ಲಡಾಖ್ ಗಡಿಯಲ್ಲಿ ಸೇನೆ ಹೆಚ್ಚಿಸಿದ ಕಪಟಿ ಚೀನಾ..!
ಲಡಾಖ್ : ಮುಂದಿನ ವಾರ ಲಡಾಖ್ ನಿಲುವಳಿ ಮತ್ತು ಸೇನಾ ಪಡೆಗಳ ಬೇರ್ಪಡುವಿಕೆ ಕುರಿತು ಭಾರತವು ಚೀನಾದೊಂದಿಗೆ 13 ನೇ ಸುತ್ತಿನ ಮಾತುಕತೆಯನ್ನು ನಡೆಸುವ ನಿರೀಕ್ಷೆಯಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಇಂದು ಬೆಳಿಗ್ಗೆ ಹೇಳಿದರು. ಇದೇ ವೇಳೆ ಚೀನೀಯರು ಗಡಿ ಭಾಗದಲ್ಲಿ ಹೆಚ್ಚಿನ ಸೇನೆ ನಿಯೋಜನೆ ಮಾಡುತ್ತಿದ್ದು ಕಳವಳಕಾರಿ ಸಂಗತಿಯಾಗಿದೆ. ಕಳೆದ 6 ತಿಂಗಳುಗಳಿಂದ ಗಡಿಯಲ್ಲಿನ ಪರಿಸ್ತಿತಿ ಸಾಮಾನ್ಯವಾಗಿದೆ ಎಂದರು. ಪೂರ್ವ ಲಡಾಖ್ ಮತ್ತು ಉತ್ತರ ಭಾಗದ ವರೆಗೂ ಚೀನಾ ಸಯನಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದು ಕಳವಳಕಾರಿ ವಿಷಯವಾಗಿದೆ ಎಂದು ನರವಾನೆ ಅವರು ತಿಳಿಸಿದ್ದಾರೆ. ಆದರೆ ನಾವು ಅವರ ಎಲ್ಲಾ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ.
ಯಾವುದೇ ಒಳಹರಿವಿನ ಆಧಾರದ ಮೇಲೆ ನಾವು ಮೂಲಸೌಕರ್ಯದ ವಿಷಯದಲ್ಲಿ ಹೊಂದಾಣಿಕೆಯ ಬೆಳವಣಿಗೆಗಳನ್ನು ನಡೆಸುತ್ತಿದ್ದೇವೆ. ಈ ಸಮಯದಲ್ಲಿ ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದ್ದಾರೆ. ಸಂವಾದದ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತೇವೆ. ಚೀನೀಯರ ಸೇನೆ ಹಿಂಪಡೆಯುವಂತೆ ಒತ್ತಾಯಿಸುತ್ತೇವೆ. ನಾವು ಸಂವಾದದ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ನನಗೆ ವಿಶ್ವಾಸವಿದೆ. 13 ನೇ ಸುತ್ತಿನ ಮಾತುಕತೆ ನಡೆಸುವುದು ಮತ್ತು ಹೇಗೆ ಸಮಸ್ಯೆ ಪರಿಹಾರಕ್ಕೆ ಒಮ್ಮತಕ್ಕೆ ಬರಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದಿದ್ದಾರೆ.
#WATCH | "…Definitely, there has been an increase in their deployment in the forward areas which remains a matter of concern for us…," says Army chief General Manoj Mukund Naravane to ANI on the India-China border situation pic.twitter.com/9DRwRwZ4Ud
— ANI (@ANI) October 2, 2021
ಗೋವಾದಲ್ಲಿ ಐಶಾರಾಮಿ ಮನೆ ಖರೀದಿಸಿದ ರಶ್ಮಿಕಾ…! ದುಡ್ಡು ಎಲ್ಲಿಂದ ಬರುತ್ತಿದೆ ಅನ್ನೋದೆ ನೆಟ್ಟಿರ ಪ್ರಶ್ನೆ..?