ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ – 3 ಸಾವು 4 ಮಂದಿ ಗಾಯ
ಡೆನ್ಮಾರ್ಕ್ ದೇಶದ ರಾಜಧಾನಿ ಕೋಪನ್‌ಹೇಗನ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಭಾನುವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ 3 ಜನರು ಸಾವನ್ನಪ್ಪಿದ್ದು, 4 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಸುದ್ದಿ ಸಂಸ್ಥೆಗಳ ವರದಿ ಪ್ರಕಾರ ಪ್ರಕರಣದಲ್ಲಿ 22 ವರ್ಷದ ಡ್ಯಾನಿಶ್ ಯುವಕನನ್ನ ಬಂಧಿಸಲಾಗಿದೆ. ಯುವಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
https://twitter.com/i/status/1543857269149995008
ಈ ಮೊದಲು ಗುಂಡಿನ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ನಂಬಲಾಗಿತ್ತು. ಪ್ರಾಥಮಿಕ ತನಿಖೆಯ ನಂತರ, ಇದು ಭಯೋತ್ಪಾದಕ ಘಟನೆ ಅಲ್ಲ. ಈ ದಾಳಿಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಒಬ್ಬರು 47 ವರ್ಷದ ರಷ್ಯಾದ ಪ್ರಜೆ. ಈ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಕೋಪನ್ ಹ್ಯಾಗನ್ ಪೊಲೀಸ್ ಕಾರ್ಯಾಚರಣೆ ಘಟಕದ ಮುಖ್ಯಸ್ಥ ಸೊರೆನ್ ಥಾಮ್ಸನ್ ಹೇಳಿದ್ದಾರೆ.
ಮಾಲ್‌ನಲ್ಲಿ ಜನಜಂಗುಳಿ ಇತ್ತು
ರಜೆ ದಿನವಾದ್ದರಿಂದ ಶಾಪಿಂಗ್ ಮಾಲ್‌ನಲ್ಲಿ ಜನಜಂಗುಳಿಯೇ ಸೇರಿತ್ತು ಈ ವೇಳೆ ಏಕಾಏಕಿ ಗುಂಡಿನ ಸದ್ದು ಹಾಗೂ ಕಿರುಚಾಟದ ಸದ್ದು ಕೇಳಿಬಂದಿದೆ. ಇದರ ನಂತರ ಕಾಲ್ತುಳಿತದಿಂದಾಗಿ ಒಂದಿಷ್ಟು ಜನರು ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 22 ವರ್ಷದ ಡ್ಯಾನಿಶ್ ಹುಡುಗನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.








