ADVERTISEMENT
Tuesday, September 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

admin by admin
June 13, 2026
in Newsbeat, Sports, ಕ್ರೀಡೆ
What are the special features of the Adidas Trionda ball for the 2026 FIFA World Cup?

Share on FacebookShare on TwitterShare on WhatsappShare on Telegram

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

Related posts

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

September 22, 2026
ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

ಫಿಫಾ ವಿಶ್ವಕಪ್.. ಇದು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಕಾಲ್ಚೆಂಡಿನ ಮಹಾಕುಂಭಮೇಳ. ವಿಶ್ವ ಕ್ರೀಡಾಲೋಕದಲ್ಲಿ ಕಣ್ಮನ ಸೆಳೆಯುವ ಆತ್ಯಾಧುನಿಕ ಮಾದರಿಯ ಐತಿಹಾಸಿಕ ಕ್ರೀಡಾಜಾತ್ರೆ. 48 ರಾಷ್ಟ್ರಗಳ ನಡುವೆ ನಡೆಯುವ 104 ಪಂದ್ಯಗಳ ಮಹೊನ್ನತ ಸ್ಪರ್ಧೆ. ನವ ರಸಗಳ ಶೃಂಗಾರ ಕಾವ್ಯದಂತೆ ತುದಿಗಾಲಿನಲ್ಲಿ ನಿಂತು ರೋಮಾಂಚನಗೊಳಿಸುವ ತಾಕತ್ತು ಈ ಪಂದ್ಯಗಳಿಗಿದೆ.

ಹೌದು, ಫುಟ್‍ಬಾಲ್ ಆಟ ಅಂದ್ರೆ ಅದು ಚಕ್ರವ್ಯೂಹದಂತೆ. ರಕ್ಷಣಾಗೋಡೆಗಳನ್ನು ಭೇದಿಸಿ ಎದುರಾಳಿಗಳ ಕೋಟೆಯನ್ನು ಧ್ವಂಸಗೊಳಿಸುವ ಪರಿಯೇ ಅತ್ಯದ್ಭುತ. ತಂಡಗಳ ರಣತಂತ್ರ. ಆಟಗಾರರ ಚಾಕಚಕ್ಯತೆ, ಶರವೇಗದಲ್ಲಿ ನಡೆಯುವ 22 ಆಟಗಾರರ ಹೋರಾಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಇನ್ನು ಬೇಟೆಗಾರರನ್ನೇ ಬೇಟೆಯಾಡುವ ರಣ ಬೇಟೆಗಾರರ ರೌದ್ರಾವತರಕ್ಕೆ ಪ್ರೇಕ್ಷಕರ ಜಯ ಘೋಷಗಳು ಭೋರ್ಗರೆಯುವ ನದಿಯಂತೆ ಕ್ರೀಡಾಂಗಣದ ಮೂಲೆ ಮೂಲೆಗಳಲ್ಲೂ ಪ್ರತಿಧ್ವನಿಸುತ್ತವೆ.

ಮಿಂಚಿನ ವೇಗ. ಚೆಂಡಿನ ಜೊತೆ ನಡೆಸುವ ಸರಸ -ವಿರಸ. ಜಾದೂಗಾರರನ್ನು ಬೆರಗುಗೊಳಿಸುವ ಚಲನವಲನ. ಆಕ್ರಮಣಕಾರಿ ಪ್ರವೃತ್ತಿ. ಸೋಲಿನ ಪರಿವೇ ಇಲ್ಲದೆ ಗೆಲುವಿನತ್ತ ಮುನ್ನುಗ್ಗುವ ಎದೆಗಾರಿಕೆ. ಬುದ್ಧಿವಂತಿಕೆಯ ನಡೆ. ಆಟದ ಕೌಶಲ್ಯಗಳ ಜೊತೆಗೆ ತಂತ್ರಜ್ಞಾನದ ಬಳಕೆ. ಹೀಗೆ ಒಬ್ಬ ಫುಟ್‍ಬಾಲ್ ಆಟಗಾರ ದೈಹಿಕ, ಮಾನಸಿಕವಾಗಿ ಬಲಿಷ್ಠವಾಗುವುದರ ಜೊತೆಗೆ ಆಟದ ಆಧುನಿಕ ಟೆಕ್ನಾಲಾಜಿಯನ್ನು ಮೈಗೂಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.

