ಗೋವಾದಲ್ಲಿ ಐಶಾರಾಮಿ ಮನೆ ಖರೀದಿಸಿದ ರಶ್ಮಿಕಾ…! ದುಡ್ಡು ಎಲ್ಲಿಂದ ಬರುತ್ತಿದೆ ಅನ್ನೋದೆ ನೆಟ್ಟಿರ ಪ್ರಶ್ನೆ..?
ಸ್ಯಾಂಡಲ್ ವುಡ್ ‘ಸಾನವಿ’ಯಾಗಿ ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಟಾಲಿವುಡ್ , ಕಾಲಿವುಡ್ , ಬಾಲಿವುಡ್ ನಲ್ಲಿ ದರ್ಬಾರ್ ಮಾಡ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಪ್ರಸ್ತುತ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದು, ಸಿನಿಮಾ ರಿಲೀಸ್ ಆಗಲು ಅಭಿಮಾನಿಗಳು ಕಾಯ್ತಾ ಇದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿರುವ ‘ಸಾನವಿ’ ಬಾಲಿವುಡ್ , ಟಾಲಿವುಡ್ ನಲ್ಲಿ ಅಬ್ಬರಿಸುತ್ತಿದ್ದಾರೆ. ಹಾಗೆಯೇ ಬಹುಬೇಡಿಕೆಯ ನಟಿಯರ ಪೈಕಿಯೂ ಒಬ್ಬರಾಗಿದ್ದು, ಸಂಭಾವನೆಯನ್ನೂ ಕೂಡ ಹೆಚ್ಚಿಸಿಕೊಂಡಿದ್ದಾರೆ. ಆದ್ರೆ ಪಾಸಿಟಿವ್ ನ್ಯೂಸ್ ಗಿಂತಲೂ ಹೆಚ್ಚು ಟ್ರೋಲ್ ಗಳಿಂದಲೇ ಸುದ್ದಿಯಾಗೋ ರಶ್ಮಿಕಾ ಹೇಟರ್ಸ್ ಗಳು ಅವರ ವಿರುದ್ಧ ಯಾವುದಾದರೂ ಕಾರಣಗಳನ್ನ ಹುಡುಕತ್ತಲೇ ಇರುತ್ತಾರೆ. ಇನ್ನೂ ರಶ್ಮಿಕಾ ಹೈದ್ರಾಬಾದ್ ನಂತರ ಮುಂಬೈನಲ್ಲಿ ದುಬಾರಿ ಬೆಲೆಯ ಮನೆಗಳನ್ನ ಖರೀದಿ ಮಾಡಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
ಆದ್ರೆ ಈಗ ರಶ್ಮಿಕಾ ಗೋವಾದಲ್ಲೂ ಒಂದು ಸುಂದರ ಜಾಗದಲ್ಲಿ ಸಖತ್ ದುಬಾರಿ ಮನೆ ಖರೀದಿ ಮಾಡಿರೋ ಸುದ್ದಿ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಹೌದು ಕೆಲವೇ ಸಮಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿರುವ ರಶ್ಮಿಕಾ ಹೊಸ ಹೊಸ ಆಸ್ತಿ ಖರೀದಿಸುತ್ತಿದ್ದಾರೆ. ಮುಂಬೈನಲ್ಲಿ ದುಬಾರಿ ಮನೆ ಕೊಂಡುಕೊಂಡು ಹೆಚ್ಚು ಸಮಯವೇ ಆಗಿಲ್ಲ. ಅಷ್ಟ್ರಲ್ಲೇ ಗೋವಾದಲ್ಲೊಂದು ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ. 
‘ಚಷ್ಮಾ ಸುಂದರಿ’ಯ ಕಣ್ಣಲ್ಲಿ ಮ್ಯಾಜಿಕ್ ಇದ್ಯಂತೆ..!
ಗೋವಾದಲ್ಲಿ ಮನೆ ಕೊಂಡುಕೊಂಡಿದ್ದರ ಬಗ್ಗೆ ರಶ್ಮಿಕಾಮಾಹಿತಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮನೆಯ ಹೊರಾಂಗಣದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈಜುಕೊಳದ ಪಕ್ಕದಲ್ಲೇ ಬುದ್ಧನ ಮೂರ್ತಿ , ಬೃಹತ್ ಮರದ ಆವರಣ ಈ ಮನೆಯ ಅಂದ ಹೆಚ್ಚಿಸಿದೆ. ಅಷ್ಟೇ ಅಲ್ಲ ರಶ್ಮಿಕಾ ನೀಡಿದ ಕ್ಯಾಪ್ಷನ್ ಕೂಡ ಗಮನ ಸೆಳೆಯುತ್ತಿದೆ. ‘ಗೋವಾದಲ್ಲಿ ಹೊಸ ಮನೆ ಖರೀಸಿದಕ್ಕೆ ಹೊಟ್ಟೆ ಕಿಚ್ಚಾಯ್ತಾ..?’ ಎಂದು ಬರೆದುಕೊಂಡಿದ್ದಾರೆ. ಆದ್ರೆ ಅವರು ತಮ್ಮ ಟ್ರೋಲಿಗರಿಗೆ ಟಾಂಗ್ ಕೊಟ್ರಾ ಅಥವ ಇತರೇ ಟರಿಗೆ ಟಾಂಗ್ ಕೊಟ್ರಾ ಅನ್ನೋದೇ ಗೊತ್ತಾಗಿಲ್ಲ.
ಲಾಂಗ್ ಗ್ಯಾಪ್ ಬಳಿಕ ಬ್ಯಾಕ್ ಬ್ಯಾಕ್ ಸಿನಿಮಾಗಳ ಸಾರಥ್ಯ ವಹಿಸಿಕೊಂಡ ವಿಜಯ್ ಪ್ರಸಾದ್ – ಸಿದ್ಲಿಂಗು 2 ಬರಲಿದ್ಯಾ..?
ಹೀಗೆ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ರಶ್ಮಿಕಾ ಮನೆಗಳು ಆಸ್ತಿಗಳನ್ನ ಖರೀದಿಸುತ್ತಲೇ ಇರೋದು ಅನೇಕರ ಕಣ್ಣು ಕುಕ್ಕಿದೆ. ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತಿದೆ ಅನ್ನೋ ಪ್ರಶ್ನೆಗಳು ಕೂಡ ಹರಿದಾಡ್ತಿವೆ. ಲಾಜಿಕಲಿ ನೋಡೋದಾದ್ರೆ ರಶ್ಮಿಕಾ ಜಾಹಿರಾತು ಕ್ಷೇತ್ರ , ಬಾಲಿವುಡ್ , ಟಾಲಿವುಡ್ ಹಾಗೂ ಇತರೇ ಬಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಿದ್ದು, ಸಂಭಾವನೆಯನ್ನೂ ಕೂಡ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ವಿಶ್ವದ ದೊಡ್ಡ ಫುಡ್ ಫ್ರಾಂಚೈಸಿಯಾಗಿರುವ ಮೆಕ್ ಡೊನಾಲ್ಡ್ಸ್ ನ ರಾಯಭಾರಿಯೂ ಆಗಿದ್ದಾರೆ. ಹೀಗಾಗಿ ಸಹಜವಾಗಿಯೇ ಭರ್ಜರಿಯಾಗಿಯೇ ಸಂಪಾದನೆ ಮಾಡ್ತಿದ್ದು, ಆ ದುಡ್ಡನ್ನೆಲ್ಲಾ ಆಸ್ತಿಗಳ ಮೇಲೆ ಇನ್ವೆಸ್ಟ್ ಮಾಡ್ತಿದ್ದಾರೆ.








