ಕಾಬುಲ್ ಮಸೀದಿ ಬಳಿ ಬಾಂಬ್ ಸ್ಪೋಟ – ಇಬ್ಬರು  ಸಾವು

1 min read

ಕಾಬುಲ್ ಮಸೀದಿ ಬಳಿ ಬಾಂಬ್ ಸ್ಪೋಟ – ಇಬ್ಬರು  ಸಾವು

ಅಫ್ಗಾನಿಸ್ತಾನ : ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡಾಗಿನಿಂದ ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ  ಕಾಬುಲ್ ಮಸೀದಿ ಬಳಿ ಬಾಂಬ್ ಸ್ಪೋಟವಾಗಿ ಇಬ್ಬರು ಮೃತಪಟ್ಟಿದ್ರೆ , ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ತಾಲಿಬಾನ್ ವಕ್ತಾರ ಝುಬಿಯುಲ್ಲಾ ಮುಜಾಹಿದ್  ಮಾಹಿತಿ ನೀಡಿದ್ದು , ಭಾನುವಾರ ಈದ್ಗಾ ಮಸೀದಿಯಲ್ಲಿ ಸೇರಿದ್ದವರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆಗಸ್ಟ್‌ನಲ್ಲಿ  ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ತಾಲಿಬಾನ್ ವಿರುದ್ಧ ಇಸ್ಲಾಮಿಕ್ ಸ್ಟೇಟ್ ಗುಂಪು ಉಗ್ರರ ದಾಳಿಗಳು ಹೆಚ್ಚಾಗಿದೆ. ಈ ಎರಡು ಉಗ್ರವಾದಿ ಸಂಘಟನೆಗಳ ನಡುವೆ ದಾಳಿ ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ.

“ಅವನಿನ್ನೂ ಮಗು ಉಸಿರಾಡಲು ಬಿಡಿ” : ಶಾರುಖ್ ಪುತ್ರನ ಬೆಂಬಲಕ್ಕೆ ನಿಂತ ಸುನಿಲ್ ಶೆಟ್ಟಿ

ರೈತರ ಶವವನ್ನು ಮುಂದಿಟ್ಟುಕೊಂಡು ನಕಲಿ ಗಾಂಧಿ ಕುಟುಂಬ ರಾಜಕಾರಣ : ಬಿಜೆಪಿ

ಜ್ಯೂಸ್ ಎಂದು ಭಾವಿಸಿ ಆಲ್ಕೊಹಾಲ್ ಕುಡಿದ 5 ವರ್ಷದ ಬಾಲಕ ಸಾವು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd