ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಯುಷ್ ಇಲಾಖೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಲು ಕೆಲವೊಂದು ಸಲಹೆ ನೀಡಿದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಸಹಾಯ ಮಾಡುತ್ತದೆ. ಈ ಸಲಹೆ ಇರುವ ಗ್ರಾಫಿಕ್ಸ್ ಪ್ಲೇಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
At 9 AM tomorrow morning, I’ll share a small video message with my fellow Indians.
कल सुबह 9 बजे देशवासियों के साथ मैं एक वीडियो संदेश साझा करूंगा।
— Narendra Modi (@narendramodi) April 2, 2020
1. ದಿನವಿಡೀ ಬಿಸಿ ನೀರು ಕುಡಿಯಿರಿ.
2. ದಿನಕ್ಕೆ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡಿ.
3. ಆಹಾರದಲ್ಲಿ ಯಥೇಚ್ಚವಾಗಿ ಅರಶಿನ, ಧನಿಯಾ, ಬೆಳ್ಳುಳ್ಳು ಬಳಸಿ.
4. ಚವನಪ್ರಾಶ ನಿತ್ಯ ಒಂದು ಚಮಚ ಸೇವಿಸಿ
5. ದಿನಕ್ಕೆರಡು ಬಾರಿ ಹರ್ಬಲ್ ಟೀ ಕುಡಿಯಿರಿ.
6. ಹಾಲಿಗೆ ಅರಿಶಿನ ಬೆರಸಿ ದಿನಕ್ಕೊಂದು ಅಥವಾ ಎರಡು ಬಾರಿ ಕುಡಿಯಿರಿ
7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನ ಹಾಕಿ ಅದರ ಗಾಳಿಯನ್ನು ತೆಗೆದುಕೊಳ್ಳಿ.
8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳುವುದು.
9. ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು. ಆಮೇಲೆ ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
10. ಲವಂಗವನ್ನು ಸಕ್ಕರೆ/ ಜೇನು ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕಫ ಕೆಮ್ಮು ಸಮಸ್ಯೆ ಇದ್ದರೆ ಇದನ್ನು ಅಭ್ಯಾಸ ಮಾಡಬೇಕು.
I urge you to have a look at the Ayush Ministry protocol, make it a part of your lives and share it with others.
Let’s keep the focus on being healthy. After all, good health is the harbinger of happiness. pic.twitter.com/fZCPFJtwi0
— Narendra Modi (@narendramodi) April 1, 2020








