ವಿಜಯಪುರ: ರಾಜ್ಯದಲ್ಲಿ ಕೊರೊನಾ ಸೊಂಕು ಹರಡುವುದನ್ನು ನಿಯಂತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 10 ಸಾವಿರ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಕೆ ಪಾಟೀಲ್, ನಾಪತ್ತೆಯಾದವರ ಬಗ್ಗೆ ಸರಕಾರ 24 ಗಂಟೆಗಳಲ್ಲಿ ಉತ್ತರಿಸಬೇಕು ಎಂದು ಸವಾಲು ಹಾಕಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಸಲಕರಣೆ ಖರೀದಿಯಲ್ಲಿ 2 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಪ್ರಸ್ತಾಪಿಸಿದ್ದಾರೆ. ಸರ್ಕಾರ ಲೆಕ್ಕ ಕೊಡುತ್ತಿಲ್ಲ, ಈಗ ಕೊರೊನಾದಲ್ಲೂ ಭ್ರಷ್ಟಾಚಾರ ಮಾಡಿದೆ. ಇದು ಬಿಜೆಪಿ ಸರ್ಕಾರದ ಸಂಸ್ಕಾರ ಎಂದು ಲೇವಡಿ ಮಾಡಿದ್ದಾರೆ.
ಹಗರಣದ ಕುರಿತು ದಾಖಲೆಗಳ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಈಗಲಾದರೂ ಈ ದಾಖಲೆಗಳ ಬಗ್ಗೆ ಲೆಕ್ಕ ಕೊಡಿ ಎಂದು ಹೆಚ್.ಕೆ ಪಾಟೀಲ್ ಆಗ್ರಹಿಸಿದರು. ಕಾಂಗ್ರೆಸ್ ಆರೋಪಗಳಿಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಯೋಗ ರಚಿಸಬೇಕು ಎಂದು ಸರ್ಕಾರವನ್ನು ಎಚ್.ಕೆ ಪಾಟೀಲ್ ಆಗ್ರಹಿಸಿದರು.
Assembly election holiday -ಸರಕಾರಿ ಮತದಾರರಿಗೆ ಕೇಂದ್ರ ಚುನಾವಣಾ ಆಯೋಗ ದಿಂದ ಸಿಹಿ ಸುದ್ದಿ
Assembly election holiday ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಮೇ.10ರಂದು ಮತದಾನ ನಡೆಯಲಿದೆ ,ಈ ಚುನಾವಣಾ ಫಲಿತಾಂಶವು ಮೇ.13ರಂದು ನಡೆಯಲಿದ್ದು. ಈ ಸಂಬಂಧ ಕೇಂದ್ರ ಚುನಾವಣಾ...