Abbe Falls
ಹಸಿರು ರಾಶಿಯ ಸುತ್ತ ಧುಮಿಕ್ಕಿ ಹರಿಯುವ ರಮಣೀಯ ಜಲಧಾರೆ ಅಬ್ಬೆ ಫಾಲ್ಸ್..!
ಮಂಜಿನ ನಗರಿ ಮಡಿಕೇರಿ ಹೇಳಿಕೇಳಿ ಪ್ರವಾಸಿ ತಾಣಗಳಿಗೆ ಫೇಮಸ್. ಅದ್ರಲ್ಲು ಲೆಕ್ಕವಿಲ್ಲದಷ್ಟು ಜಲಪಾತಗಳ ನೆಲೆಬೀಡು ಅಂದ್ರೆ ಅದು ಮಡಿಕೇರಿ. ಪ್ರವಾಸಿಗರಿಗಂತೂ ಮಡಿಕೇರಿ ಆಲ್ ಟೈಮ್ ಫೇವರೇಟ್ ಅಂದ್ರೆ ತಪ್ಪಾಗೋದಿಲ್ಲ. ಇಂತಹ ಮಂಜಿನ ನಗರಿಯಲ್ಲೇ ಅತ್ಯಂತ ರಮಣೀಯವಾದ ಜಲಧಾರೆ ಅಂದ್ರೆ ಅದು ಅಬ್ಬೆ ಫಾಲ್ಸ್..
ಹೌದು ಹಾಲ್ನೊರೆಯಂತೆ ಧುಮ್ಮಿಕ್ಕಿ ಝುಳು ಝುಳು ಹರಿಯುವ ಜಲಧಾರೆಯ ಮನೋಹರ ದೃಶ್ಯ ಕಣ್ತುಂಬಿಕೊಳ್ಳುವುದೇ ಒಂದು ಸೊಬಗು.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ, ಭಾಗಮಂಡಲದ ಸುತ್ತ ಮುತ್ತ ಮಳೆ ಸುರಿಯುತ್ತಿದ್ದಾಗ ಜೀವನದಿ ಕಾವೇರಿ ಉಕ್ಕಿ ಹರಿಯುತ್ತದೆ. ಕೊಡಗಿನ ರಮಣೀಯ ಹಸಿರು ರಾಶಿಯ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದಂತೆಯೇ ಇಲ್ಲಿನ ವಿಖ್ಯಾತ ಜಲಪಾತ ‘ಅಬ್ಬೆ’ ಮೈದುಂಬಿ ಧುಮ್ಮುಕ್ಕುತ್ತದೆ. ಆಕರ್ಷಕವಾಗಿ ಧುಮ್ಮಿಕ್ಕುವ ಅಬ್ಬಿ, ತನ್ನ ಪೂರ್ಣ ಸೊಬಗನ್ನು ಪಡೆವುದೇ ಮಳೆಗಾಲದಲ್ಲಿ. ಇದಕ್ಕೇ ನೋಡಿ ಅಬ್ಬೆ ಫಾಲ್ಸ್ ಗೆ ಮಳೆಗಾಲದ ಮಧುಮಗಳು ಎಂಬ ಹೆಸರೂ ಇದೆ.
ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಪಾತ ಹಾಲು ನೊರೆಯಂತಹ ರಮಣೀಯ ದೃಶ್ಯದೊಂದಿಗೆ ಮತ್ತಷ್ಟು ಕಳೆಗಟ್ಟುತ್ತದೆ. ನೋಡುಗರ ಪುಳಕಿತಗೊಳಿಸುತ್ತೆ. ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತೆ. ಅಬ್ಬೆ ಜಲಪಾತದಲ್ಲಿ ಸ್ನೇಹಿತರು ಹಾಗೂ ಫ್ಯಾಮಿಲಿ ಜೊತೆ ಬಂದು ಎಂಜಾಯ್ ಮಾಡ್ತಾರೆ.
ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತವು ನಮ್ಮನ್ನು ತನ್ನ ಭೋರ್ಗೆರೆವ ಶಬ್ದದಿಂದ ಮೂಕವಿಸ್ಮಿತರನ್ನಾಗಿಸುತ್ತದೆ. ಕಲ್ಲು ಬಂಡೆಗಳು ಮತ್ತು ಗುಡ್ಡಗಳಿಂದ ವೇಗವಾಗಿ ಹರಿಯುವ ಸಣ್ಣ ಸಣ್ಣ ತೊರೆಗಳ ಸಮಗ್ರ ರೂಪ. ಈ ಪ್ರವಾಹವು ಅತ್ಯಂತ ವೇಗವಾಗಿ ಹರಿದು ಕೆಳಗೆ ಬೀಳುವುದರಿಂದಾಗಿ ಅತ್ಯಾಕರ್ಷಕ ನೋಟ ಸೃಷ್ಟಿಯಾಗುತ್ತದೆ.
ದೇವರ ಸ್ವಂತ ನಾಡಿನ ಅತ್ಯದ್ಭುತ ಊರು ಆಲೆಪ್ಪಿ..! ಇಲ್ಲಿನ ಪ್ರಮುಖ ಆಕರ್ಷಣೆ ದೋಣಿಮನೆಗಳು..!
ಹೋಗುವುದು ಹೇಗೆ
ಬೆಂಗಳೂರಿನಿಂದ 252 ಕಿಲೋಮೀಟರ್ ದೂರದಲ್ಲಿರುವ ಮಡಿಕೇರಿಗೆ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಂದ ನೇರ ಬಸ್ ಸೌಲಭ್ಯ ಇದೆ. ಮಡಿಕೇರಿಯಿಂದ ಅಬ್ಬೆ ಜಲಪಾತಕ್ಕೆ ಕೇವಲ 10 ಕಿಲೋ ಮೀಟರ್. ಮಡಿಕೇರಿಯಲ್ಲಿ ಮೊದಲು ಮಡಿಕೇರಿ ಕೋಟೆ ನೋಡಿ, ಅಲ್ಲಿಂದ ಅಬ್ಬಿಗೆ ಬರಬಹುದು. ಮಡಿಕೇರಿಯಿಂದ ಭಾಗಮಂಡಲಕ್ಕೆ 39 ಕಿ.ಮೀಟರ್. ಕಾವೇರಿ, ಕನ್ನಿಕ ಹಾಗೂ ಸುಜ್ಯೋತಿ ನದಿಗಳು ಸೇರುವ ಈ ಸ್ಥಳದಲ್ಲಿ ಸುಂದರ ದೇವಾಲಯವಿದೆ. ಮಡಿಕೇರಿಯಿಂದ ತಲಕಾವೇರಿಗೆ 44 ಕಿ.ಮೀಟರ್. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ 5 ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.
ಸಮೀಪದ ಸ್ಥಳಗಳು
ಇನ್ನೂ ಅಬ್ಬೆ ಫಾಲ್ಸ್ ಸುತ್ತಲೂ ಇನ್ನೂ ಹಲವಾರು ಅಕರ್ಷಣೀಯ ಪ್ರವಾಸಿತಾಣಗಳಿವೆ. ತಲಕಾವೇರಿ, ಇರುಪ್ಪು ಜಲಪಾತ, ಬಾಗಮಂಡಲ, ಬೈಲುಕುಪ್ಪೆ, ರಾಜಾಸಿಟಿ, ಕಾವೇರಿ ನಿಸರ್ಗಧಾಮ ಹೇಗಿ ಅನೇಕ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನ ಆಕರ್ಷಿಸುತ್ತವೆ.
ವಿಶ್ವದ ಏಕಮಾತ್ರ ಸಂಪೂರ್ಣ ಹಿಂದೂ ದೇಶ ನೇಪಾಳದ ಬಗ್ಗೆ ತಿಳಿದಿರದ ವಿಚಾರಗಳು..!