ಬೆಂಗಳೂರು: ನಾಳೆಯಿಂದ ದೀಪಾವಳಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಇಂದು ಮತ್ತು ನಾಳೆ 1000 ವಿಶೇಷ ಬಸ್‍ಗಳನ್ನು ಓಡಿಸಲಾಗುತ್ತಿದೆ.
ಇಂದು ಹಾಗೂ ನಾಳೆ ರಾತ್ರಿ ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಮತ್ತು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಕ್ಕೆ ವಿಶೇಷ ಬಸ್‍ಗಳು ಸಂಚಾರ ಮಾಡಲಿವೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಬೇರೆ ಊರುಗಳಿಗೆ ಕರೆದೊಯ್ಯಲಿರುವ ಈ ವಿಶೇಷ ಬಸ್‍ಗಳು, ಮತ್ತೆ ಹಬ್ಬ ಮುಗಿಸಿ ವಾಸಪ್ ಬರುವವರನ್ನು ಹೊತ್ತು ಬೆಂಗಳೂರಿಗೆ ಹೊತ್ತು ತರಲಿವೆ. ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಬರುವವರಿಗಾಗಿಯೂ ಹೆಚ್ಚುವರಿ ಬಸ್ ಓಡಿಸಲಾಗುವುದು ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಜೆಸ್ಟಿಕ್‍ನಿಂದ ಹೊರಡುವ ಬಸ್‍ಗಳು
ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ
ಮಂಗಳೂರು, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು,
ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್,
ತಿರುಪತಿ, ಕುಂದಾಪುರ, ಶೃಂಗೇರಿ, ಹೊರನಾಡು,
ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ
ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ,
ಕುಶಾಲನಗರ ಮತ್ತು ಮಡಿಕೇರಿಗೆ ಹೆಚ್ಚುವರಿ ಬಸ್
ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣ
ತಿರುಪತಿ, ವಿಜಯವಾಡ, ಹೈದರಾಬಾದ್,
ತಿರುವನಂತಪುರ, ಕೊಟ್ಟಾಯಂ
ಕೇರಳ, ಆಂಧ್ರ ಪ್ರದೇಶ, ತೆಲಂಗಾಣಕ್ಕೆ ಸಂಚಾರ
ಕೆಎಸ್ಆರ್ಟಿಸಿ ಬಸ್‍ಗಳ ಮೂಲಕ ಪ್ರಯಾಣ ಬೆಳೆಸುವವರು ಇ-ಟಿಕೆಟ್ ಮೂಲವೂ ಬುಕಿಂಗ್ ಮಾಡಬಹುದಾಗಿದೆ. ಪ್ರಯಾಣಿಕರು ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿರುವ 706 ಬುಕಿಂಗ್ ಕೌಂಟರ್‍ಗಳ ಮೂಲಕವೂ ಮುಂಗಡವಾಗಿ ಸೀಟ್‍ಗಳನ್ನು ರಿಸರ್ವೇಶನ್ ಮಾಡಬಹುದಾಗಿದೆ.
ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇ.5ರಷ್ಟು ಡಿಸ್ಕೌಂಟ್ ನೀಡಲಾಗುವುದು. ಹೋಗುವ ಹಾಗೂ ವಾಪಸ್ ಬರಲು ಒಂದೇ ಸಮಯದಲ್ಲಿ ಸೀಟ್ ಬುಕಿಂಗ್ ಮಾಡಿದರೆ ಶೇ.10ರಷ್ಟು ಡಿಸ್ಕೌಂಟ್ ನೀಡಲಾಗುವುದು ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel