೆ ನಿವಾರಣೆ: ಗುಲಾಬಿ ಹೂವಿನ ರಸದ ಜೊತೆ ತುಪ್ಪ ಸೇರಿಸಿ ತಿನ್ನುವುದರಿಂದ ಮಲಬದ್ಧತೆ ನಿಲ್ಲುತ್ತದೆ.
ಉಪಯೋಗಗಳು
ರೋಸ್ ವಾಟರ್ : ಗುಲಾಬಿ ಎಸಳಿನಿಂದ ತಯಾರಾಗುವ ರೋಸ್ ವಾಟರ್ ರ್ವಚೆ ಕಾಂತಿ ಹಾಗೂ ಕೋಮಲತೆಯನ್ನ ಕಾಪಾಡುತ್ತೆ. ಸ್ನಾನದ ವೇಳೆ ಗುಲಾಬಿ ಎಸಳುಗಳನ್ನ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ಸುಗಂಧದದ ಜೊತೆಗೆ ಸ್ಕನ್ ಗ್ಲೋ ಸಹ ಬರುತ್ತದೆ.
ಸುಗಂಧ ದ್ರವ್ಯ: ಗುಲಾಬಿ ಸುಗಂಧ ಅತ್ಯದ್ಭುತ. ಈ ಹೂವುಗಳನ್ನ ಹೆಚ್ಚಾಗಿ ಸುಗಂಧದ್ರವ್ಯಗಳಲ್ಲಿ ಬಳಕೆ ಮಾಡಲಾಗುತ್ತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








