ಉತ್ತರ ಕೊರಿಯಾದಿಂದ ಮತ್ತೊಂದು ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆ
ಉತ್ತರ ಕೊರಿಯಾ ಹೊಸ ಆಂಟಿ ಏರ್ ಕ್ರಾಫ್ಟ್ ಕ್ಷಿಪಣಿಯನ್ನ ಪರಿಕ್ಷಣಾರ್ಥವಾಗಿ ಉಡಾಯಿಸಿದೆ. ಈ ಆಂಟಿ ಏರ್ ಕ್ರಾಫ್ಟ್ ಮಿಸಾಯಿಲ್ ಗಮನಾರ್ಹವಾದ ಯುದ್ಧ ಕಾರ್ಯಕ್ಷಮತೆಯನ್ನು ಹೊಂದಿದೆ ಎನ್ನಲಾಗಿದೆ. ನಿಯಂತ್ರಣಗಳು ಮತ್ತು ಇತರ ಹೊಸ ತಂತ್ರಜ್ಞಾನಗಳನ್ನು ಇದು ಒಳಗೊಂಡಿದೆ ಎಂದು ಅಧಿಕೃತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ಅಮೆರಿಕಾದಲ್ಲಿ ಸರ್ಕಾರ ಬದಲಾದ ನಂತರ ತೀರ ಇತ್ತೀಚೆಗೆ ನಡೆಸಲಾದ ಪ್ರಮುಖ ಕ್ಷಿಪಣಿ ಪರೀಕ್ಷೆಯೂ ಆಗಿದೆ.
ಸೆಪ್ಟೆಂಬರ್ನಲ್ಲಿ ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಯನ್ನು ಪರೀಕ್ಷೆ ಮಾಡಿದ್ದ ಉತ್ತರ ಕೊರಿಯಾದ ನಡೆಯನ್ನು ದಕ್ಷಿಣ ಕೊರಿಯಾ ವಿಶ್ವಸಂಸ್ಥೆಯಲ್ಲಿ ತೀವ್ರವಾಗಿ ಖಂಡಿಸಿತ್ತು. ಆದ್ರೆ ನಮಗೆ ಕ್ಷಿಪಣಿ ಪರೀಕ್ಷೆ ಮಾಡುವ ಹಕ್ಕಿದೆ ಎಂದು ಉತ್ತರ ಕೊರಿಯಾ ಉತ್ತರ ನೀಡಿತ್ತು. ಅಲ್ಲದೇ ಈ ರೀತಿಯಾದ ಟೀಕೆಗಳು ಸಣ್ಣ ಟ್ರಿಕ್ ಗಳು ಎಂದು ಕರೆದಿದ್ದರು ಕಿಮ್ ಜಾಂಗ್ ಉನ್. ಮತ್ತೆ ಜೋ ಬೈಡೆನ್ ಆಡಳಿತದ ವಿರುದ್ಧವೂ ಮಾತನಾಡಿ ಬೈಡೆನ್ ಆಡಳಿತ ತನ್ನ ಹಿಂದಿನ ಸರ್ಕಾರದ ಆಡಳಿತದ ಕ್ರಮಗಳನ್ನೇ ( ಪ್ರತಿಕೂಲ ನೀತಿ) ಮುಂದುವರಿಸಿದೆ ಎಂದು ಆರೋಪಿಸಿದ್ದರು.
ಪ್ಯಾರೇ ದೇಶ್ ವಾಸಿಯೋ ಗಮನಿಸಿ : ಎಲ್ ಪಿಜಿ ಸಿಲಿಂಡರ್ ದರ ಏರಿಕೆ
ಇನ್ನೂ ಈ ಮಿಸಾಯಿಲ್ ಶಬ್ಧಕ್ಕಿಂತಲೂ 5 ಪಟ್ಟು ವೇಗವಾಗಿದೆ ಎಂದೂ ಕೂಡ ವರದಿಯಾಗಿದೆ. ಪಿಯೊಂಗ್ಯಾಂಗ್ ತನ್ನ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಮೇಲೆ ಬಹು ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಹೊಂದಿದೆ, ಇದು ಕಿಮ್ ಅಧಿಕಾರವಧಿಯಲ್ಲಿ ಪ್ರಗತಿ ಸಾಧಿಸಿದೆ, ಇದರಲ್ಲಿ ಅಮೆರಿಕದ ಇಡೀ ಭೂಭಾಗವನ್ನು ತಲುಪುವ ಸಾಮರ್ಥ್ಯವಿರುವ ಕ್ಷಿಪಣಿಗಳು ಮತ್ತು ಇಲ್ಲಿಯವರೆಗಿನ ಅತ್ಯಂತ ಶಕ್ತಿಶಾಲಿ ಪರಮಾಣು ಪರೀಕ್ಷೆಯೂ ಒಳಗೊಂಡಿದೆ. ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಫ್ರಾನ್ಸ್ ಭಾಗಿತ್ವದಲ್ಲಿ ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಭದ್ರತಾ ಮಂಡಳಿಯ ಸಭೆಯಲ್ಲಿ ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ಬಗ್ಗೆ ಸವಾಲುಗಳನ್ನ ಎತ್ತುವ , ಆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ಇನ್ನೂ ಉತ್ತರ ಕೊರಿಯಾದ ಹುಚ್ಚ ಸಾಮ್ರಾಟ ಕಿಮ್ ಜಾಂಗ್ ಉನ್ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ದೇಶದ ಜನರ ಹಿತಾಸಕ್ತಿಗಿಂತಲೂ ಈತನಿಗೆ ಅಣು ಬಾಂಬ್ ಗಳ ತಯಾರಿಕೆ ಮೇಲೆಯೇ ಆಸಕ್ತಿ ಹೆಚ್ಚು. ಅಲ್ಲದೇ ಉತ್ತರ ಕೊರಿಯಾ ಆಗಾಗ ಅಣ್ವಸ್ತ್ರಗಳನ್ನ ಪರೀಕ್ಷೆ ಮಾಡುತ್ತಾ ಇತರೇ ದೇಶಗಳನ್ನ ಹೆದರಿಸುವ ಪ್ರಯತ್ನವನ್ನೂ ಮಾಡುತ್ತಲೇ ಇರುತ್ತೆ.