ADVERTISEMENT
Friday, October 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

Shwetha by Shwetha
October 2, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಚಿಕ್ಕಬಳ್ಳಾಪುರ: ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎಂಬ ಮಾತಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಈಗ ಸಾಕ್ಷಿಯಾಗುತ್ತಿದೆ. ಚುನಾವಣೆ ಮುಗಿದ ಹೊಸತರಲ್ಲಿ ಅಣ್ಣ… ಗುರು… ಎಂದು ಮಾಜಿ ಸಚಿವ ಡಾ ಎಂ ಸಿ ಸುಧಾಕರ್ ಅವರನ್ನು ಹಾಡಿ ಹೊಗಳುತ್ತಿದ್ದ ಶಾಸಕ ಪ್ರದೀಪ್ ಈಶ್ವರ್, ಈಗ ಅವರನ್ನೇ ತಮ್ಮ ಪರಮ ರಾಜಕೀಯ ವಿರೋಧಿ ಎಂಬಂತೆ ಕಾಣುತ್ತಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದ್ದು, ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಬೂದಿ ಮುಚ್ಚಿದ ಕೆಂಡದಂತಿದ್ದ ಬಣ ರಾಜಕೀಯ ಈಗ ಬಹಿರಂಗ

Related posts

ಜನರ ಕೈಗೆ ಸಿಗದ ಶಾಸಕ ನಮಗೆ ಬೇಡ: ಪ್ರದೀಪ್ ಈಶ್ವರ್ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು, 2028 ಕ್ಕೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮುಖಂಡರ ಪಟ್ಟು

ಪ್ರದೀಪ್ ಈಶ್ವರ್ ಗೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷರ ಮುಂದೆ ಮುಖಂಡರ ಪರೇಡ್:ನನ್ನ ಬೆಳವಣಿಗೆ ಸಹಿಸಲಾಗದವರ ಪಿತೂರಿ ಇದು- ದೂರು ನೀಡಿದ ಸ್ವಪಕ್ಷೀಯರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು

October 2, 2026
ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

October 2, 2026

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಎರಡು ಬಣಗಳ ನಡುವಿನ ಬಡಿದಾಟ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿತ್ತು. ಆದರೆ ಈಗ ಅದು ಖುಲ್ಲಂ ಖುಲ್ಲಾ ಎನ್ನುವಂತೆ ನೇರ ಕುಸ್ತಿಗೆ ಇಳಿದಿದೆ. ಇತ್ತೀಚೆಗೆ ಎಂ ಸಿ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಬಂದಿದ್ದು ಈ ವಿರಸದ ತೀವ್ರತೆಯನ್ನು ತೋರಿಸುತ್ತದೆ. ಸಚಿವರ ವಿರುದ್ಧವೇ ಶಾಸಕರ ಬಣ ಪೊಲೀಸರನ್ನು ಬಳಸಿಕೊಂಡಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಇದರ ಬೆನ್ನಲ್ಲೇ ಶಾಸಕರ ವಿರೋಧಿ ಬಣ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಪ್ರದೀಪ್ ಈಶ್ವರ್ ವಿರುದ್ಧ ದೂರುಗಳ ಸುರಿಮಳೆ ಸುರಿಸಿದೆ.

