SBI ಬ್ಯಾಂಕ್ ಗೆ 1.50 ಕೋಟಿ ವಂಚಿಸಿ ಬ್ಯಾಂಕ್ ಮ್ಯಾನೇಜರ್ ಪರಾರಿ….
ಎಸ್‌ಬಿಐ ಮ್ಯಾನೇಜರ್ ಬ್ಯಾಂಕಿನ ಒಂದೂವರೆ ಕೋಟಿ ಹಣ ದುರುಪಯೋಗ ಮಾಡಿಕೊಂಡು ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳ ಪಟ್ಟಣದ ಬಜಾರ್ ಶಾಖಾ ವ್ಯವಸ್ಥಾಪಕ ಅನೂಪ್ ಪೈ ಎಂಬಾತ ಸುಮಾರು ಒಂದುವರೆ ಕೋಟಿ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಗ್ರಾಹಕರೊಂದಿಗೆ ಒಳಸಂಚು ನಡೆಸಿ ಈ ಕೃತ್ಯ ನಡೆಸಿದ್ದಾನೆಂದು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅನುಪ್ ಪೈ ಮಂಗಳೂರಿನ ಬೋಳಪು ಗುಡ್ಡೆ ಕಾವೂರು ನಿವಾಸಿ ಎಂದು ತಿಳಿದು ಬಂದಿದೆ.
2019ರಿಂದ ಏಪ್ರಿಲ್ 11ರವರೆಗೆ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನಿಯಮಬಾಹೀರವಾಗಿ ಸಸ್ಪೆನ್ಸ್ ಖಾತೆಯಿಂದ ಹಣವನ್ನ ಖಾಸಗಿ ಖಾತೆಗೆ ವರ್ಗಾಯಿಸುತ್ತಾ ಬಂದಿರುವುದು ಗೊತ್ತಾಗಿದೆ. ಆರೋಪಿ ವಾಸವಿದ್ದ ಭಟ್ಕಳ ರೈಲ್ವೆ ಸ್ಟೇಶನ್ ರೋಡ್ ಸಮೀಪದ ಬಾಡಿಗೆ ಮನೆಗೆ ಪೊಲೀಸರು ಭೇಟಿ ನೀಡಿ ಅನುಪ್ ಪೈ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.