ಲಾಂಗ್ ಗ್ಯಾಪ್ ಬಳಿಕ ಬ್ಯಾಕ್ ಬ್ಯಾಕ್ ಸಿನಿಮಾಗಳ ಸಾರಥ್ಯ ವಹಿಸಿಕೊಂಡ ವಿಜಯ್ ಪ್ರಸಾದ್ – ಸಿದ್ಲಿಂಗು 2 ಬರಲಿದ್ಯಾ..?

1 min read

ಲಾಂಗ್ ಗ್ಯಾಪ್ ಬಳಿಕ ಬ್ಯಾಕ್ ಬ್ಯಾಕ್ ಸಿನಿಮಾಗಳ ಸಾರಥ್ಯ ವಹಿಸಿಕೊಂಡ ವಿಜಯ್ ಪ್ರಸಾದ್ – ಸಿದ್ಲಿಂಗು 2 ಬರಲಿದ್ಯಾ..?

ನೀರುದೋಸೆ ಸಿನಿಮಾ ಬಳಿಕ ಲಾಂಗ್ ಗ್ಯಾಪ್ ತೆಗೆದುಕೊಂಡಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಅವರು  ಇದೀಗ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳನ್ನ ತೆರೆ ಮೇಲೆ ತರಲು ರೆಡಿಯಾಗಿದ್ದಾರೆ. ಹೌದು..  ಬರೋಬ್ಬರಿ 5 ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ವಿಜಯ್ ಪ್ರಸಾದ್ ಅವರು  ಪ್ರಸ್ತುತ ಜಗ್ಗೇಶ್ ಅಭಿನಯದ ‘ತೋತಾಪುರಿ’ , ಸತೀಶ್ ನಿನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ , ನಂತರ ತೋತಾಪುರಿ ಪಾರ್ಟ್ 2 ಸಿನಿಮಾಗಳ ಸಾರಥ್ಯ ವಹಿಸಿಕೊಂಡಿದ್ದಾರೆ.

ಮೊದಲನೇಯದ್ದಾಗಿ ಜಗ್ಗೇಶ ಆಭಿನಯದ  ತೋತಾಪುರಿ  ಅಕ್ಟೋಬರ್‌ನಲ್ಲಿ ರಿಲೀಸ್ ಆಗಲಿದೆ.  ಅದಾದ ಬಳಿಕ ನವೆಂಬರ್ ನಲ್ಲಿ ಪೆಟ್ರೊಮ್ಯಾಕ್ಸ್  ರಿಲೀಸ್ ಆಗಲಿದೆ.  ಅದಾದ ಕೇವಲ ಎರಡು ವಾರಗಳ ಬಳಿಕ ತೋತಾಪುರಿ 2 ಸಿನಿಮಾ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲದೇ  ವಿಜಯಪ್ರಸಾದ್‌ ನಿರ್ದೇಶನದ ಮತ್ತೊಂದು ಸಿನಿಮಾ ಪರಿಮಳ ಲಾಡ್ಜ್ ಕೂಡ ತಯಾರಾಗ್ತಿದೆ. ಈ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಸುಮನಾ ರಂಗನಾಥ್, ಹೇಮಾ ದತ್, ದತ್ತಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ.

ಹೀಗೆ 5 ವರ್ಷಗಳ ಬ್ರೇಕ್ ನ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಿಜಯಪ್ರಸಾದ್ ಅವರು ಮತ್ತೆ ಹೊಸ ಸಿನಿಮಾ ಕೈಗೆತ್ತಿಕೊಳ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಅಂಗಳದಲ್ಲಿ ಭಾರೀ ಸೌಂಡ್ ಮಾಡ್ತಿದೆ.  ಹೌದು.. 2012ರಲ್ಲಿ ಅವರ ನಿರ್ದೇಶನದಲ್ಲಿ ಯೋಗಿ ಅಭಿನಯದಲ್ಲಿ ಮೂಡಿ ಬಂದಿದ್ದ ಸಿದ್ಲಿಂಗು ಸಿನಿಮಾ ಸಖತ್ ಹಿಟ್ ಆಗಿತ್ತು. ಇದೀಗ ವಿಜಯಪ್ರಸಾದ್ ಸಿದ್ಲಿಂಗು 2 ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡ್ತಿವೆ. ಅಷ್ಟೇ ಅಲ್ಲ ೀ ಸಿನಿಮಾದಲ್ಲಿಯೂ ಲೂಸ್ ಮಾದ ಯೋಗಿ ಅವರೇ ನಾಯಕ ಎನ್ನಲಾಗ್ತಿದೆ.

‘ಚಷ್ಮಾ ಸುಂದರಿ’ಯ ಕಣ್ಣಲ್ಲಿ ಮ್ಯಾಜಿಕ್ ಇದ್ಯಂತೆ..!

ಗಾಂಧಿ ಜಯಂತಿಗೆ – ಶ್ರೀಕೃಷ್ಣ@ gmail.com ಟ್ರೇಲರ್ ರಿಲೀಸ್

ಪುಷ್ಪ ಸಿನಿಮಾದ ರಶ್ಮಿಕಾ  ಫಸ್ಟ್ ಲುಕ್ ರಿಲೀಸ್ – ‘ಸಾನವಿಯ’ ‘ಶ್ರೀವಲ್ಲಿ’ ಲುಕ್ ಗೆ ಫ್ಯಾನ್ಸ್ ಫಿದಾ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd