ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಿದ  ಜುಕರ್‌ಬರ್ಗ್ 

1 min read

ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಿದ  ಜುಕರ್‌ಬರ್ಗ್

ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ.  ಈ ಮೂಲಕ ಪ್ರಪಂಚದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಜುಕರ್‌ಬರ್ಗ್ ಮತ್ತೊಂದು ಸ್ಥಾನ ಕೆಳಗಿಳಿಯುವಂತಾಗಿದೆ. ಸೋಶಿಯಲ್-ಮೀಡಿಯಾ ದಿಗ್ಗಜರ ಷೇರುಗಳು ಸೋಮವಾರ 4.9% ನಷ್ಟು ಕುಸಿದಿದ್ದು, ಸೆಪ್ಟೆಂಬರ್ ಮಧ್ಯಭಾಗದಿಂದ ಸುಮಾರು 15%  ಕುಸಿತವನ್ನು ಕಂಡಿದೆ ಎನ್ನಲಾಗಿದೆ.  ಸೋಮವಾರ ಜುಕರ್‌ಬರ್ಗ್‌ನ ಮೌಲ್ಯವು $ 121.6 ಬಿಲಿಯನ್‌ಗೆ ತಲುಪಿದೆ. ಇದರಿಂದಾಗಿ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಬಿಲ್ ಗೇಟ್ಸ್‌ಗಿಂತ ಕೆಳಗಿರುವ ಜುಕರ್ ಬರ್ಗ್ ಅವರು ಇದೀಗ  5 ನೇ ಸ್ಥಾನಕ್ಕೆ ಇಳಿದಿದ್ದಾರೆ.   Facebook

ಸೆಪ್ಟೆಂಬರ್ 13 ರಂದು, ವಾಲ್ ಸ್ಟ್ರೀಟ್ ಜರ್ನಲ್ ಆಂತರಿಕ ದಾಖಲೆಗಳ ಸಂಗ್ರಹವನ್ನು ಆಧರಿಸಿ ಕಥೆಗಳ ಸರಣಿಯನ್ನು ಪ್ರಕಟಿಸಲು ಪ್ರಾರಂಭಿಸಿತು. ಈ ವೇಳೆ ಫೇಸ್‌ಬುಕ್ ತನ್ನ ಉತ್ಪನ್ನಗಳೊಂದಿಗೆ ವ್ಯಾಪಕವಾದ ಸಮಸ್ಯೆಗಳ ಬಗ್ಗೆ ತಿಳಿದಿದೆ ಎಂದು ಬಹಿರಂಗಪಡಿಸಿತು.  ಅಷ್ಟೇ ಅಲ್ಲ ಟೀನೇಜರ್ ಗಳಿಗೆ ಇನ್ಸ್ಟಾಗ್ರಾಮ್ ನ ಹೊಸ ಫೀಚರ್ ನಿಂದ ಆಗಲಿರುವ ತೊಂದರೆಗಳ ಬಗ್ಗೆಯೂ ತಿಳಿದಿದೆ ಎಂದು ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ ಎನ್ನಲಾಗ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಜಕೀಯ ಧ್ರುವೀಕರಣ ಸೇರಿದಂತೆ  ಇತರೇ ಸಮಸ್ಯೆಗಳು ಸಂಕೀರ್ಣವಾಗಿವೆ ಮತ್ತು ತಂತ್ರಜ್ಞಾನದಿಂದ ಮಾತ್ರ ಉಂಟಾಗಿಲ್ಲ ಎಂದು ಫೇಸ್‌ಬುಕ್ ಒತ್ತಿ ಹೇಳಿದೆ.

ಒಂದೇ ತಿಂಗಳಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ಸ್ಥಗಿತಗೊಳಿಸಿದ ವಾಟ್ಸ್ ಆ್ಯಪ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd