1 ವರ್ಷ ಪೂರೈಸಿದ ಲಸಿಕಾ ಅಭಿಯಾನ Saaksha Tv
ನವದೆಹಲಿ: ದೇಶದಲ್ಲಿ ಕೊರೊನಾವನ್ನು ನಿಯಂತ್ರಿಸಲು, ಲಸಿಕೆ ನೀಡಲು ಪ್ರಾರಂಭಿಸಲಾಗಿತ್ತು. ಕೊರೊನಾ ಲಸಿಕೆ ಪ್ರಾರಂಭಿಸಿ ಒಂದು ವರ್ಷ ಪೂರೈಸಿದೆ #1YearOfVaccineDrive ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಟ್ವಿಟ್ವ್ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ಮೊಲನೇ ಅಲೆ ಅಪ್ಪಳಿಸಿ ಜನರು ಸಾಕಷ್ಟು ತೊಂದರೆ ಅನುಭವಿಸುವಂತೆ ಮಾಡಿತು. ಮುಂದೆ ಎರಡನೇ ಅಲೆ ಬರುತ್ತದೆ ಎಂಬ ಸುದ್ದಿ ಬರುತ್ತಿದ್ದಂತೆ ಭಾರತ ಸರಕಾರ ಕೊರೊನಾ ಲಸಿಕೆಯನ್ನು ಕಂಡು ಹಿಡಿಯಿತು. ಈಗ ಲಸಿಕೆ ಕಂಡು ಹಿಡಿದು ಒಂದು ವರ್ಷವಾಗಿದೆ, “ವಿಶ್ವದಲ್ಲೇ ಅತ್ಯಂತ ಯಶಸ್ವಿ” ವ್ಯಾಕ್ಸಿನೇಷನ್ ಅಭಿಯಾನ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.
ಕೇಂದ್ರ ಸರಕಾರ 2021 ಜನವರಿ 2 ರಂದು ಲಸಿಕೆಯನ್ನು ತುರ್ತಾಗಿ ಉಪಯೋಗಿಸಲು ಅನುಮತಿ ನೀಡಿತು. ನಂತರ ಜನವರಿ 16 ರಂದು ದೇಶಾದ್ಯಂತ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಮುಂದೆ ಫೆಬ್ರವರಿ 19ರ ವರೆಗೆ ಒಂದು ಕೋಟಿ ಲಸಿಕೆ ನೀಡಲಾಯಿತು. ನಂತರ ಎಪ್ರಿಲ್ 1ರ ವರೆಗೆ ಹತ್ತು ಕೋಟಿ ಲಸಿಕೆ ನೀಡಲಾಯಿತು. ಹಾಗೇ ಜೂನ್ 25ರ ವರೆಗೆ 25 ಕೋಟಿ, ಅಗಸ್ಟ್ 6ರ ವರೆಗೆ 50 ಕೋಟಿ, ಸೆಪ್ಟೆಂಬರ್ 13ರ ವರೆಗೆ 75 ಕೋಟಿ ಲಸಿಕೆ ನೀಡಲಾಗಿತ್ತು.
ಮುಂದೆ ಸೆಪ್ಟೆಂಬರ್ 17 ಒಂದೇ ದಿನ 2.5 ಕೋಟಿ ಲಸಿಕೆ ಹಾಕಲಾಗಿತ್ತು. ನಂತರ ಅಕ್ಟೋಬರ್ 21ರ ವರೆಗೆ 100 ಕೋಟಿ ಲಸಿಕೆ ನೀಡಿ ದಾಖಲೆ ನಿರ್ಮಾಣವಾಯಿತು. 2022 ಜನವರಿ 3 ರಂದು ಮಕ್ಕಳಿಗೂ ಕರೊನಾ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಜನವರಿ 13ರ ವರೆಗೆ 3 ಕೋಟಿ ಮಕ್ಕಳು ಲಸಿಕೆ ಪಡೆದಿದ್ದಾರೆ. ಇಲ್ಲಿವರೆಗೆ ದೇಶದಲ್ಲಿ ಭಾರತದ 156.76 ಕೋಟಿಗು ಹೆಚ್ಚು ಲಸಿಕೆ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 66 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಲಾಗಿದೆ.