ಸಂವಿಧಾನ ಶಿಲ್ಪಿ B. R. ಅಂಬೇಡ್ಕರ್ ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ನಾನು ಇಂದು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಇದಕ್ಕಾಗಿ ಅವರಿಗೆ ನಾನು ಸದಾ ಋಣಿ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವರ ಚಿಂತನೆಗಳು ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳ ಮೇಲೆ ಆಧಾರಿತವಾಗಿದ್ದು, ಇವುಗಳು ದೇಶದ ಪ್ರಗತಿಗೆ ಬಲವಾದ ನೆಲೆ ನೀಡಿವೆ ಎಂದು ಸಿಎಂ ಹೇಳಿದ್ದಾರೆ. ಅಂಬೇಡ್ಕರ್ ಇರದೇ ಇದ್ದರೆ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸುವುದೇ ಕಷ್ಟ. ಅವರ ಕೊಡುಗೆ ಅಮೂಲ್ಯ ಎಂದಿದ್ದಾರೆ.
ಇನ್ನೂ, ಅವರ ಉದ್ದೇಶಗಳನ್ನು ಮನನ ಮಾಡಿಕೊಳ್ಳುವುದು ಮತ್ತು ಅವರ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಅಂಬೇಡ್ಕರ್ ಅವರ ತತ್ವಗಳು ಸದಾಕಾಲ ಮಾರ್ಗದರ್ಶಿಯಾಗಿವೆ ಎಂದಿದ್ದಾರೆ.







