ತಂದೆ – ತಾಯಿ ವಿರುದ್ಧವೇ ಕೇಸ್ ದಾಖಲಿಸಿದ ದಳಪತಿ ವಿಜಯ್..!
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರು ತಮ್ಮ ತಂದೆ ತಾಯಿಯ ವಿರುದ್ಧ ಕೇಸ್ ದಾಖಲಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ತೆರಿಗೆ ಕಟ್ಟುವುದರ ಮೇಲೆ ರಿಯಾಯತಿ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರ ಜೊತೆಗೆ ಇತ್ತೀಚೆಗೆ ಕೆಲ ವಿಚಾರಗಳಲ್ಲಿ ಸುದ್ದಿಯಾಗ್ತಿದ್ದ ದಳಪತಿ ಇದೀಗ ತಮ್ಮ ತಂದೆ ತಾಯಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ಕೇಸ್ ಸಾಖಲು ಮಾಡಿದ್ದಾರೆ. ಅಂದ್ಹಾಗೆ ಸ್ಟಾರ್ ನಿರ್ದೇಶಕರ ಗಣತಿಗೆ ಬರುವ ದಳಪತಿ ವಿಜಯ್ ತಂದೆ ಎಸ್. ಎ ಚಂದ್ರಶೇಖರ್ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನ ಡೈರೆಕ್ಟ್ ಮಾಡಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದೇ ತಂದೆ ಮಗನ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ವಿಜಯ್ ತಂದೆ 2020ರಲ್ಲಿ ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಕ್ಷ ಆರಂಭಿಸಿದ್ದರು. ಆದರೆ ಅದು ವಿಜಯ್ ಗೆ ಇಷ್ಟವಿರಲಿಲ್ಲ. ಅಲ್ಲದೇ ನನ್ನ ತಂದೆಯ ಪಕ್ಷ ಎಂದು ಸಫೋರ್ಟ್ ಮಾಡಬೇಡಿ. ನನಗೆ ಆ ಪಕ್ಷದ ಜೊತೆಗೆ ನೇರವಾಗಿ, ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ. ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಾರ್ಟಿ ಜೊತೆಗೆ ನನ್ನ ಹೆಸರು ಸೇರಿಸಿದರೆ, ಫೋಟೋ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಇದೀಗ ಇದೇ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ. ವಿಜಯ್ ಹೆಸರು, ಅಭಿಮಾನಿಗಳ ಸಂಘಗಳ ಹೆಸರನ್ನು ಎಲ್ಲಿಯೂ ಬಳಸದಂತೆ ತಡೆಯಾಜ್ಞೆ ತರಲಾಗಿದೆ. ಈ ಸಂಬಂಧ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್, ತಾಯಿ ಶೋಭಾ ಚಂದ್ರಶೇಖರ್, ಪಾರ್ಟಿ ಲೀಡರ್ ಪದ್ಮನಾಭನ್ ಸೇರಿದಂತೆ 11 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ.