ದೇಶದಲ್ಲಿ ಮತ್ತೆ ಒಂದೂವರೆ ಲಕ್ಷದ ಗಡಿ ದಾಟಿದ ಕೊರೊನಾ ಕೇಸ್ Covid-19
ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,61,736 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಪ್ರಕಾರ ದೇಶದಲ್ಲಿ 1,61,736 ಹೊಸ ಪ್ರಕರಣಗಳು ಪತ್ತೆಯಾಗಿದ್ದರೇ 879 ಜನರು ಮರಣ ಹೊಂದಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,36,89,453ಕ್ಕೆ ಏರಿಕೆಯಾಗಿದೆ.
ಇನ್ನು ನಿನ್ನೆ ದೇಶದಲ್ಲಿ 97,168 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ ಸೋಂಕಿನಿಂದ ಗುಣಮುಖಗೊಂಡವರ ಸಂಖ್ಯೆ 1,22,53,697 ಮತ್ತು ದೇಶದಲ್ಲಿನ್ನೂ 12,64,698 ಸಕ್ರಿಯ ಪ್ರಕರಣಗಳಿವೆ.










