ADVERTISEMENT
Friday, April 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

admin by admin
March 9, 2026
in Newsbeat, Sports, ಕ್ರಿಕೆಟ್
team india icc t-20worldcup 2026 champions

team india icc t-20worldcup 2026 champions

Share on FacebookShare on TwitterShare on WhatsappShare on Telegram

ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ. ಇನ್ನೊಂದೆಡೆ 2026ರ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್. ಭಾನುವಾರದ ಹೈವೋಲ್ಟೇಜ್ ಮ್ಯಾಚ್‍ನಲ್ಲಿ ನ್ಯೂಜಿಲೆಂಡ್ ಆಟಗಾರರು ಚೊಚ್ಚಲ ಐಸಿಸಿ ಟಿ-20 ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ರು. ಇತ್ತ ಟೀಮ್ ಇಂಡಿಯಾ ಹುಡುಗರು ಭಾರತಾಂಬೆಯ ಮುಕುಟಕ್ಕೆ ಮೂರನೇ ಗರಿಯಾಗಿ ಐಸಿಸಿ ಟ್ರೋಫಿಯನ್ನು ಮುಡಿಸಬೇಕು ಎಂದು ಪಣತೊಟ್ಟಿದ್ದರು.

ಅದಕ್ಕೆ ತಕ್ಕಂತೆ ಗುಜರಾತ್‍ನ ನರೇಂದ್ರ ಮೋದಿ ಅಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳು ರಂಗು ರಂಗಿನ ವಿದ್ಯುತ್ ದೀಪಾಲಂಕರದಲ್ಲಿ ಜೈ ಹೋ ಇಂಡಿಯಾ ಹರ್ಷೊದ್ಗಾರದ ಮಂತ್ರ ಘೋಷ ಮೊಳಗಿಸುತ್ತಿದ್ದರು.

Related posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

April 24, 2026
150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

April 24, 2026

ಟೀಮ್ ಇಂಡಿಯಾ ಹುಡುಗರ ಭಾರತಾಂಬೆಯ ವಿಶೇಷ ಸರ್ವ ಅಲಂಕಾರ ಪೂಜೆಯನ್ನು ಕಣ್ತುಂಬಿಕೊಳ್ಳಲು 1.30 ಲಕ್ಷ ಸೇರಿದ್ರೆ, ಇತ್ತ ಕೊಟ್ಯಾಂತರ ಅಭಿಮಾನಿಗಳು ಟಿವಿ ಪರದೆಯ ಮೇಲೆ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅಷ್ಟೇ ಅಲ್ಲ ಟೀಮ್ ಇಂಡಿಯಾ ಗೆಲ್ಲಬೇಕು.. ಭಾರತಾಂಬೆಯ ಮುಕುಟದಲ್ಲಿ ಮತ್ತೊಂದು ಐಸಿಸಿ ಹೊಳೆಯಬೇಕು ಅಂತ ಸಂಕಲ್ಪ ಕೂಡ ಮಾಡಿದ್ದರು.

