ರೈಲ್ವೆ ಉದ್ಯೋಗಿಗಳಿಗೆ ದಸರಾ ಗೆ ಬಂಪರ್ ಗಿಫ್ಟ್ – 78 ದಿನಳ ಸಂಬಳಕ್ಕೆ ಸಮವಾಗಿ ಬೋನಸ್ ನೀಡಲು ಅನುಮೋದನೆ ..!
ಕೇಂದ್ರ ಸಚಿವ ಸಂಪುಟವು ರೈಲ್ವೆ ಉದ್ಯೋಗಿಗಳಿಗೆ ದಸರಾ ಹಬ್ಬದ ಪ್ರಯುಕ್ತ ಭರ್ಜರಿ ಗುಡ್ ನ್ಯೂಸ್ ನೀಡಿದೆ.
78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆಗೆ ಸಂಬಂಧಿಸಿದ ಬೋನಸ್ ಅನುಮೋದಿಸಿದೆ.
ಒಟ್ಟಾರೆಯಾಗಿ ಸುಮಾರು 1,984.73 ಕೋಟಿಗಳ ಬೋನಸ್ ನೀಡಲು ಅನುಮೋದಿಸಿದೆ.
ಈ ನಿರ್ಧಾರದಿಂದ ಸುಮಾರು 11.56 ಲಕ್ಷ ನಾನ್-ಗೆಜೆಟೆಡ್ ರೈಲ್ವೇ ಉದ್ಯೋಗಿಗಳಿಗೆ ಲಾಭವಾಗಲಿದೆ.
ಎಲ್ಲಾ ಅರ್ಹ ನಾನ್-ಗೆಜೆಟೆಡ್ ರೈಲ್ವೇ ಉದ್ಯೋಗಿಗಳಿಗೆ (RPF/RPSF ಸಿಬ್ಬಂದಿಯನ್ನು ಹೊರತುಪಡಿಸಿ) 2020-21ರ ಆರ್ಥಿಕ ವರ್ಷಕ್ಕೆ 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆಯ ಲಿಂಕ್ಡ್ ಬೋನಸ್ (PLB) ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತವು 78 ದಿನಗಳವರೆಗೆ 17,951 ರೂ. ಎಂದು ಹೇಳಲಾಗಿದೆ.
ಅರ್ಹ ರೈಲ್ವೆ ಉದ್ಯೋಗಿಗಳಿಗೆ ಪ್ರತಿವರ್ಷ ದಸರಾ/ ಪೂಜೆಯ ರಜಾದಿನಗಳಿಗೆ ಮುಂಚಿತವಾಗಿ ಪಿಎಲ್ಬಿ ಪಾವತಿಯನ್ನು ಮಾಡಲಾಗುತ್ತದೆ.
ಕ್ಯಾಬಿನೆಟ್ನ ನಿರ್ಧಾರವನ್ನು ಈ ವರ್ಷವೂ ರಜೆಗೂ ಮುನ್ನವೇ ಜಾರಿಗೊಳಿಸಲಾಗುವುದು, ಎಂದು ಹೇಳಲಾಗಿದೆ.
ಈ ಕ್ರಮದಿಂದ ರೈಲ್ವೇಯ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಉದ್ಯೋಗಿಗಳನ್ನು ಪ್ರೇರೇಪಿಸುವ ನಿರೀಕ್ಷೆಯಿದೆ.