ಸಮಂತಾ – ನಾಗಚೈತನ್ಯ ಡಿವೋರ್ಸ್ ಗೆ ಕಾರಣ ಅಮಿರ್ ಖಾನ್ – ಕಂಗನಾ

1 min read

ಸಮಂತಾ – ನಾಗಚೈತನ್ಯ ಡಿವೋರ್ಸ್ ಗೆ ಕಾರಣ ಅಮಿರ್ ಖಾನ್ – ಕಂಗನಾ

ಸದಾ ಏನಾದರೂ ಒಂದು ವಿಚಾರದಿಂದ , ಯಾರಿಗಾದ್ರೂ ಬೈಯೋದು , ಟಾಂಗ್ ಕೊಡೋದು , ತಮಗೆ ಸಂಬಂಧ ಇಲ್ಲದೇ ಇರುವ ವಿಚಾರಗಳಲ್ಲೂ ಮೂಗು ತೂರಿಸುತ್ತಾ  ಬೆಂಬಲಿಗರಷ್ಟೇ ಶತ್ರುಗಳನ್ನೂ ಸಂಪಾದನೆ ಮಾಡಿರುವ ನಟಿ ಅಂದ್ರೆ ಅದು ಬಾಲಿವುಡ್ ನ ಕ್ವೀನ್ ಕಂಗನಾ ರಣಾವತ್. ಕಂಗನಾ ಹೀಗೆಯೇ ಮಾತನಾಡಿ ಟ್ವಿಟ್ಟರ್ ನಿಂದ ಶಾಶ್ವತವಾಗಿ ಔಟ್ ಆಗಿದ್ದಾರೆ. ಈಗಲೂ ಅಷ್ಟೇ ಯಾವುದೋ ವಿಚಾರಕ್ಕೆ ಇನ್ಯಾರನ್ನೋ ಲಿಂಕ್ ಮಾಡಿ ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ವಿವಾದವನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ.

ಡ್ರಗ್ಸ್ ಕೇಸ್ : ನಟ ಶಾರೂಖ್ ಪುತ್ರ ಆರ್ಯನ್ ಎನ್ ಸಿಬಿ ವಶಕ್ಕೆ

ಅಂದ್ಹಾಗೆ  ಇತ್ತೀಚೆಗೆ ಸೌತ್ ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್ ಅಂತಲೇ ಗುರುತಿಸಿಕೊಂಡಿದ್ದ ಸಮಂತಾ ಹಾಗೂ ನಾಗಚೈತನ್ಯ ದಂಪತಿ ವಿವಾಹದ 4 ವರ್ಷಗಳ ನಂತರ ಡಿವೋರ್ಸ್ ಪಡೆದಿದ್ದಾರೆ. ಈ ಮೂಲಕ 10 ವರ್ಷಗಳ ಸ್ನೇಹ – ಪ್ರೀತಿ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಇದೇ ವಿಚಾರವಾಗಿಯೇ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.  ಸಮಂತಾ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಕಂಗನಾ ಇವರಿಬ್ಬರ ಡಿವೋರ್ಸ್ ಗೆ ಅಮೀರ್ ಖಾನ್ ಕಾರಣ ಎಂದು ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

200 ಕೋಟಿ ಜೀವನಾಂಶ ಬೇಡವೆಂದ್ರಂತೆ ಸ್ಯಾಮ್

ಅಷ್ಟೇ ಅಲ್ಲ ಡಿವೋರ್ಸ್‌ ವಿಚಾರದಲ್ಲಿ ಪುರುಷರದ್ದೇ ತಪ್ಪು ಎಂದಿರುವ ಕಂಗನಾ ಪುರುಷನಿಂದಲೇ ವಿಚ್ಛೇದನ ಸಂಸ್ಕೃತಿ ಹೆಚ್ಚಾಗುತ್ತಿದೆ. ಬಟ್ಟೆ ಬದಲಾಯಿಸುವಂತೆ ಮಹಿಳೆಯರನ್ನು ಬದಲಾಯಿಸುವವರನ್ನು ಪ್ರೋತ್ಸಾಹಿಸುವುದನ್ನು ಮೊದಲು ಬಿಡಿ ಎಂದು ಟೀಕಿಸಿದ್ದಾರೆ.. ಪ್ರಾಚೀನವಾಗಿ, ವೈಜ್ಞಾನಿಕವಾಗಿ ಪುರುಷ ಒಂದು ರೀತಿ ಬೇಟೆಗಾರ ಇದ್ದಂತೆ. ಮಹಿಳೆ ಒಂದು ರೀತಿ ಪೋಷಕಿ. ಮಹಿಳೆಯರನ್ನು ಬಟ್ಟೆಯ ರೀತಿ ಬದಲಾಯಿಸುವ ಮತ್ತು ಕೊನೆಯಲ್ಲಿ ಒಳ್ಳೆಯ ಸ್ನೇಹಿತರು ಎಂದು ಬಿಂಬಿಸಿಕೊಳ್ಳುವವರ ಮೇಲೆ ದಯೆ ತೋರಿಸುವುದು ನಿಲ್ಲಿಸಿ. ನೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತಪ್ಪು ಮಾಡಬಹುದು. ಇದು ನಿಜವಾದ ಅಂಕಿ-ಅಂಶ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಂದ ಬೆಂಬಲ ಪಡೆದುಕೊಳ್ಳುತ್ತಿರುವ ಇಂತವರಿಗೆ ನಾಚಿಕೆಯಾಗಬೇಕು. ವಿಚ್ಛೇದನ ಸಂಸ್ಕೃತಿ ಈ ಹಿಂದಿಗಿಂತಲೂ ಹೆಚ್ಚು ಬೆಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಯೋಜನೆಗೆ ಅಂಬಾಸಿಡರ್ ಆದ ಬಾಲಿವುಡ್  ‘ಕ್ವೀನ್’..!

ಅಷ್ಟೇ ಅಲ್ದೇ  ಸಮಂತಾ ಮತ್ತು  ನಾಗಚೈತನ್ಯ ಡಿವೋರ್ಸ್‌ನಲ್ಲಿ ಅಮೀರ್ ಖಾನ್ ಪಾತ್ರವಿದೆ ಎಂದು ಕಿಡಿಕಾರಿದ್ದಾರೆ. ದಿಢೀರ್ ಅಂತಾ ಡಿವೋರ್ಸ್ ಘೋಷಿಸಿದ ಈ ದಕ್ಷಿಣ ಭಾರತದ ನಟ ಮದುವೆಯಾಗಿ 4 ವರ್ಷ ಆಗಿತ್ತು. 10 ವರ್ಷದಿಂದಲೂ ಆಕೆಯೊಂದಿಗೆ ಪರಿಚಯ ಹೊಂದಿದ್ದರು. ಆದರೆ ಬಾಲಿವುಡ್ ಸೂಪರ್ ಸ್ಟಾರ್, ಡಿವೋರ್ಸ್ ಎಕ್ಸ್‌ಪರ್ಟ್ ಹಾಗೂ ಹಲವು ಮಹಿಳೆಯರು ಮತ್ತು ಮಕ್ಕಳು ಜೀವನ ಹಾಳು ಮಾಡಿದವರ ಸಂಪರ್ಕಕ್ಕೆ ಬಂದ ನಂತರ,  ಆತನಿಂತ ಮಾರ್ಗದರ್ಶನ ಪಡೆದು ಈ ರೀತಿ ಮನಾಡಿದ್ದಾರೆ.  ಇದು ಕಣ್ಣಿಗೆ ಕಾಣದ ಸಂಗತಿಯೇನು ಅಲ್ಲ. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮ್ಮೆಲ್ಲರಿಗೂ ತಿಳಿದಿದೆ ಎಂದು ಕಂಗನಾ ಪರೋಕ್ಷವಾಗಿ ಅಮೀರ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಅಮಿರ್ ಖಾನ್ ನಾಗಚೈತನ್ಯ ಅವರ ಮನೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಸ್ಯಾಂಡಲ್ ವುಡ್ ನ ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd