ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade) ವಿಧಿಸಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಈ ಕ್ರಮ ಜಾರಿಗೆ ಬಂದ ತಕ್ಷಣವೇ ಇರಾನ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ವಿದೇಶಿ ಹಡಗುಗಳು ಹಾರ್ಮುಜ್ ದಾಟದಂತೆ ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಟ್ರಂಪ್ ಕಠಿಣ ನಿಲುವು ತಳೆದಿದ್ದು, ನಾವು ವಿಧಿಸಿರುವ ದಿಗ್ಬಂಧನವನ್ನು ಉಲ್ಲಂಘಿಸಲು ಇರಾನ್ ಯತ್ನಿಸಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ, ಒಂದು ವೇಳೆ ಇರಾನ್ ತನ್ನ ಯುದ್ಧನೌಕೆಗಳನ್ನು ಹಾರ್ಮುಜ್ ಜಲಸಂಧಿಗೆ ಕಳುಹಿಸಿ ಪ್ರವೇಶಿಸಲು ಯತ್ನಿಸಿದರೆ, ಅದನ್ನು ತಡೆಯಲು ಅಮೆರಿಕ ತೀವ್ರ ಕ್ರಮ ಕೈಗೊಳ್ಳುತ್ತದೆ. ಹಾರ್ಮುಜ್‌ಗೆ ಬಂದರೆ ಕತೆ ಮುಗಿಸಿ ಬಿಡುತ್ತೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆಗಳಿಂದ ಜಾಗತಿಕ ಮಟ್ಟದಲ್ಲಿ ತೈಲ ಸರಬರಾಜು, ವ್ಯಾಪಾರ & ಭದ್ರತೆ ವಿಚಾರಗಳಲ್ಲಿ ಆತಂಕ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವುದರಿಂದ, ಇಲ್ಲಿ ಯಾವುದೇ ಸೈನಿಕ ಘರ್ಷಣೆ ಉಂಟಾದರೆ ವಿಶ್ವ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.







