ಸ್ಯಾಂಡಲ್ ವುಡ್ ನ ‘ಬಹದ್ದೂರ್’ ಅಭಿಮಾನಿಗಳ ‘ಆಕ್ಷನ್ ಪ್ರಿನ್ಸ್’ ಧ್ರುವಗೆ ಬರ್ತ್ ಡೇ ಸಂಭ್ರಮ..!
‘ಅದ್ಧೂರಿ’ಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ‘ಬಹದ್ದೂರ್’ ಆಗಿ ಅಬ್ಬರಿಸಿ ಕೆಲವೇ ಸಮಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿ ‘ಭರ್ಜರಿ’ಯಾಗಿ ಸೌಂಡ್ ಮಾಡಿ ‘ಪೊಗರಿ’ನಲ್ಲಿಯೇ ಸಕ್ಸಸ್ ಕಂಡಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಲವರ್ ಬಾಯ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ಮಾಸ್ ಅವತಾರದಲ್ಲಿಯೂ ಕಾಣಿಸಿಕೊಂಡು ಜಬರದಸ್ತ್ ಫೈಟ್ ಸೀನ್ ಗಳ ಮೂಲಕವೂ ಮೊದಲ ಸಿನಿಮಾ ಮೂಲಕವೇ ಭರ್ಜರಿ ಸಕ್ಸಸ್ ಕಂಡ ಧ್ರುವ ನಂತರ ಬಹದ್ದೂರ್ ನಲ್ಲಿ ಮತ್ತೆ ರಾಧಿಕಾ ಪಂಡಿತ್ ಜೊತೆಗೆ ಸಿನಿಮಾ ಮಾಡಿದ್ರು. ನಂತರ ಧ್ರುವ ಕ್ರೇಜ್ ಮತ್ತಷ್ಟು ಹೆಚ್ಚಾಯ್ತು. ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಯ್ತು. ನಂತರ ಭರ್ಜರಿ , ಪೊಗರು ಹೀಗಿ ಕೇವಲ 4 ಸಿನಿಮಾಗಳನ್ನೇ ಮಾಡಿದ್ರೂ ಸೂಪರ್ ಹಿಟ್ ಸಿನಿಮಾಗಳಲ್ಲೇ ನಟಿಸಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ ಕೀರ್ತಿ ಧ್ರುವಾರದ್ದು. ಇದೀಗ ಧ್ರುವ ಮಾರ್ಟಿನ್ ಆಗಿ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಅಂದ್ಹಾಗೆ ಮತ್ತೆ ಅದ್ಧೂರಿ ಜೋಡಿ ಮಾರ್ಟಿನ್ ನಲ್ಲಿ ಕಮಾಲ್ ಮಾಡಲಿದೆ. ಧ್ರುವಗೆ AP ಅರ್ಜುನ್ ಅವರೇ ಆಕ್ಷನ್ ಕಟ್ ಹೇಳ್ತಾಯಿದ್ದು, ಸೂಪರ್ ಹಿಟ್ ಜೋಡಿಯ ಕಾಂಬಿನೇಷನ್ ಮೇಲೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ. ಇನ್ನೂ ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಟೀಸರ್ ಕಳೆದ ತಿಂಗಳು ರಿಲೀಸ್ ಆಗಿ ಸೆಸ್ಷೇಷನ್ ಸೃಷ್ಟಿ ಮಾಡಿದೆ. ಸಿನಿಮಾದಲ್ಲಿ ಮೈ ಝುಂ ಎನಿಸುವ ಮ್ಯೂಸಿಕ್ , ಖಡಕ್ ವಾಯ್ಸ್ ನಲ್ಲಿ ಧ್ರುವ ಡೈಲಾಗ್ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ. ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಾ ಇದ್ದಾರೆ. 
ಧ್ರುವ ಡ್ಯಾನ್ಸ್ ಗೂ ಸೈ, ಆಕ್ಷನ್ ಗೂ ಸೈ. ಲವರ್ ಬಾಯ್ ಆಗಿ ಕಾಮಿಡಿ ಮಾಡ್ತಾ , ಫೀಲಿಂಗ್ ಸೀನ್ಸ್ ನಲ್ಲಿ ಎಮೋಷನಲ್ ಆಗಿ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುವಂತಹ ಪವರ್ ಕೂಡ ಹೊಂದಿದ್ದಾರೆ. ಡೈಲಾಗ್ ವಿಚಾರಕ್ಕೆ ಬಂದ್ರೆ ಪ್ರತಿಯೊಂದು ಸಿನಿಮಾದಲ್ಲೂ ಧ್ರುವ ಡೈಲಾಗ್ ಗಾಗಿ ಅಭಿಮಾನಿಗಳು ಕಾಯ್ತಾಯಿರುತ್ತಾರೆ. ಖಡಕ್ ಡೈಲಾಗ್ಸ್ ಗಳನ್ನ ತಮ್ಮದೇ ಶೈಲಿಯಲ್ಲಿ ನುಡಿಯುತ್ತಾ ಅಭಿಮಾನಿಗಳನ್ನ ರಂಜಿಸುವ ಧ್ರುವ ಜನ್ಮದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಶುಭ ಹಾರೈಸುತ್ತಿದ್ದಾರೆ.
ಡ್ರಗ್ ಪ್ರಕರಣದಲ್ಲಿ ಶಾರುಖ್ ಪುತ್ರನ ಬಂಧನ – ಆರ್ಯನ್ ಚಾಟ್ ನಿಂದ ಶಾಕಿಂಗ್ ವಿಚಾರ ಬಹಿರಂಗ..!