ಯಾಕಂದ್ರೆ ಇವತ್ತು ಫುಟ್‍ಬಾಲ್ ಅಂದ್ರೆ ಮಾಮೂಲಿ ಚೆಂಡು ಅಲ್ಲ. ಇದು ಕೃತಕ ಬುದ್ಧಿಮತ್ತೆ (ಎಐ) ಮತ್ತು ಸೆನ್ಸಾರ್ ತಂತ್ರಜ್ಞಾನದಿಂದ ಸಮ್ಮೀಲನಗೊಂಡಿರುವ ವಿಸ್ಮಯಕಾರಿ ಕಾಲ್ಚೆಂಡು. ಕಾಲ ಬದಲಾದಂತೆ ಆಟದ ಶೈಲಿ ಮಾತ್ರವಲ್ಲ. ಆಟದ ಪರಿಕರಗಳು ಬದಲಾಗುವುದು ಸಹಜ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಆಟದ ಜೊತೆ ಕ್ರೀಡಾಪರಿಕರಗಳು ಸಹ ಡಿಜಿಟಲೀಕರಣಗೊಂಡಿವೆ. 2022ರ ಕತಾರ್ ವಿಶ್ವಕಪ್‍ನ ಅಡಿಡಾಸ್ ಆಲ್ ರಿಹ್ಲಾ ಚೆಂಡು ಮತ್ತು 2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡುಗಳು ಹೈಟೆಕ್ ಸ್ಪರ್ಶವನ್ನು ಪಡೆದುಕೊಂಡಿವೆ.

ಅಂದ ಹಾಗೇ, 2026ರ ಫಿಫಾ ವಿಶ್ವಕಪ್ ಟೂರ್ನಿಯನ್ನು ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೊ ದೇಶಗಳು ಜಂಟಿಯಾಗಿ ಸಂಘಟಿಸುತ್ತಿವೆ. ಟೂರ್ನಿಯ ಅಧಿಕೃತ ಚೆಂಡಿನ ಹೆಸರು ಅಡಿಡಾಸ್ ಟ್ರಿಯೋಂಡಾ. ಟ್ರಿಯೋಂಡಾ ಅಂದ್ರೆ ಮೂರು ಅಲೆಗಳು ಎಂಬ ಅರ್ಥ ಬರುತ್ತದೆ. ಅಮೆರಿಕಾ, ಮೆಕ್ಸಿಕೋ ಮತ್ತು ಕೆನಡಾ ದೇಶಗಳ ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳನ್ನು ಈ ಚೆಂಡಿನ ಮೇಲೆ ಕಾಣಬಹುದು. ಹಾಗೇ ಅಮೆರಿಕಾದ ನಕ್ಷತ್ರ, ಕೆನಡಾದ ಮೇಪಲ್ ಎಲೆ ಮತ್ತು ಮೆಕ್ಸಿಕೋ ಹದ್ದಿನ ಚಿಹ್ನೆಗಳಿವೆ. ನಾಲ್ಕು ಪ್ಯಾನಲ್‍ಗಳಲ್ಲಿ ವಿನ್ಯಾಸಗೊಂಡಿರುವ ಈ ಚೆಂಡಿನ ವಿಶೇಷತೆ. ಅಲ್ಲದೆ ಇದು ಸ್ಥಿರವಾಗಿ ಮತ್ತು ನೇರವಾಗಿ ಚಲಿಸಲು ಸಹಾಯ ಮಾಡುತ್ತದೆ.

2022ರ ಕನೆಕ್ಟೆಡ್ ಬಾಲ್ ಟೆಕ್ನಾಲಾಜಿಯಂತೆ ಅಡಿಡಾಸ್ ಟ್ರಿಯೋಂಡಾ ಚೆಂಡಿನೊಳಗೆ 500 ಎಚ್ ಝೆಡ್ ಮೋಷನ್ ಸೆನ್ಸಾರ್ ಚಿಪ್ ಇದೆ. ಇದು ಒಂದು ಸೆಕೆಂಡಿಗೆ 500 ಬಾರಿ ಚೆಂಡಿನ ಚಲನೆಯನ್ನು ರೆಕಾರ್ಡ್ ಮಾಡುವ ಶರವೇಗದ ಡಿಜಿಟಲ್ ಸಾಧನವಾಗಿದೆ. ಹಾಗೇ, ಇದು ಚೆಂಡಿನ ವೇಗ, ಆಟಗಾರ ಎಷ್ಟು ವೇಗವಾಗಿ ಚೆಂಡನ್ನು ಕಿಕ್ ಮಾಡುತ್ತಾನೆ, ಪ್ರತಿ ಕ್ಷಣಗಳ ಚೆಂಡಿನ ಚಲನವಲನಗಳನ್ನು ನಿಖರವಾಗಿ ಪತ್ತೆ ಮಾಡಲು ನೆರವಾಗುತ್ತದೆ. ಹಾಗೇ, ವಿಡಿಯೋ ಅಸಿಸ್ಟೆಂಟ್ ರೆಫರಿಯ ನಿರ್ಧಾರಗಳಿಗೂ ಸಹಾಯ ಮಾಡುತ್ತದೆ. ಮ್ಯಾಚ್ ರೆಫ್ರಿಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೋಚ್‍ಗಳಿಗೆ ಎಲ್ಲಿ ಎಡವಿದ್ದೇವೆ ಎಂಬುದನ್ನು ಕೂಡ ಪತ್ತೆ ಮಾಡಲು ಈ ತಂತ್ರಜ್ಞಾನದಿಂದ ಸಾಧ್ಯವಾಗುತ್ತದೆ.

ಅಂದ ಹಾಗೇ 500 ಎಚ್ ಝೆಡ್ ಮೋಷನ್ ಸೆನ್ಸಾರ್ ಚಿಪ್ ಅನ್ನು ಚೆಂಡಿನ ಮಧ್ಯ ಭಾಗದಲ್ಲಿ ಸಸ್ಪೆನ್ಷನ್ ಸಿಸ್ಟಮ್ ಬಳಸಿ ಅಳವಡಿಸಲಾಗಿದೆ. ಇದು ಮೈದಾನದಲ್ಲಿರುವ 12 ವಿಶೇಷ ಟ್ರ್ಯಾಕಿಂಗ್ ಕ್ಯಾಮೆರಾಗಳ ಜೊತೆ ಏಕಕಾಲದಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಆಟಗಾರರ ಮತ್ತು ಚೆಂಡಿನ ಚಲನವಲನಗಳನ್ನು ಎರಡು ಮೂರು ಸೆಕೆಂಡ್‍ಗಳಲ್ಲಿ ನಿರ್ಧಾರ ಮಾಡಲು ಸಾಧ್ಯವಾಗುತ್ತದೆ.

ಇನ್ನು ಈ ಚೆಂಡನ್ನು ಸ್ಮಾರ್ಟ್ ಫೋನ್‍ಗಳನ್ನು ಚಾರ್ಜ್ ಮಾಡುವಂತೆ ವೈರ್‍ಲೆಸ್ ಇಂಡಕ್ಷನ್ ತಂತ್ರಜ್ಞಾನದ ಮೂಲಕ ಜಾರ್ಜ್ ಮಾಡಲಾಗುತ್ತದೆ. ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದ್ರೆ ಸತತ 6 ಗಂಟೆಗಳ ತನಕ ಯಾವ ಸಮಸ್ಯೆಯೂ ಇರುವುದಿಲ್ಲ. ಹೀಗಾಗಿ ಪಂದ್ಯ ಮುಗಿಯುವ ತನಕ ಬ್ಯಾಟರಿ ಖಾಲಿ ಆಗುತ್ತೆ ಅನ್ನೋ ಭಯವಿರಲ್ಲ. ಇನ್ನು ಚೆಂಡನ್ನು ಬಳಸದೇ ಇದ್ರೂ ಬ್ಯಾಟರಿ ಬ್ಯಾಕ್ ಅಪ್ 18 ದಿನಗಳ ಕಾಲ ಇರುತ್ತದೆ.

ಕಾಲಚಕ್ರ ಉರುಳಿದಂತೆ ಕಾಲ್ಚೆಂಡಿನ ಕಥೆಯೂ ಬದಲಾಗಿದೆ. 96 ವರ್ಷಗಳ ಹಿಂದೆ ದನದ ಚರ್ಮದಿಂದ ತಯಾರಾದ ಒರಟು ಟಿ ಪ್ಯಾನಲ್ ಮಾದರಿಯ ಚೆಂಡಿನಿಂದ ಹಿಡಿದು ಇಂದಿನ ಅಲ್ಟ್ರಾ ಮಾರ್ಡನ್ ಡಿಜಿಟಲ್ ಚೆಂಡಿನ ತನಕ ಫಿಫಾ ವಿಶ್ವಕಪ್‍ನ ಚೆಂಡುಗಳು ಹಲವು ವಿನ್ಯಾಸ ಹಾಗೂ ತಂತ್ರಜ್ಞಾನಗಳ ಮೂಲಕ ಫುಟ್‍ಬಾಲ್ ಆಟಕ್ಕೆ ಮೆರಗು ನೀಡಿದೆ.

ಒಟ್ಟಿನಲ್ಲಿ ಫಿಫಾ ವಿಶ್ವಕಪ್ ಅಂದ್ರೆ ಬರೀ ತಂಡಗಳ ನಡುವಿನ ಸ್ಪರ್ಧೆ, ಆಟಗಾರರ ಶಕ್ತಿ – ಸಾಮಥ್ರ್ಯದ ಪರೀಕ್ಷೆಯಲ್ಲ. ಇದು ಮನುಷ್ಯನ ಬುದ್ಧಿವಂತಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಜುಗುಲ್‍ಬಂದಿ.

ಸನತ್ ರೈ

(1930ರ ಉರುಗ್ವೆ ವಿಶ್ವಕಪ್‍ನಿಂದ ಹಿಡಿದು ಇಲ್ಲಿಯ ತನಕ ಕಾಲ್ಚೆಂಡಿನಲ್ಲಿ ನಾನಾ ಬದಲಾವಣೆಗಳು ಆಗಿವೆ. ಪ್ರತಿ ಟೂರ್ನಿಗೂ ವಿಭಿನ್ನ ವಿನ್ಯಾಸದಲ್ಲಿ ಫಿಫಾ ಫುಟ್‍ಬಾಲ್ ಚೆಂಡುಗಳನ್ನು ತಯಾರು ಮಾಡಲಾಗುತ್ತಿತ್ತು. 1930ರ ದನದÀÀ ಚರ್ಮದಿಂದ ಸಿದ್ಧಗೊಂಡಿದ್ದ ಟಿ ಪ್ಯಾನಲ್ ಮಾದರಿಯ ಚೆಂಡಿನಿಂದ ಹಿಡಿದು 2018ರ ಹೈಟೆಕ್ ಚೆಂಡಿನ ತನಕ ಫಿಫಾ ವಿಶ್ವಕಪ್‍ನ ಚೆಂಡುಗಳು ಹಲವು ವಿಶೇಷತೆಗಳನ್ನು ಪಡೆದುಕೊಂಡಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ. )

ವಿಶ್ವಕಪ್ ಫುಟ್ಬಾಲ್ ಚೆಂಡಿನ ರೋಚಕ ಕಥೆ ಏನು ಗೊತ್ತಾ ?

Tags: #Adidas Trionda ball#fifaworldcup2026#footba;;#footballnews#saakshatvfifafifaworldcup
ShareTweetSendShare
Join us on:

Related Posts

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

by Shwetha
September 22, 2026
0

ಗದಗ: ಕರಾವಳಿ ಭಾಗದಲ್ಲಿ ಸಂಪುಟ ಸಭೆ ನಡೆಸಿ ಜೈಕಾರ ಹಾಕಿಸಿಕೊಳ್ಳುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಉತ್ತರ ಕರ್ನಾಟಕದ ಭಾಗದಿಂದ ಭಾರೀ ಆಘಾತ ಎದುರಾಗಿದೆ. ಗದಗ ತಾಲ್ಲೂಕನ್ನು...

ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

by Shwetha
September 22, 2026
0

ಹಾಸನ: ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಸಭೆಯಲ್ಲಿ ಅಧಿಕಾರಿಗಳಿಗೆ ಗೌರವಯುತವಾಗಿ ಏನಾದರೂ ಕೊಡುವುದು ನಿಮ್ಮ ಧರ್ಮ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಶಿವಲಿಂಗೇಗೌಡ ಅವರ ಸಂಕಷ್ಟ ಈಗ...

‘ಅಧಿಕಾರಿಗಳಿಗೆ ಗೌರವ ಕೊಡಿ, ಲಂಚ ನೀಡಬೇಡಿ’: ವೈರಲ್ ವಿಡಿಯೋ ವಿವಾದದ ಬಳಿಕ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ

‘ಅಧಿಕಾರಿಗಳಿಗೆ ಗೌರವ ಕೊಡಿ, ಲಂಚ ನೀಡಬೇಡಿ’: ವೈರಲ್ ವಿಡಿಯೋ ವಿವಾದದ ಬಳಿಕ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ

by Shwetha
September 22, 2026
0

ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಹೇಳಿಕೆಯೊಂದು ಇದೀಗ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 19ರಂದು ಸಕಲೇಶಪುರದಲ್ಲಿ ನಡೆದ...

ಶಾಲಾ ಮಕ್ಕಳಿಗೆ ಅ.3ರಿಂದ 19 ದಿನಗಳ ದಸರಾ ರಜೆ

ಶಾಲಾ ಮಕ್ಕಳಿಗೆ ಅ.3ರಿಂದ 19 ದಿನಗಳ ದಸರಾ ರಜೆ

by Shwetha
September 22, 2026
0

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ಸಾಲಿನ ದಸರಾ ರಜೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 3ರಿಂದ ಅಕ್ಟೋಬರ್ 21ರವರೆಗೆ ಒಟ್ಟು...

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

ಸರ್ಕಾರ ದಿವಾಳಿಯಾಗಿದ್ದರೆ ನನ್ನ 10 ಎಕರೆ ಜಮೀನು ತಗೊಳ್ಳಿ: ಸಚಿವ ಬಾಲಕೃಷ್ಣ ಸವಾಲಿಗೆ ಹೆಚ್ ಡಿ ರೇವಣ್ಣ ಖಡಕ್ ಪ್ರತ್ಯುತ್ತರ

by Shwetha
September 22, 2026
0

ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ನಡುವಿನ ಜಮೀನು ಜಟಾಪಟಿ ಈಗ ತಾರಕಕ್ಕೇರಿದೆ. ಸಾಲಮನ್ನಾ ಮಾಡಲು ನೆಲಮಂಗಲದಲ್ಲಿರುವ ನಿಮ್ಮ ಜಮೀನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020

  • →
  • Telegram