ಭಾರತಕ್ಕೆ ಮರಳಿತು 157 ಪುರಾತನ ವಸ್ತುಗಳು ವಾಪಸ್ – ಅಮೆರಿಕಾದಿಂದ ಹಸ್ತಾಂತರ

1 min read

ಭಾರತಕ್ಕೆ ಮರಳಿತು 157 ಪುರಾತನ ವಸ್ತುಗಳು ವಾಪಸ್ – ಅಮೆರಿಕಾದಿಂದ ಹಸ್ತಾಂತರ

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 157 ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಭಾರತಕ್ಕೆ ವಾಪಸ್ ತರಲಿದ್ದಾರೆ.

ಭೇಟಿಯ ಸಮಯದಲ್ಲಿ ಅಮೆರಿಕವು ಭಾರತಕ್ಕೆ ಈ ವಸ್ತುಗಳನ್ನ ಹಸ್ತಾಂತರಿಸಿದೆ.

ಸುಮಾರು ಅರ್ಧದಷ್ಟು ಕಲಾಕೃತಿಗಳು (71) ಸಾಂಸ್ಕೃತಿಕವಾಗಿದ್ದರೆ, ಉಳಿದ ಅರ್ಧ ಹಿಂದೂ ಧರ್ಮ (60), ಬೌದ್ಧ ಧರ್ಮ (16) ಮತ್ತು ಜೈನ ಧರ್ಮ (9) ಕ್ಕೆ ಸಂಬಂಧಿಸಿದ ಪ್ರತಿಮೆಗಳಾಗಿದೆ ಎಂದು ಅಧಿಕೃತವಾಗಿ ಮಾಹಿತಿ ಸಿಕ್ಕಿದೆ.

ಅಮೆರಿಕವು ಭಾರತಕ್ಕೆ ಪುರಾತನ ವಸ್ತುಗಳನ್ನು ವಾಪಸ್ ಮಾಡಿರುವುದಕ್ಕೆ ಪ್ರದಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು ಭಾರತದ ಪುರಾತನ ವಸ್ತುಗಳನ್ನು ಮತ್ತು ಪ್ರಪಂಚದಾದ್ಯಂತದ ಕಲಾಕೃತಿಗಳನ್ನು ಮರಳಿ ತರುವ ಮೋದಿ ಸರ್ಕಾರದ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನೂ 1976 ಮತ್ತು 2013 ರ ನಡುವೆ ಭಾರತವು ಕೇವಲ 13 ಪುರಾತನ ವಸ್ತುಗಳನ್ನು ವಿವಿಧ ದೇಶಗಳಿಂದ ಹಿಂಪಡೆದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವಿಶ್ವದಲ್ಲಿಯೇ DNA ಲಸಿಕೆ ಅಭಿವೃದ್ಧಿ ಪಡಿಸಿದ ಮೊದಲ ರಾಷ್ಟ್ರ ಭಾರತ – ಮೋದಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd