ಕೊರೊನಾ ಮಧ್ಯೆ ರಾಜ್ಯದಲ್ಲಿ ಗಣೇಶ ಹಬ್ಬ ಆಚರಣೆ

1 min read

ಕೊರೊನಾ ಮಧ್ಯೆ ರಾಜ್ಯದಲ್ಲಿ ಗಣೇಶ ಹಬ್ಬ ಆಚರಣೆ Ganesha festival saaksha tv

ಬೆಂಗಳೂರು : ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಕೊರೊನಾ ವೈರಸ್ ನ ಕಾಟದ ಮಧ್ಯೆಯೂ ಒಂದಿಷ್ಟು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ರಾಜ್ಯದಲ್ಲಿ ಗಣೇಶ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಕಳೆದ ವರ್ಷ ಕೊರೊನಾದಿಂದಾಗಿ ಸಾರ್ವಜನಿಕವಾಗಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಿರಲಿಲ್ಲ.

ಆದ್ರೆ ಈ ಬಾರಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಪಾಸಿಟಿವಿಟಿ ದರ ಶೇಕಡಾ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಗಣೇಶೋತ್ಸವ ಆಚರಿಸಲು ಸರ್ಕಾರ ಅನುಮತಿ ನೀಡಿದೆ.

Ganesha festival saaksha tv

ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರು ಬೆನಕನ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಕೆಲವು ಭಾಗಗಳಲ್ಲಿ ಈಗಾಗಲೇ ಗಣಪನ ಪ್ರತಿಷ್ಠಾಪನೆ ನಡೆದಿದೆ. ಇನ್ನು ಹಲವು ಕಡೆ ಗಣೇಶ ಪ್ರತಿಷ್ಟಾಪನೆಗೆ ತಯಾರಿ ನಡೆಯುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd