ಪರಿಮಳ ಭರಿತ ಆಕರ್ಶಣೀಯ ಮಲ್ಲಿಗೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಮಲ್ಲಿಗೆ… ಪರಿಮಳ ಭರಿತ ಆಕರ್ಶಣೀಯ ಮಲ್ಲಿಗೆ ಬಿಳಿ ಬಣ್ಣದಲ್ಲಿ ಕಂಗೊಳಿಸುವ ಆಕರ್ಶಣೀಯ ಹೂವಾಗಿದೆ. ಇದನ್ನ ಹೆಚ್ಚು ಮಹಿಳೆಯರು ಯುವತಿಯರು ಮುಡಿಯಲು ಇಷ್ಟ ಪಡುತ್ತಾರೆ. ಮಲ್ಲಿಗೆಯಲ್ಲಿ ಸಾಕಷ್ಟು ವಿಧಗಳಿವೆ. ಕಾಡು ಮಲ್ಲಿಗೆ , ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ಮೈಸೂರು ಮಲ್ಲಿಗೆ, ಮುತ್ತುಮಲ್ಲಿಗೆ ಇನ್ನೂ ಹಲವು ವಿಧಗಳಿವೆ. 
ಕನ್ನಡದಲ್ಲಿ ಮಲ್ಲಿಗೆ ಅಂದ್ರೆ, ಇಂಗ್ಲಿಷ್ ನಲ್ಲಿ ಜಾಸ್ಮೀನ್, ಹಿಂದಿಯಲ್ಲಿ ಚಮೇಲಿ ಹೀಗೆ ನಾನಾ ಭಾಷೆಗಳಲ್ಲಿ ನಾನಾ ರೀತಿಯಲ್ಲಿ ಕರೆಯಲಾಗುತ್ತೆ. ಇದೊಂದು ದೀರ್ಘಕಾಲಿಕ ಪುಷ್ಪ ಬೆಳೆ. ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು 200 ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ. ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ. ನಮ್ಮ ದೇಶದ ಮಲ್ಲಿಗೆ ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಅರಬ್ ದೇಶಗಳಿಗೆ ರಫ್ತಾಗುತ್ತದೆ. ಮಲ್ಲಿಗೆಯನ್ನು ಸುಗಂಧಿತ ತೈಲ ತಯಾರಿಸಲು ಮತ್ತು ಅತ್ತರ್ ತಯಾರಿಸಲು ಬಳಸಲಾಗುತ್ತದೆ. ಮಲ್ಲಿಗೆಯ ತೈಲವನ್ನು ಸಾಬೂನು ಮತ್ತು ಇತರ ಸೌಂದರ್ಯವರ್ಧಕ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಲ್ಲ ಸುಗಂಧದ್ರವ್ಯಗಳಲ್ಲಿಯೂ ಮಲ್ಲಿಗೆ ತೈಲವಿದ್ದೇ ಇರುತ್ತದೆ.
ಆಕರ್ಶಣೀಯವಾಗಿ ಒಂದೇ ನೋಟದಲ್ಲಿ ಎಲ್ಲರ ಗಮನ ಸೆಳೆಯುವ ಪ್ರೇಮದ ಸಂಕೇತ ಗುಲಾಬಿಯ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳು..!
ಮಲ್ಲಿಗೆ ಮೊಗ್ಗುಗಳಲ್ಲಿ ಸುಗಂಧ ನೀಡುವ ಇಂಡೋಲ್ ಎಂಬ ರಾಸಾಯನಿಕ ಪದಾರ್ಥ ಇದೆ. ಪೂರ್ತಿ ಅರಳಿದ ಮತ್ತು ಆಗ ತಾನೆ ಬಿಡಿಸಿದ ಹೂಗಳನ್ನು ಎಣ್ಣೆ ತೆಗೆಯಲು ಬಳಸುತ್ತಾರೆ. ಜಾಜಿಯಿಂದ ತಯಾರಾಗುವುದು ಜಾಸ್ಮಿನ್ ತೈಲ. ಈ ಹೂಗಳನ್ನು ಗಿಡದಿಂದ ಬೇರ್ಪಡಿಸಿದ ಕೆಲ ಸಮಯದವರೆಗೂ ಅದರ ಸುವಾಸನೆ ವೃದ್ಧಿಯಾಗುತ್ತಿರುತ್ತದೆ. ಹೂಗಳನ್ನು ಮಾಲೆಗಳಲ್ಲಿ, ಹಾರಗಳಲ್ಲೂ ಬಳಸುತ್ತಾರೆ.
ಇನ್ನೂ ಮಲ್ಲಿಗೆಯಿಂದ ಮೈಕೈ ನೋವಿಗೆ ಔಷಧಿಯನ್ನೂ ತಯಾರಿಸಲಾಗುತ್ತೆ. ಅಷ್ಟೇ ಅಲ್ದೇ ಸುಗಂಧ, ಪರ್ ಫ್ಯೂಮ್ ಗಳಿಗೆ ಉಪಯೋಗಕಾರಿ ಜಾಸ್ಮೀನ್. ಕಿವಿ ಮತ್ತು ಮೂಗಿನ ರೋಗಗಳಲ್ಲಿ ಮಲ್ಲಿಗೆಯಿಂದ ತಯಾರಿಸಿದ ತೈಲವನ್ನು ಉಪಯೋಗಿಸಲಾಗುತ್ತದೆ. ಮಲ್ಲಿಗೆಯ ಬೇರು, ಹೂ ಮತ್ತು ಎಲೆಗಳು ಎದೆ ಹಾಲಿನ ಉತ್ಪತ್ತಿಯನ್ನು ತಗ್ಗಿಸುತ್ತವೆ. ಚೀನಾ ಸೇರಿ ಇತರೇ ದೇಶಗಳಲ್ಲಿ ಚಹಾದಲ್ಲಿ ಸುಗಂಧ ಬರಿಸಲು ಮಲ್ಲಿಗೆ ಹೂಗಳನ್ನು ಹಾಕಿ ಟೀ ತಯಾರಿಸುತ್ತಾರೆ. ದೃಷ್ಟಿದೋಷದ ತೊಂದರೆಯಿರುವವರಿಗೆ ಮತ್ತು ಉನ್ಮಾದದಿಂದ ಬಳಲುವವರಿಗೆ ಮಲ್ಲಿಗೆಯ ಎಲೆಯ ರಸದಿಂದ ತಯಾರಿಸಿದ ತೈಲವನ್ನು ತಲೆಗೆ ಉಪಯೋಗಿಸಲು ಹೇಳಬೇಕು. ಗಾಯ ಹಾಗೂ ಹುಣ್ಣುಗಳಿಗೆ ಒಣಗಿದ ಮಲ್ಲಿಗೆ ಎಲೆಗಳನ್ನು ನೀರಿನಲ್ಲಿ ನೆನೆಯಿಟ್ಟು ನಂತರ ಅರೆದು ಪೊಲ್ಟೀಸ್ ಮಾಡಿ ಕಟ್ಟಬೇಕು. ಆಗ ಗಾಯ ಹಾಗೂ ಹುಣ್ಣುಗಳು ವಾಸಿಯಾಗುತ್ತವೆ.








