ಸೆಪ್ಟೆಂಬರ್ 27 ರಿಂದ ಕೆನಡಾಗೆ ಭಾರತದ ಎಲ್ಲಾ ವಿಮಾನಗಳು ಪುನಾರಂಭ
ಕೊರೊನಾ ಹಾವಳಿಯಿಂದಾಗಿ ಬಹುತೇಕ ಜಾಗತಿಕ ಮಟ್ಟದ್ದಲ್ಲಿ ಅನೇಕ ಅಡಚಣೆಗಳು ಉಂಟಾಗಿದ್ದವು. ಮುಖ್ಯವಾಗಿ ಅಂತರಾಷ್ಟ್ರೀಯ ವಿಮಾನಗಳ ಸಂಚಾರವೂ ಬಹುತೇಕ ಬಂದ್ ಆಗಿತ್ತು. ಇದೀಗ ಹಲವು ದೇಶಗಳಿಗೆ ಅನೇಕ ಷರತ್ತುಗಳ ಅನ್ವಯ ಭಾರತದಿಂದ ತೆರಳುವವರಿಗೆ ಅವಕಾಶ ನೀಡಲಾಗ್ತಿದೆ.
ಇದೀಗ ಸೆಪ್ಟೆಂಬರ್ 27 ರಿಂದ ಕೆನಡಾಗೆ ಭಾರತದ ಎಲ್ಲಾ ವಿಮಾನಗಳು ಪುನಾರಂಭಗೊಳ್ಳಲಿದೆ. ಕಳೆದ ವಾರ ಜಸ್ಟಿನ್ ಟ್ರೂಡೊ ನೇತೃತ್ವದ ಫೆಡರಲ್ ಸರ್ಕಾರವು ಭಾರತದ ಎಲ್ಲಾ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನಗಳ ಮೇಲಿನ ನಿರ್ಬಧವನ್ನು ಸೆಪ್ಟೆಂಬರ್ 26ರವರೆಗೆ ವಿಸ್ತರಿಸಿತ್ತು. ಆದರೆ ಇದೀಗ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭಾರತದಿಂದ ಪ್ರಯಾಣಿಕರು ಕೆನಾಡಕ್ಕೆ ಪ್ರಯಾಣಿಸಬಹುದಾಗಿದೆ.
ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ – ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆದ್ರೆ ಪ್ರಯಾಣಿಕರು ಕೆಲ ನಿಯಮಗಳನ್ನ ಎದುರಿಸಬೇಕಾಗಿದೆ. ಪ್ರಮುಖವಾಗಿ ಪ್ರಯಾಣಿಕರು ಪ್ರಯಾಣಿಸುವ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕಾಗುತ್ತದೆ. ಅದಾಗ್ಯೂ 18 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ರಿಪೋರ್ಟ್ ವರದಿ ಕಡ್ಡಾಯ. ನಂತರ ಏರ್ ಆಪರೇಟರ್‍ಗಳಿಗೆ ಕ್ಯೂಆರ್ ಕೋಡ್‍ನೊಂದಿಗೆ ಪರೀಕ್ಷಾ ವರದಿಯನ್ನು ಪ್ರಸ್ತುತಪಡಿಸಬೇಕು ಎಂದು ತಿಳಿಸಲಾಗಿದೆ.








