ಪಂಡೋರಾ ಪೇಪರ್ ಲೀಕ್ ಕೇಸ್ – ಇಬ್ಬರು ಕನ್ನಡಿಗರ ಹೆಸರು..!

1 min read

ಪಂಡೋರಾ ಪೇಪರ್ ಲೀಕ್ ಕೇಸ್ –  ಇಬ್ಬರು ಕನ್ನಡಿಗರ ಹೆಸರು..!

2016 ರ ಪನಾಮಾ ಪೇಪರ್ ಲೀಕ್ ಮಾದರಿಯಲ್ಲೇ ಪಂಡೋರಾ ಪೇಪರ್ ಸೋರಿಕೆಯಾಗಿದೆ. ಈ ಪ್ರಕರಣದಲ್ಲಿ ಭಾರತದ ರಾಜಕಾರಣಿಗಳು , ಕ್ರಿಕೆಟಿಗರು , ಸಿನಿಮಾ  ಮಂದಿ ಸೇರಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು , ಉದ್ಯಮಿಗಳು ಹೀಗೆ 300 ಕ್ಕೂ ಹೆಚ್ಚು ಜನರ ಹೆಸರುಗಳು ಕೇಳಿಬಂದಿದೆ. ಈ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ , ನೀರವ್ ಮೋದಿ , ಅನಿಲ್ ಅಂಬಾನಿ ಇನ್ನೂ ಸಾಕಷ್ಟು ಜನರ ಹೆಸರಿದೆ. ಇನ್ನೂ ಇದೇ ಪ್ರಕರಣದಲ್ಲಿ ಇದೀಗ ಇಬ್ಬರು ಕನ್ನಡಿಗರ ಹೆಸರುಗಳು ಕೇಳಿಬಂದಿದೆ. ಮೊದಲನೇಯದ್ದಾಗಿ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಜ್ಯೋತಿ ಪ್ರಕಾಶ್ ಮಿರ್ಜಿ ಅವರ ಮಗ ಚಿರಂತನ್ ಮಿರ್ಜಿ ಮತ್ತೆ ಉದ್ಯಮಿ ಬಿ ಆರ್ ಶೆಟ್ಟಿ ಹೆಸರುಗಳು ಪನಾಮಾ ಪೇಪರ್ ನ ಲಿಸ್ಟ್ ನಲ್ಲಿದೆ.

ಅಂದ್ಹಾಗೆ 2011ರಲ್ಲಿ ಜ್ಯೋತಿ ಪ್ರಕಾಶ್‌ ಮಿರ್ಜಿ ಅವರು ಬೆಂಗಳೂರು ಪೊಲೀಸ್‌ ಆಯುಕ್ತರಾಗಿ ನೇಮಕವಾಗುವ 2 ತಿಂಗಳ ಮುಂಚೆ 2011ರ ಮೇ 2ರಂದು ಅವರ ಪುತ್ರ ಚಿರಂತನ್‌ ಮಿರ್ಜಿ ಸೀಷೆ​ಲ್ಸ್‌​ನಲ್ಲಿ ಕಂಪನಿ ಸ್ಥಾಪಿಸಿದ್ದರು. ಆ ಸಂದರ್ಭದಲ್ಲಿ ಭಾರತೀಯ ಪ್ರಜೆಗಳು ವಿದೇಶದಲ್ಲಿ ಹೂಡಿಕೆ ಮಾಡುವುದು ಮತ್ತು ಉದ್ಯಮ ಸ್ಥಾಪಿಸುವುದಕ್ಕೆ ಆರ್‌ಬಿಐ ನಿರ್ಬಂಧ ವಿಧಿಸಿತ್ತು. ಆದರೆ ಚಿರಂತನ್ ಮಿರ್ಜಿ ಅವರು ಮೇಶ್‌ ಜ್ಯೋತ್‌ ಗ್ಲೋಬಲ್‌ ಲಿ. ಎಂಬ ಕಂಪನಿ ಸ್ಥಾಪಿಸಿದ್ದರು. ಅದು ವಿವಿಧ ಸರಕುಗಳ ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆಯಾಗಿತ್ತು. ಅಲ್ಲದೆ ಅಂತಾರಾಷ್ಟ್ರೀಯ ವ್ಯಾಪಾರಿಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಕಂಪನಿಯಲ್ಲಿ ಚಿರಂತನ್‌ ಮಿರ್ಜಿ ಅವರು ಏಕಮಾತ್ರ ಷೇರುದಾರ ಮತ್ತು ನಿರ್ದೇಶಕರಾಗಿದ್ದರು.

ಇನ್ನೂ ಉದ್ಯಮಿ ಬಿ ಆರ್ ಶೆಟ್ಟಿ ಅವರನ್ನ ಒಂದು ಕಾಲದಲ್ಲಿ ಜಗತ್ತಿನ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಗಣತಿಗೆ ತೆಗೆದುಕೊಳ್ಳಲಾಗ್ತಿತ್ತು. ಆದ್ರೆ ಈಗ ಬ್ಯಾಂಕ್ ಗಳ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.  ಇವರು ಕರ್ನಾಟಕ ಮೂಲದ ದುಬೈ ಉದ್ಯಮಿಯಾಗಿದ್ದಾರೆ.  ಇವರು  ಜೆರ್ಸಿ ಹಾಗೂ ಬ್ರಿಟಿಷ್ ವರ್ಜಿನ್ ಐಲೆಂಡ್ ಗಳಲ್ಲಿ ಕಂಪನಿ ಸ್ಥಾಪಿಸಿದ್ದಾರೆ ಎಂದು ಪಂಡೋರಾ ಪೇಪರ್ ನಲ್ಲಿ ವರದಿ ಮಾಡಲಾಗಿದೆ. 2013ರಲ್ಲಿ ಬ್ರಿಟನ್‌ನಲ್ಲಿ ಕೇಂದ್ರ ಕಚೇರಿ ಇರುವ ಟ್ರಾವೆಲೆಕ್ಸ್‌ ಹೋಲ್ಡಿಂಗ್ಸ್‌ ಲಿ. ಎಂಬ ಕಂಪನಿಯನ್ನು ಹೊಂದಿರುವ ಶೆಟ್ಟಿ ಪನಾಮಾ, ಬ್ರೆಜಿಲ್‌, ಚೀನಾ, ಜಪಾನ್ , ಸ್ವಿಜರ್ಲೆಂಡ್‌ ಸೇರಿದಂತೆ ಇನ್ನೂ ಹಲವೆಡೆ ಒಟ್ಟು 81 ಕಂಪನಿಗಳ ಮಾಲಿಕತ್ವವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಏನಿದು ಪಂಡೋರಾ ಲೀಕ್ ಕೇಸ್

ಪಂಡೋರಾ ಪೇಪರ್ಸ್ ನಲ್ಲಿ ಭಾರತೀಯರು  ಕಡಲಾಚೆಯಲ್ಲಿ ಮಾಡಿರುವ ಹೂಡಿಕೆಗಳು, ಹೊಂದಿರುವ ಆಸ್ತಿ ,ನಗದು, ಷೇರುಗಳು , ವಿದೇಶಿ ಸಂಸ್ಥೆಗಳಲ್ಲಿನ ಹೂಡಿಕೆಗಳನ್ನ ತೋರಿಸಲಾಗಿದೆ. ಅಂದ್ರೆ  ಕಡಲಾಚೆಯ  ಸ್ವತ್ತುಗಳನ್ನು ಹೊಂದಿರುವ ಲಾಭದಾಯಕ ಮಾಲೀಕರ ಬಗ್ಗೆ ಇದು ವರದಿ ಮಾಡುತ್ತದೆ. ಸುಲಭವಾಗಿ ಹೇಳೋದಾದ್ರೆ ತೆರಿಗೆ ಮುಕ್ತ , ತೆರಿಗೆ ಸ್ವರ್ಗ ದೇಶಗಳಲ್ಲಿ ಅಕ್ರಮವಾಗಿ ಹಣ ಹೂಡಿಕೆ , ಕಂಪನಿ ಸ್ಥಾಪನೆ, ಷೇರುಗಳ ಹೊಂದಿರುವುದು , ಆಸ್ತಿ ಹೊಂದಿರುವುದನ್ನ ತೋರಿಸುತ್ತದೆ.

ಮುಂದುವರೆದ ಚೀನಾ ಕಿತಾಪತಿ – ಚೀನಾ ಸೈನಿಕರನ್ನ ವಶಕ್ಕೆ ಪಡೆದ ಭಾರತೀಯ ಸೇನೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd