ಪುಷ್ಪ ಸಿನಿಮಾದ ರಶ್ಮಿಕಾ ಫಸ್ಟ್ ಲುಕ್ ರಿಲೀಸ್ – ‘ಸಾನವಿಯ’ ‘ಶ್ರೀವಲ್ಲಿ’ ಲುಕ್ ಗೆ ಫ್ಯಾನ್ಸ್ ಫಿದಾ..!
ಸ್ಯಾಂಡಲ್ ವುಡ್ ‘ಸಾನವಿ’ಯಾಗಿ ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಟಾಲಿವುಡ್ , ಕಾಲಿವುಡ್ , ಬಾಲಿವುಡ್ ನಲ್ಲಿ ದರ್ಬಾರ್ ಮಾಡ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಪ್ರಸ್ತುತ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದು, ಸಿನಿಮಾ ರಿಲೀಸ್ ಆಗಲು ಅಭಿಮಾನಿಗಳು ಕಾಯ್ತಾ ಇದ್ದಾರೆ.
ಈ ನಡುವೆ ಸಿನಿಮಾದಲ್ಲಿ ರಶ್ಮಿಕಾ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಷ್ಮಾ ಸುಂದರಿಗೆ ಡಿಫರೆಂಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಶ್ಮಿಕಾ ಈ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಪಕ್ಕಾ ಹಳ್ಳಿ ಹುಡುಗಿಯಾಗಿರುವ ರಶ್ಮಿಕಾ ಶ್ರೀವಲ್ಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ರಶ್ಮಿಕಾ ಈ ಪೋಸ್ಟರ್ ನಲ್ಲಿ ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಯನ್ನುಟ್ಟು ಸಿಂಗಾರ ಮಾಡಿಕೊಳ್ಳುತ್ತಿರುವ ಪೋಸ್ಟರ್ ಅಭಿಮಾನಿಗಳಿಗೆ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಭಿಕ್ಷೆ ಅಂದುಕೊಂಡ್ರು ಪರವಾಗಿಲ್ಲ ಸಹಾಯ ಬೇಕು – ನಟಿ ವಿಜಲಕ್ಷ್ಮಿ ಕಣ್ಣೀರು
ಅಂದ್ಹಾಗೆ ಈ ಸಿನಿಮಾದಲ್ಲಿ ಕನ್ನಡದ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಂದ್ಹಾಗೆ ಸಿನಿಮಾ ಕ್ರಿಸ್ಮಸ್ ಹಬ್ಬ ಅಂದ್ರೆ ಡಿಸೆಂಬರ್ 25ಕ್ಕೆ ರಿಲೀಸ್ ಆಗಲಿದೆ. ಇತ್ತೀಚೆಗೆ ಸಿನಿಮಾದ ಲಿರಿಕಲ್ ಹಾಡು ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ತೆಲುಗಿನಲ್ಲಿ ದಾಕೋ ದಾಕೋ ಮೇಕಾ, ಕನ್ನಡದಲ್ಲಿ ಜೋಕೆ ಜೋಕೆ ಮೇಕೆ ಹಾಡಿಗೆ ಸಖತ್ ಒಳ್ಲೆ ರೆಸ್ಪಾನ್ಸ್ ಸಿಕ್ಕಿದೆ. ಮ್ಯೂಸಿಕ್ , ಸೆಟ್ , ಬಿಜಿಎಮ್ ಎಲ್ಲದಕ್ಕಿಂತ ಹೆಚ್ಚಾಗಿ ವಿಜಯ್ ಪ್ರಕಾಶ್ ಧ್ವನಿ ಪ್ರೇಕ್ಷಕರನ್ನ ಮೋಡಿ ಮಾಡಿದೆ.