ಬಿಜೆಪಿ ಆಡಳಿತದಲ್ಲಿ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ – ಯೋಗಿ ಆದಿತ್ಯನಾಥ್
ಅಪರಾಧಗಳ ಆಗರವಾಗಿ ಮಾರ್ಪಾಡಾಗಿರುವ ಉತ್ತರ ಪ್ರದೇಶ ಇಡೀ ಭಾರತದಲ್ಲೇ ಮಹಿಳೆಯರಿಗೆ ಅಸುರಕ್ಷಿತ ರಾಜ್ಯಗಳ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿ ಬರುತ್ತದೆ. ಪ್ರತನಿತ್ಯ ಇಲ್ಲಿನ ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಪರಿಸ್ಥಿತಿ ಇದೆ. ಒಂಟಿಯಾಗಿ ಓಡಾಡುವುದು ಸಾಧ್ಯವೇ ಇಲ್ಲ ಅನ್ನೋ ಅಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದ್ರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.
ಬಡ ವ್ಯಕ್ತಿಯಿಂದ ಅನೈತಿಕ ರೀತಿಯಲ್ಲಿ ಭೂಮಿಯನ್ನು ಕಸಿದುಕೊಂಡು ಭೂ ಮಾಫಿಯಾ ತಮ್ಮ ಕೋಟೆಯನ್ನು ನಿರ್ಮಿಸಿದರೆ ಅದರ ಮೇಲೆ ಬುಲ್ಡೋಜರ್‌ಗಳನ್ನು ಚಲಾಯಿಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಹೇಳಿರುವ ಯೋಗಿ ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಹಿಂದಿನ ಸರ್ಕಾರಗಳ ಆಡಳಿತವನ್ನ ಖಂಡಿಸಿರುವ ಯೋಗಿ ಆದಿತ್ಯನಾಥ್, ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು ಭೂ ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿದ್ದವು. ಆದರೆ ಬಿಜೆಪಿ ಸರ್ಕಾರ ಭೂ ಮಾಫಿಯಾ ನಡೆಸುತ್ತಿದ್ದವರಿಂದ 64,000 ಹೆಕ್ಟೇರ್ ಭೂಮಿಯನ್ನು ಮುಕ್ತಗೊಳಿಸಿದೆ ಎಂದಿದ್ದಾರೆ.