ಗುರುವಿನ ಕ್ಷೇತ್ರದಲ್ಲಿ ಶಿಷ್ಯನ ರಾಜಕೀಯ ದಾಳಿ

ತಮ್ಮ ವಿರುದ್ಧ ಕೆಪಿಸಿಸಿಗೆ ದೂರು ನೀಡಿದ ಸಚಿವ ಸುಧಾಕರ್ ಅವರಿಗೆ ಟಾಂಗ್ ಕೊಡಲು ಪ್ರದೀಪ್ ಈಶ್ವರ್ ಹೊಸ ತಂತ್ರ ರೂಪಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಅವರು ರಾಜಕೀಯ ಮಾಡಿದರೆ, ನಾನು ಅವರ ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತೇನೆ ಎನ್ನುವಂತೆ ಸುಧಾಕರ್ ಅವರ ಸ್ವಕ್ಷೇತ್ರವಾದ ಚಿಂತಾಮಣಿಯ ವಿಷಯಗಳನ್ನು ಕೆದಕಿದ್ದಾರೆ. ಚಿಂತಾಮಣಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಮತ್ತು ಅಂಬೇಡ್ಕರ್ ಪುತ್ಥಳಿ ತೆರವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆಯುವ ಮೂಲಕ ಸಚಿವರಿಗೆ ನೇರ ಸವಾಲು ಹಾಕಿದ್ದಾರೆ. ಗೌರಿಬಿದನೂರಿನಲ್ಲಿ ದಲಿತರ ದೇವಾಲಯ ಪ್ರವೇಶದ ವಿವಾದ ದೊಡ್ಡದಾಗಿದ್ದರೂ, ಪ್ರದೀಪ್ ಈಶ್ವರ್ ಮಾತ್ರ ಸುಧಾಕರ್ ಅವರನ್ನು ಗುರಿಯಾಗಿಸಿಕೊಂಡು ಚಿಂತಾಮಣಿಯ ಬಗ್ಗೆಯೇ ದೂರು ನೀಡಿರುವುದು ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಹಗ್ಗಜಗ್ಗಾಟದ ನಡುವೆ 2028ರ ವಿಧಾನಸಭಾ ಚುನಾವಣೆಯ ಟಿಕೆಟ್ ವಿಚಾರವೂ ಈಗಿನಿಂದಲೇ ಮುನ್ನೆಲೆಗೆ ಬಂದಿದೆ. ಪ್ರದೀಪ್ ಈಶ್ವರ್ ಅವರನ್ನು ಕಡೆಗಣಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಉಳಿಸಲು ಕೆಪಿಸಿಸಿಯಿಂದ ವಿಶೇಷ ವೀಕ್ಷಕರನ್ನು ನೇಮಿಸಬೇಕು ಎಂದು ಸುಧಾಕರ್ ಬಣದ ಮುಖಂಡರು ಹರಿಪ್ರಸಾದ್ ಅವರ ಮುಂದೆ ಪಟ್ಟು ಹಿಡಿದಿದ್ದಾರೆ. ಮುಖಂಡರ ಅಹವಾಲು ಆಲಿಸಿರುವ ಹರಿಪ್ರಸಾದ್, ಯಾವುದೇ ಸ್ಪಷ್ಟ ಭರವಸೆ ನೀಡದಿದ್ದರೂ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈಗ ವಿನಯ್ ಶ್ಯಾಮ್ ಅವರ ಹೆಸರು ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಪರ ನಿಂತಿದ್ದ ಮುಖಂಡರೇ ಈಗ ವಿನಯ್ ಶ್ಯಾಮ್ ಬೆನ್ನಿಗೆ ನಿಂತಿದ್ದಾರೆ. ಇತ್ತೀಚೆಗೆ ಬಿ ಕೆ ಹರಿಪ್ರಸಾದ್ ಅವರು ವಿನಯ್ ಶ್ಯಾಮ್ ಅವರ ತಂದೆ ಜಿ ಎಚ್ ನಾಗರಾಜ್ ಅವರನ್ನು ಭೇಟಿ ಮಾಡಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ. ಪ್ರದೀಪ್ ಈಶ್ವರ್ ಅವರ ಏಕಪಕ್ಷೀಯ ನಡವಳಿಕೆಗೆ ಬ್ರೇಕ್ ಹಾಕಲು ವಿನಯ್ ಶ್ಯಾಮ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಹೈಕಮಾಂಡ್ ಚಿಂತಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಒಟ್ಟಾರೆಯಾಗಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಬಣ ರಾಜಕೀಯದ ಸುಳಿಗೆ ಸಿಲುಕಿದ್ದು, ರಾಜ್ಯ ನಾಯಕರು ಮಧ್ಯಪ್ರವೇಶಿಸಿ ಈ ವಿರಸಕ್ಕೆ ತೇಪೆ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ShareTweetSendShare
Join us on:

Related Posts

ಜನರ ಕೈಗೆ ಸಿಗದ ಶಾಸಕ ನಮಗೆ ಬೇಡ: ಪ್ರದೀಪ್ ಈಶ್ವರ್ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು, 2028 ಕ್ಕೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮುಖಂಡರ ಪಟ್ಟು

ಪ್ರದೀಪ್ ಈಶ್ವರ್ ಗೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷರ ಮುಂದೆ ಮುಖಂಡರ ಪರೇಡ್:ನನ್ನ ಬೆಳವಣಿಗೆ ಸಹಿಸಲಾಗದವರ ಪಿತೂರಿ ಇದು- ದೂರು ನೀಡಿದ ಸ್ವಪಕ್ಷೀಯರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು

by Shwetha
October 2, 2026
0

ಚಿಕ್ಕಬಳ್ಳಾಪುರ: ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಈಗ ಸ್ವಪಕ್ಷೀಯರೇ ದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು...

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

by Shwetha
October 2, 2026
0

ಮಂಗಳೂರು: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಅಪ್ಪಟ ಕನ್ನಡತಿ ಎಂ ಆರ್ ಪೂವಮ್ಮ ಅವರ ಅಪ್ರತಿಮ ಸಾಧನೆಯನ್ನು ರಾಜ್ಯ...

ಸಬ್ಸಿಡಿ ಎಲ್‌ಪಿಜಿಗೆ ಇಂದಿನಿಂದ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ?

ಸಬ್ಸಿಡಿ ಎಲ್‌ಪಿಜಿಗೆ ಇಂದಿನಿಂದ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ?

by Shwetha
October 2, 2026
0

2026ರ ಅಕ್ಟೋಬರ್ 1ರಿಂದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ (BAA) ಕಡ್ಡಾಯವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರು ಸಿಲಿಂಡರ್...

ನೀಲಿ ಶಾಲು ಸಮಾನತೆಯ ಸಂಕೇತ ನಾನು ದಲಿತ ವಿರೋಧಿಯಲ್ಲ: ದಲಿತ ವಿರೋಧಿ ಎಂಬ ಟೀಕೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್

ಪ್ರಕಾಶ್ ರಾಜ್ ಮತ್ತು ಪ್ರದೀಪ್ ಈಶ್ವರ್ ಇಬ್ಬರೂ ಹುಚ್ಚರು: ಹುಚ್ಚರನ್ನ ಯಾರಾದ್ರೂ ಜೈಲಿಗೆ ಹಾಕ್ತಾರಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ

by Shwetha
October 2, 2026
0

ಮೈಸೂರು: ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇಂದು ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದು, ನಟ ಪ್ರಕಾಶ್ ರಾಜ್ ಮತ್ತು ಶಾಸಕ ಪ್ರದೀಪ್ ಈಶ್ವರ್...

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’: ಕರವೇ ವಿರೋಧ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’: ಕರವೇ ವಿರೋಧ

by Shwetha
October 2, 2026
0

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲು ಮುಂದಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ವಿರೋಧ ವ್ಯಕ್ತಪಡಿಸಿದೆ.ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿರುವ ಕರವೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram