ಧೋನಿಯ ಭವಿಷ್ಯ ನಿರ್ಧಾರ ಮಾಡಲು ರಾಕೆಟ್ ವಿಜ್ಞಾನಿಗಳು ಬೇಕಾಗಿಲ್ಲ – ಬದ್ರಿನಾಥ್
ಧೋನಿ ಆಟಗಾರರನ್ನು ನಂಬುತ್ತಾರೆ.. ನಂಬದಿದ್ರೆ ಆ ದೇವರು ಕೂಡ ಸಹಾಯ ಮಾಡಲ್ಲ..!
ಧೋನಿಗೆ ಕಾಡುತ್ತಿದೆಯಾ ಬೆನ್ನು ನೋವು… ಆ ಕಾರಣದಿಂದಲೇ ಕ್ರಿಕೆಟ್‍ನಿಂದ ದೂರ ಉಳಿದ್ರಾ ?
ಧೋನಿ ಪ್ರಥಮ ದರ್ಜೆ ಕ್ರಿಕೆಟ್ ಯಾಕೆ ಆಡಿಲ್ಲ… ಟೆಸ್ಟ್ ಕ್ರಿಕೆಟ್‍ಗೆ ಧೋನಿ ಯಾಕೆ ಬೇಗನೇ ವಿದಾಯ ಹೇಳಿದ್ರು ? ಕಳೆದ ಒಂದು ವರ್ಷದಿಂದ ಧೋನಿ ಯಾಕೆ ಕ್ರಿಕೆಟ್ ಮೈದಾನದಿಂದ ದೂರವೇ ಉಳಿದಿದ್ದಾರೆ ? ಈ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಸ್. ಬದ್ರಿನಾಥ್ ಉತ್ತರ ನೀಡಿದ್ದಾರೆ. ಹೌದು, ಸಂದರ್ಶನವೊಂದರಲ್ಲಿ ಧೋನಿಯ ಆಟದ ಶೈಲಿ, ನಾಯಕತ್ವದ ಬಗ್ಗೆ ಮಾತನಾಡಿರುವ ಬದ್ರಿನಾಥ್, ಧೋನಿ ಕಳೆದ ಒಂದು ವರ್ಷದಿಂದ ಕ್ರಿಕೆಟ್‍ನಲ್ಲಿ ದೂರ ಉಳಿಯಲು ಕಾರಣ ಬೆನ್ನು ನೋವು ಅಂತ ಹೇಳಿದ್ದಾರೆ. ಇದು ವಿಕೆಟ್ ಕೀಪರ್‍ಗಳಿಗೆ ಸಹಜವಾಗಿ ನೋವು ಬರುತ್ತದೆ. ಹಾಗೇ ಧೋನಿ ಕೂಡ ದಣಿವರಿಯದೇ ಕ್ರಿಕೆಟ್ ಆಡಿದ್ದಾರೆ ಎಂದು ಅವರು ಹೇಳಿದ್ರು.
ಲಾಕ್ ಡೌನ್‍ಗಿಂತ ಮುನ್ನ ಸಿಎಸ್‍ಕೆ ತಂಡ ಐಪಿಎಲ್ ಟೂರ್ನಿಗೆ ಪೂರ್ವ ತಯಾರಿ ನಡೆಸುತ್ತಿತ್ತು. ಆಗ ಧೋನಿಯವರನ್ನು ಬದ್ರಿನಾಥ್ ತುಂಬಾ ಹತ್ತಿರದಿಂದ ನೋಡಿದ್ದಾರೆ. ಹೀಗಾಗಿ ಧೋನಿಯ ಭವಿಷ್ಯದ ಬಗ್ಗೆ ಹೇಳಿದ್ದ ಬದ್ರಿ, ಧೋನಿಯ ಭವಿಷ್ಯ ನಿರ್ಧರಿಸಲು ರಾಕೆಟ್ ವಿಜ್ಞಾನಿಯ ಅಗತ್ಯವಿಲ್ಲ. ಯಾಕಂದ್ರೆ ಧೋನಿಯ ಭವಿಷ್ಯ ಅವರ ದೇಹ ಯಾವ ರೀತಿ ಸ್ಪಂದಿಸುತ್ತದೆ ಎಂಬುದರ ಮೇಲೆ ನಿರ್ಧರವಾಗಲಿದೆ. ಇನ್ನು ಅವರು ಎಷ್ಟು ದಿನ ಕ್ರಿಕೆಟ್ ಆಡುತ್ತಾರೆ ಎಂಬುದನ್ನು ಅವರೇ ಹೇಳಬೇಕು. ಐಪಿಎಲ್ ಆಡಬೇಕಾ ?, ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಡಬೇಕಾ ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಬದ್ರಿನಾಥ್ ಹೇಳಿದ್ದಾರೆ.
ಇನ್ನು ಧೋನಿಯ ನಾಯಕತ್ವ ಮತ್ತು ಆಟಗಾರರ ಸಾಮಥ್ರ್ಯವನ್ನು ಯಾವ ರೀತಿ ಅಳೆಯುತ್ತಾರೆ ಎಂಬುದರ ಬಗ್ಗೆ ಮಾತನಾಡಿದ ಬದ್ರಿ, ಧೋನಿಗೆ ನೀವು ಉತ್ತಮ ಆಟಗಾರನಲ್ಲ ಅಂತ ಒಮ್ಮೆ ಅನ್ನಿಸಿದ್ರೆ ಆ ದೇವರು ಕೂಡ ನಿಮ್ಮ ನೆರವಿಗೆ ಬರಲು ಸಾಧ್ಯವಿಲ್ಲ. ನಾನು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದೆ. ಅದೇ ರೀತಿ ಆಟಗಾರರಿಗೆ ಧೋನಿ ಹೆಚ್ಚಿನ ಅವಕಾಶಗಳನ್ನು ನೀಡುತ್ತಾರೆ. ಅದು ಧೋನಿಯವರ ಪ್ಲಸ್ ಪಾಯಿಂಟ್ ಕೂಡ ಹೌದು. ಬದ್ರಿ ಶ್ರೇಷ್ಠ ಆಟಗಾರನಾಗಿದ್ರೆ ಆತ ತಂಡದಲ್ಲಿರುತ್ತಾನೆ. ಇಲ್ಲದಿದ್ರೆ ಇಲ್ಲ. ಅವರ ತೀರ್ಮಾನ ಸರಿಯಾಗಿದೆ ಅಂದಾಗ ಅದನ್ನೇ ಮುಂದುವರಿಸುತ್ತಾರೆ. ನೀವು ಉತ್ತಮ ಆಟಗಾರನಲ್ಲ ಧೋನಿ ಭಾವಿಸಿದ್ರೆ ದೇವರು ಕೂಡ ನೆರವು ನೀಡುವುದಿಲ್ಲ. ಯಾಕಂದ್ರೆ, ಧೋನಿ ಅವಕಾಶಗಳನ್ನು ನೀಡ್ತಾರೆ. ಆಟಗಾರರು ಅವರ ಸಾಮಥ್ರ್ಯವನ್ನು ಸಾಬೀತುಪಡಿಸಬೇಕು. ಇದು ಧೋನಿಯವರ ಮಂತ್ರವಾಗಿದೆ ಎಂದು ಬದ್ರಿನಾಥ್ ಹೇಳಿದ್ದಾರೆ.
ಬದ್ರಿನಾಥ್ ಅವರು ತಮಿಳುನಾಡು ಪರ ದೇಸಿ ಕ್ರಿಕೆಟ್ ನಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ರನ್‍ಗಳನ್ನು ದಾಖಲಿಸಿದ್ದಾರೆ. ಅದೇ ರೀತಿ ಟೀಮ್ ಇಂಡಿಯಾ ಪರನೂ ಬ್ಯಾಟ್ ಬೀಸಿದ್ದಾರೆ. ಹಾಗೇ ಐಪಿಎಲ್ ಬಗ್ಗೆ ಮಾತನಾಡಿದ್ದರು ಬದ್ರಿನಾಥ್, 2008ರಲ್ಲಿ ನಾನು ಐಪಿಎಲ್‍ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ದೆ. ಅದು ಪಂಜಾಬ್ ಕಿಂಗ್ಸ್ ಇಲೆವೆನ್ ವಿರುದ್ಧ. ಇದು ನನಗೆ ಮಹತ್ವದ್ದಾಗಿತ್ತು. ಯಾಕಂದ್ರೆ ನಾನು ಟಿ-ಟ್ವೆಂಟಿ ಆಟಗಾರ ಅಂತ ಭಾವಿಸಿರಲಿಲ್ಲ. ಈ ಅರ್ಧಶತಕದ ನಂತರ ನನ್ನಲ್ಲಿ ಆತ್ಮವಿಶ್ವಾಸವೂ ಹೆಚ್ಚಾಯ್ತು. ಇದೀಗ ನನಗೆ ಅರಿವಾಗಿದೆ ನಾನು ಚುಟುಕು ಕ್ರಿಕೆಟ್‍ನಲ್ಲಿ ಯಶ ಸಾಧಿಸಿದ್ದೇನೆ ಅಂತ. ಇದೇ ಪಂದ್ಯದಲ್ಲಿ ನನ್ನ ಆಪ್ತ ಸ್ನೇಹಿತ ಎಲ್. ಬಾಲಾಜಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದರು ಎಂದು ಬದ್ರಿನಾಥ್ ಹಳೆಯ ಪಂದ್ಯವೊಂದನ್ನು ನೆನಪು ಮಾಡಿಕೊಂಡ್ರು.