ರಾಜ್ಯದಲ್ಲಿ ಹೆಚ್ಚಾಯ್ತು ಡೆಂಘಿ , ಚಿಕನ್ ಗುನ್ಯ ಪ್ರಕರಣಗಳು..!
ಒಂದೆಡೆ ಕೊರೊನಾ ಆರ್ಭಟ , ಡೆಲ್ಟಾ ಆತಂಕ , 3ನೇ ಅಲೆ ಭೀತಿ , ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಅಟ್ಟಹಾಸ, ನಿಫಾ ಭೀತಿಯಿಂದ ಕರ್ನಾಟಕದಲ್ಲಿ ಜನರು ಭಯದಲ್ಲಿಯೇ ಬದುಕುತ್ತಿರೋವಾಗ್ಲೇ ಮತ್ತೊಂದು ಆಘಾತಕಾರಿ ವಿಚಾರ ಗೊತ್ತಾಗಿದೆ. ರಾಜ್ಯದಲ್ಲಿ ಡೆಂಗ್ಯೂ , ಚಿಕನ್ ಗುನ್ಯೂ ಕೇಸಸ್ ಹೆಚ್ಚಾಗ್ತಿದೆ. ಹೌದು ರಾಜ್ಯದಲ್ಲಿ ಕಳೆದೊಂದು ತಿಂಗಳಲ್ಲಿ 893 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 446 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ ಒಟ್ಟು ಡೆಂಘಿ ಪ್ರಕರಣಗಳ ಸಂಖ್ಯೆ 2736 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ 293, ಕಲಬುರಗಿಯಲ್ಲಿ 280, ಶಿವಮೊಗ್ಗದಲ್ಲಿ 202, ದಕ್ಷಿಣ ಕನ್ನಡದಲ್ಲಿ 178, ಕೊಪ್ಪಳದಲ್ಲಿ 150, ಹಾವೇರಿಯಲ್ಲಿ 100, ದಾವಣಗೆರೆಯಲ್ಲಿ 120, ಬಳ್ಳಾರಿಯಲ್ಲಿ 113 ಕೇಸ್ ಗಳು ದಾಖಲಾಗಿವೆ. ಇತ್ತ ಚಿಕನ್ ಗುನ್ಯ ಆತಂಕ ಕೂಡ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 51 , ಕೋಲಾರದಲ್ಲಿ 106, ಶಿವಮೊಗ್ಗದಲ್ಲಿ 121, ತುಮಕೂರಿನಲ್ಲಿ 68, ವಿಜಯಪುರದಲ್ಲಿ 66, ಯಾದಗಿರಿಯಲ್ಲಿ 51, ಪ್ರಕರಣಗಳು ದಾಖಲಾಗಿದೆ.