ಮತ್ತೆ ಒಂದಾಗಲಿದೆ ಬ್ಲಾಕ್ ಬಾಸ್ಟರ್ ‘ರಾಜಕುಮಾರ’ ಜೋಡಿ..!
ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪವರ್ ಸ್ಟಾರ್ ಪುನೀತ್ ರಾಜಜ್ ಕುಮಾರ್ ಅವರಿಗೆ ಎಲ್ಲಾ ರೀತಿಯ ಅಭಿಮಾನಿಗಳಿದ್ದಾರೆ. ಹೆಚ್ಚಾಗಿ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾಗಳನ್ನ ಮಾಡುವ ಅಪ್ಪುಗೆ ಹಿರಿಯರು , ಕಿರಿಯರು ಯುವಕರೂ ಕೂಡ ಫ್ಯಾನ್ಸ್ ಇದ್ದಾರೆ. ಅದ್ರಲ್ಲೂ 2017ರಲ್ಲಿ ಪುನೀತ್ ರಾಜ್ ಕುಮಾರ್ , ಸಂತೋಷ್ ಆನಂದ್ ರಾಮ್ ನಿರ್ದೇಶನ ಹಾಗೂ ಹೊಂಬಾಳೆ ಫಿಲಮ್ಸ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ರಾಜಕುಮಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬಾರೀ ಸೌಂಡ್ ಮಾಡಿತ್ತು. ಸಿನಿಮಾ ಸೂಪರ್ ಹಿಟ್ ಆಗಿತ್ತು.
ಈ ಸಿನಿಮಾದಲ್ಲಿ ನಟಿ ಪ್ರಿಯಾ ಆನಂದ್ ರಾಮ್ ಹಾಗೂ ಅಪ್ಪು ಕೆಮಿಸ್ಟ್ರಿ, ಕಾಮಿಡಿ ಎಲಿಮೆಂಟ್ಸ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಜನಮನಗೆದ್ದಿತ್ತು. ಇದಾದ ನಂತರ ಹೊಂಬಾಳೆ ಬ್ಯಾನರ್ ನಡಿಯಲ್ಲೇ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಶ್ ಆನಂದ್ ರಾಮ್ ಕಾಂಬಿನೇಷನ್ ನ ಯುವರತ್ನ ಸಿನಿಮಾ ಕೂಡ ತೆರಕಂಡು ಸಕ್ಸಸ್ ಆಗಿದೆ. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮತ್ತೆ ಇದೇ ಕಾಂಬಿನೇಷನ್ ಹೊಸ ಸಿನಿಮಾಗೆ ಒಂದಾಗಿದ್ದು, ಹೊಂಬಾಳೆ ಫಿಲಮ್ಸ್ ಸಂಸ್ಥೆಯೇ ಬಂಡವಾಳ ಹೂಡುತ್ತಿರುವುದು ವಿಶೇಷವಾಗಿದೆ.
“ರಿಯಲ್ ಹೀರೋ” ವಿರುದ್ಧ 20 ಕೋಟಿ ರೂ. ತೆರಿಗೆ ವಂಚನೆ ಆರೋಪ
ಈ ಕುರಿತಂತೆ ಸಂತೋಷ್ ಆನಂದ್ ರಾಮ್ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪುನೀತ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಪುನೀತ್ ಹಾಗೂ ನನ್ನ ಕಾಂಬಿನೇಷನ್ನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಯಾವಾಗಲೂ ಕೇಳುತ್ತಿದ್ದರು. ಮುಂದಿನ ವರ್ಷ ನಮ್ಮ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೊನೆಯಲ್ಲಿ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ನಿಮ್ಮ ಅಭಿಮಾನ ನಮಗೆ ಶ್ರೀ ರಕ್ಷೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಪುನೀತ್ ರಾಜ್ ಕುಮಾರ್ ಅವರು ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡ್ತಿರುವ ದ್ವಿತ್ವದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸೈಕಾಲಾಜಿಕಲ್ ಸಿನಿಮಾವಾಗಿದ್ದು, ಈ ರೀತಿಯಾದ ಪಾತ್ರವನ್ನ ಅಪ್ಪು ಎಕ್ಸಪೆರಿಮೆಂಟ್ ಮಾಡ್ತಿದ್ದು, ಪೋಸ್ಟರ್ ನಲ್ಲಿ ವಿಭಿನ್ನ ಲುಕ್ ನಲ್ಲಿ ದರ್ಶನ ನೀಡಿ ಅಭಿಮಾನಿಗಳ ಕಾತರತೆ ಹೆಚ್ಚಿಸಿದ್ದಾರೆ.