ಶಾಶ್ವತವಾಗಿ ಪ್ರದರ್ಶನ ನಿಲ್ಲಿಸಿದ ಮೈಸೂರಿನ ಮತ್ತೊಂದು ಜನಪ್ರಿಯ ಚಿತ್ರಮಂದಿರ..!

1 min read
cinema

ಶಾಶ್ವತವಾಗಿ ಪ್ರದರ್ಶನ ನಿಲ್ಲಿಸಿದ ಮೈಸೂರಿನ ಮತ್ತೊಂದು ಜನಪ್ರಿಯ ಚಿತ್ರಮಂದಿರ..!

ಕೋವಿಡ್ ಹೆಚ್ಚಳವಾದ ಕಾರಣ 2ನೇ ಅಲೆ ವೇಳೆ ಲಾಕ್ ಡೌನ್ ಹೇರಲಾಗಿತ್ತು. ಲಾಕ್ ಡೌನ್ ತೆರವಾದ ಮೇಲೆ ಎಲ್ಲದರ ನಿರ್ಬಂಧಗಳನ್ನ ಸಡಿಲ ಮಾಡಿಕೊಂಡು ಬಂದರಾದ್ರೂ ಸಿನಿಮಾ ಮಂದಿರಗಳಲ್ಲಿ 50 % ಸೀಟಿಂಗ್ ಗೆ ಮಾತ್ರವೇ ಅವಕಾಶ ನೀಡಲಾಗಿದೆ. ಇದ್ರಿಂದಾಗಿ ಸಿನಿಮಾಮಂದಿರಗಳ ಮಾಲೀಕರು ತೀರ ನಷ್ಟ ಅನುಭವಿಸುವಂತಾಗಿದೆ.

ಮೊದಲೇ ಮಲ್ಟಿಪ್ಲೆಕ್ಸ್ ಗಳ ಹಾವಳಿಯಿಂದ ನಲುಗಿಹೋಗಿದ್ದ ಸಿಂಗಲ್ ಸ್ಕ್ರೀನ್ ಥಿಯೇಟರ್ ಸಂಸ್ಕೃತಿಗೆ ಒಟಿಟಿ ಫ್ಲಾಟ್ ಫಾರ್ಮ್ ಗಳು ಮತ್ತಷ್ಟು ಪೆಟ್ಟು ನೀಡಿದ್ದವು. ಹಾಗೋ ಹೀಗೋ  ಥಿಯೇಟರ್ ಗಳು ಉಸಿರಾಡೋ ಹೊತ್ತಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಥಿಯೇಟರ್ ಗಳ ಮಾಲೀಕರು ಮತ್ತೆ ತೊಂದರೆ ಅನುಭವಿಸುವಂತಾಯ್ತು. ಲಾಕ್ ಡೌನ್ ವೇಳೆ ಒಟಿಟಿಗಳು ಮತ್ತಷ್ಟು ಬಲಗೊಂಡವು. ಜನರ ಒಲವು, ನಿರ್ಮಾಪಕರ ಒಲವು ಒಟಿಟಿ ಕಡೆ ಹೆಚ್ಚಾಯ್ತು.  ಇದ್ರಿಂದಾಗಿ ಅದೆಷ್ಟೋ ಥಿಯೇಟರ್ ಬಂದ್ ಆಗಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ನಡುವೆ ಮೈಸೂರಿನ ಸರಸ್ವತಿ ಚಿತ್ರಮಂದಿರ ತನ್ನ ಪ್ರದರ್ಶನ ನಿಲ್ಲಿಸುವ ಮೂಲಕ ಇದೀಗ ಇತಿಹಾಸ ಸೇರಿಕೊಂಡಿದೆ.

ಡಾರ್ಲಿಂಗ್ ಕೃಷ್ಣನ ಹೊಸ ಸಿನಿಮಾಗೆ ಸಾಥ್ ಕೊಟ್ಟ ರವಿ ಡಿ ಚೆನ್ನಣ್ಣನವರ್..!

ಮೈಸೂರಿನ ಜನಪ್ರಿಯ ಹಾಗೂ ಅತ್ಯಂತ ಹಳೆಯ ಸರಸ್ವತಿ ಚಿತ್ರಮಂದಿರ ಕೊರೊನ ಸಂಕಷ್ಟದಲ್ಲಿ ಸತತ ಒಂದೂವರೆ ವರ್ಷದಿಂದ ತೆರೆಯದ ಕಾರಣ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಶಾಸ್ವತವಾಗಿಯೇ ಬಾಗಿಲು ಮುಚ್ಚಿದೆ. ಮಾಲೀಕರು ಚಿತ್ರಮಂದಿರವನ್ನು ಮುಚ್ಚಿ ಆ ಜಾಗವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಈ ಹಿಂದೆ ಕೋವಿಡ್ ಸಂಕಷ್ಟದಿಂದಾಗಿ ಮೈಸೂರಿನ ಲಕ್ಷ್ಮಿ, ಶಾಂತಲಾ, ಶ್ರೀ ಟಾಕೀಸ್ ಚಿತ್ರಮಂದಿರಗಳು  ಬಂದ್ ಆಗಿದ್ದವು. ಇದೀಗ ಇದೇ ಸಾಲಿಗೆ ಸರಸ್ವತಿ ಚಿತ್ರಮಂದಿರವು ಸಹ ಸೇರ್ಪಡೆ ಆಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd