ರಾಜವೈಭೋಗ ತೊರೆದು ಸಾಮಾನ್ಯ ಜೀವನ ನಡೆಸಲು ಸಿದ್ಧರಾಗಿರುವ ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅಧಿಕೃತವಾಗಿ ಮಾರ್ಚ್ 31ರಂದು ರಾಜಮನೆತನದ ಕರ್ತವ್ಯಗಳಿಂದ ಹೊರಬರಲಿದ್ದಾರೆ. ದಂಪತಿಯ ಅಧಿಕೃತ ಕಚೇರಿ ಈ ಕುರಿತು ಪ್ರಕಟನೆ ಹೊರಡಿಸಿದೆ.
ಸಸೆಕ್ಸ್ ರಾಜ್ಯದ ರಾಜಕುಮಾರ ಮತ್ತು ರಾಜಕುಮಾರಿಯಾಗಿರುವ ಹ್ಯಾರಿ ಮತ್ತು ಮೇಘನ್, ಕಳೆದ ವರ್ಷ ರಾಜವೈಭೋಗ ತೊರೆದು ಸಾಮಾನ್ಯ ಜೀವನ ನಡೆಸುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದರು. ತಮ್ಮ ಹೆಸರಿನ ಜೊತೆ ಇರುವ ಸಸ್ಸೆಕ್ಸ್ ರಾಯಲ್ ಎಂಬ ಪದನಾಮವನ್ನು ಹೊಂದಿರುವ ಬಗ್ಗೆ ಇಂಗ್ಲೆಂಡಿನ ಬಕಿಂಗ್ ಹ್ಯಾಂ ಪ್ಯಾಲೆಸ್ ನಲ್ಲಿ ಪರಾಮರ್ಶೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಪದನಾಮ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ 1ರಿಂದ ಹ್ಯಾರಿ ದಂಪತಿಗಳಿಗೆ ರಾಜಮನೆತನದ ಯಾವುದೇ ಅಧಿಕೃತ ಮಾನ್ಯತೆ ನೀಡುವುದಿಲ್ಲ ಎಂದು ಬಕಿಂಗ್ ಹ್ಯಾಮ್ ಅರಮನೆಯ ವಕ್ತಾರರು ತಿಳಿಸಿದ್ದಾರೆ.
ಈ ದಂಪತಿಗಳು ಇನ್ನು ಮುಂದೆ ಸಾರ್ವಜನಿಕ ಹಣವನ್ನು ಬಳಸುವಂತಿಲ್ಲ ಮತ್ತು ಹೆಸರಿನ ಮುಂದೆ ಹಿಸ್ ರಾಯಲ್ ಹೈನೆಸ್ ಮತ್ತು ಹರ್ ರಾಯಲ್ ಹೈನೆಸ್ ಎಂಬ ಬಿರುದು ಬಳಸುವಂತಿಲ್ಲ.
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...