ಅಂದ ಹಾಗೇ, ಭಾರತಾಂಭೆಯ ವಿಶೇಷ ಸರ್ವ ಅಲಂಕಾರ ಪೂಜೆಯನ್ನು ಶುರು ಮಾಡಿದ್ದು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ. ಹಾಲಿನಂತೆ ಶುಭ್ರತೆಯಿಂದ ಅಭಿ ಬ್ಯಾಟಿಂಗ್ ಮಾಡಿದ್ರೆ, ಇತ್ತ ಸಂಜು ಒತ್ತಡದ ನಡುವೆಯೂ ಮೊಸರಿನಂತೆ ಗಟ್ಟಿಯಾಗಿ ನಿಂತು ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಇವರಿಬ್ಬರ ಬ್ಯಾಟಿಂಗ್ ಜುಗುಲ್‍ಬಂದಿ ಜೇನಿನಂತೆ ಸವಿಯಾಗಿತ್ತು. ಸಿಡಿಸುತ್ತಿದ್ದ ಬೌಂಡರಿ – ಸಿಕ್ಸರ್‍ಗಳು ತುಪ್ಪದಂತೆ ಗರಿಗರಿಯಾಗಿ ಹೊಳೆಯುತ್ತಿತ್ತು. ಸ್ಕೋರು ಬೋರ್ಡ್‍ನ ಮೊತ್ತವನ್ನು ನೋಡಿದಾಗ ಸುಗಂದ ದ್ರವ್ಯದಂತೆ ಘಮಘಮಿಸುತ್ತಿತ್ತು. ಬ್ಯಾಟ್‍ನಿಂದ ಸಿಡಿಯುತ್ತಿದ್ದ ರನ್‍ಗಳು ನೀರಿನಂತೆ ಚಿಮ್ಮುವಂತಿತ್ತು. ಹೀಗೆ ಪಂಚಾಮೃತ ಅಭಿಷೇಕ ಸೇವೆ ಮುಗಿಸಿ ಇನ್ನೇನೂ ಅಲಂಕಾರ ಮಾಡಬೇಕು ಅನ್ನುವಷ್ಟರಲ್ಲಿ ಸಂಜುವಿಗೆ ಅಭಿ ಕೈಕೊಟ್ಟು ಬಿಟ್ರು.
ನಂತರ ಸಂಜು ಜೊತೆ ಸರ್ವ ಅಲಂಕಾರಕ್ಕೆ ಕೈ ಜೋಡಿಸಿದ್ದು ಇಶಾನ್ ಕಿಶಾನ್. ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯದ ಹೊಳಪಿನಂತೆ ಸಂಜು ಬ್ಯಾಟಿಂಗ್ ಮಾಡುತ್ತಿದ್ರೆ, ಇತ್ತ ಇಶಾನ್ ಕಿಶಾನ್ ಹೂವಿನಂತೆ ರನ್ ಕಲೆ ಹಾಕಿ ಮಾಲೆಯನ್ನು ಸಿದ್ದಪಡಿಸಿದ್ರು. ಅಷ್ಟರಲ್ಲಿ ಇಶಾನ್ ಕಿಶಾನ್ ಕೂಡ ಸುಸ್ತಾಗಿಬಿಟ್ರು.
ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಹಾಗೇ ಬಂದು ನೈವದ್ಯ ಕೊಟ್ಟು ಹೊದ್ರು. ಹಾರ್ದಿಕ್ ಪಾಂಡ್ಯ ಸುಗಂಧದ ಧೂಪ ಹಚ್ಚಿ ತನ್ನ ಕೆಲಸ ಮುಗಿಸಿದ್ರು. ತೀಲಕ್ ವರ್ಮಾ ಭಾರಾಂಭೆಯ ಹಣೆಗೆ ತಿಲಕವಿಟ್ರು. ಇನ್ನು ಶಿವಂ ದುಬೆಯಂತೂ ರುದ್ರತಾಂಡವ ನೃತ್ಯಕ್ಕೆ ನ್ಯೂಜಿಲೆಂಡ್ ಆಟಗಾರರು ಲಯವನ್ನೇ ಕಳೆದುಕೊಂಡ್ರು.
ಆರ್ಶಾದೀಪ್ ಸಿಂಗ್, ಹಾರ್ದೀಕ್ ಪಾಂಡ್ಯ,, ವರುಣ್ ಚಕ್ರವರ್ತಿ, ಅಭಿಷೇಕ್ ಶರ್ಮಾ ಅವರ ಮಂತ್ರಘೋಷದಂತಹ ಎಸೆತಗಳಿಗೆ ನ್ಯೂಜಿಲೆಂಡ್ ಬ್ಯಾಟರ್‍ಗಳು ಗಲಿಬಿಲಿಗೊಂಡ್ರು. ಈ ನಡುವೆ ಅಕ್ಷರ್ ಪಟೇಲ್ ಅವರ ಪುಷ್ಪಾರ್ಚಣೆಯ ಮಂತ್ರದ ಎಸೆತಗಳು ಹಾಗೂ ಜಸ್ಪ್ರಿತ್ ಬೂಮ್ರಾ ಅವರ ಮಹಾ ಮಂಗಳಾರತಿಯ ಘಂಟಾಘೋಷಕ್ಕೆ ಭಾರತಾಂಬೆಯ ಪಾದಕ್ಕೆ ನ್ಯೂಜಿಲೆಂಡ್ ಆಟಗಾರರು ಸಾಷ್ಟಂಗ ನಮಸ್ಕಾರ ಮಾಡಿದ್ರು.

ಟೀಮ್ ಇಂಡಿಯಾದ ಅಭಿಮಾನಿಗಳ ಜೈ ಹೋ ಇಂಡಿಯಾ ಎಂಬ ಪದಗಳು ವೇದ ಘೋಷದಂತೆ ಎಲ್ಲೆಡೆ ಪ್ರತಿಧ್ವನಿಸುತ್ತಿದ್ದವು. ಇದರೊಂದಿಗೆ ಸೂರ್ಯ ಕುಮಾರ್ ಹುಡುಗರು 2026ರ ಐಸಿಸಿ ಟಿ-20 ವಿಶ್ವಕಪ್ ಟ್ರೋಫಿಯನ್ನು ಸರ್ವ ಅಲಂಕಾರೆಗೊಂಡಿರುವ ಭಾರತಾಂಬೆಯ ಮುಕುಟಕ್ಕೆ ಗರಿಯಾಗಿಸಿ ಸಂಪನ್ನಗೊಳಿಸಿದ್ರು.

Tags: #gouthamgambhir#icct-20worldcup#icct-20worldcup 2026#saakshatvsuryakumaryadavteamindia
ShareTweetSendShare
Join us on:

Related Posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

by Shwetha
April 24, 2026
0

ತುಮಕೂರು ನಗರದ ಆಯಕಟ್ಟಿನ ಜಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ಅತಿ ಕಡಿಮೆ ಬೆಲೆಗೆ ನೀಡಲಾಗಿದೆ ಎಂಬ ಗಂಭೀರ ಆರೋಪದ...

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

by Shwetha
April 24, 2026
0

ಭಾರತ ಇಂದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಆದರೆ ಇದೇ 150 ಕೋಟಿ ಜನಸಂಖ್ಯೆಯ ಮೇಲೆ ಇಂದು ಮೈಕ್ರೋಪ್ಲಾಸ್ಟಿಕ್ ಎಂಬ ಸದ್ದಿಲ್ಲದ ಕೊಲೆಗಾರ ದಾಳಿ...

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

by Shwetha
April 24, 2026
0

ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ತೆಗೆದುಕೊಂಡ ನಿರ್ಧಾರದಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದ ಹಿನ್ನಡೆ ಅನುಭವಿಸುವಂತಾಗಿದೆ...

ಮುಸ್ಲಿಮರು ಮತ್ತು ನಾವು ಯಾವತ್ತೂ ಸಹೋದರರು: ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ಯಾವಾಗಲೂ ಇದೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

ಈಗ ತಮಾಷೆಯನ್ನೂ ಮಾಡುವಂತಿಲ್ಲ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ತೀವ್ರ ಅಸಮಾಧಾನ

by Shwetha
April 24, 2026
0

ಬೆಂಗಳೂರು: ಕಬಡ್ಡಿ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ ಕುರಿತು ನೀಡಿದ್ದ ಹೇಳಿಕೆ ಈಗ ಕಾನೂನು ಸಂಕಷ್ಟಕ್ಕೆ ತಿರುಗಿದ್ದು, ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು...

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

by Shwetha
April 24, 2026
0

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಸಮರ ಶುರುವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram