ವೆಬ್ ಸೀರೀಸ್ ರೂಪದಲ್ಲಿ ಬರಲಿದೆ ಸಲ್ಮಾನ್ ಖಾನ್ ಸಿನಿ ಜರ್ನಿ….!
ಬ್ಯಾಡ್ ಬಾಯ್ , ಬಾಕ್ಸ್ ಆಫೀಸ್ ಸುಲ್ತಾನ ಇನ್ನೂ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಬಾಲಿವುಡ್ ನ ಶೇರ್ ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಇದೀಗ ಸಖತ್ ಥ್ರಿಲ್ ಆಗುವಂತಹ ಸುದ್ದಿ ಹೊರಬಂದಿದೆ.
ಹೌದು.. ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರ ಸುಮಾರು 3 ದಶಕಗಳ ಕಾಲದ ಸಿನಿಮಾ ಜರ್ನಿಯನ್ನ ಡಾಕ್ಯುಮೆಂಟ್ರಿ ಸೀರೀಸ್ ರೂಪದಲ್ಲಿ ಡಿಜಿಟಲ್ ತೆರೆ ಮೇಲೆ ತರಲು ಪ್ಲಾನ್ ನಡೆಯುತ್ತಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
ಇನ್ನೂ ಈ ಸೀರೀಸ್ ನಲ್ಲಿ ಸಲ್ಮಾನ್ ಖಾನ್ , ಕುಟುಂಬ , ಗೆಳೆಯರು , ಆಪ್ತರು , ನಿರ್ದೇಶಕರು, ನಿರ್ಮಾಪಕರು , ಸಹೋದ್ಯೋಗಿಗಳ ಸಂದರ್ಶನಗಳು ಕೂಡ ಒಳಗೊಂಡಿರಲಿದೆ ಎನ್ನಲಾಗ್ತಾಯಿದೆ. ಅಲ್ಲದೇ ಇದಕ್ಕಾಗಿ ಈಗಾಗಲೇ ಪೂವರ್ ತಯಾರಿಗಳು ಕೂಡ ನಡೆಯುತ್ತಿದೆ ಎಂಬ ವಿಚಾರ ಕೆಲ ಮೂಲಗಳಿಂದ ತಿಳಿದುಬಂದಿದೆ.
ಪ್ರಕಾರ, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರದರ್ಶಿಸಲು ತಂಡವು ಈಗಾಗಲೇ ಖ್ಯಾತ ಒಟಿಟಿ ಫ್ಲಾಟ್ ಫಾರ್ಮ್ ಗಳ ಜೊತೆಗೆ ಚರ್ಚೆಯಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ. ಅಂದ್ಹಾಗೆ ಇದಕ್ಕೆ ಹೋಲಿಕೆಯಾಗುವಂತಹದ್ದೇ ಸೀರೀಸ್ ಈ ಹಿಂದೆ ಟೆನ್ನಿಸ್ ಜೋಡಿ ಮಹೇಶ್ ಭೂಪತಿ ಹಾಗೂ ಲಿಯಾಂಡರ್ ಅವರ ಬಗ್ಗೆ ಬಂದಿತ್ತು. ಅದಕ್ಕೆ ಪಾಯಿಂಟ್ ಬ್ರೇಕ್ ಎಂಬ ಟೈಟಲ್ ಇಡಲಾಗಿತ್ತು.