ಕೇಂದ್ರ ಸರ್ಕಾರ ನಾಗರಿಕರಿಗೆ ಗುಡ್ ನ್ಯೂಸ್ – ಖಾದ್ಯ ತೈಲಗಳ ದರ ಇಳಿಕೆ
ಕೇಂದ್ರ ಸರ್ಕಾರ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದೆ. ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ತಗ್ಗಿಸುವ ನಿರ್ಧಾರ ಪ್ರಕಟಿಸಿದ ಹಿನ್ನೆಲೆ ಜಾಗತಿಕ ದರ ಏರಿಕೆಯಾಗಿದೆ. ಜಾಗತಿಕ ದರ ಏರಿಕೆಯ ಹೊರತಾಗಿಯೂ ಕೂಡ ಸಾಸಿವೆ ಎಣ್ಣೆ ಹೊರತುಪಡಿಸಿ ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಗಳು ದೇಶೀಯ ಮಾರುಕಟ್ಟೆಯಲ್ಲಿ ಕುಸಿದಿರೋದಾಗಿ ಸರ್ಕಾರ ತಿಳಿಸಿದೆ. ಆಮದು ಸುಂಕ ಕಡಿತದ ನಂತರ ಖಾದ್ಯ ತೈಲಗಳ ಅಂತಾರಾಷ್ಟ್ರೀಯ ಬೆಲೆಗಳು ಶೇ. 1.95 ರಿಂದ 7.17 ರ ವ್ಯಾಪ್ತಿಯಲ್ಲಿ ಏರಿಕೆಯಾಗಿರೋದಾಗಿ ತಿಳಿದುಬಂದಿದೆ.
ಆಮದು ಮಾಡಿದ ಖಾದ್ಯ ತೈಲಗಳ ಮೇಲಿನ ಸುಂಕ ಕಡಿತದ ನಂತರ (ಸೆಪ್ಟೆಂಬರ್ 11 ರಿಂದ), ದೇಶೀಯ ಚಿಲ್ಲರೆ ಬೆಲೆಗಳು 0.22 ಶೇಕಡಾ 1.83 ಕ್ಕೆ ಇಳಿದಿದೆ. ಜಾಗತಿಕ ಬೆಲೆಯಲ್ಲಿನ ಏರಿಕೆಯನ್ನು ಗಣನೆಗೆ ತೆಗೆದುಕೊಂಡರೆ, ದರಗಳ ಮೇಲಿನ ನಿವ್ವಳ ಪರಿಣಾಮವು ಸೆಪ್ಟೆಂಬರ್ 10 ರಿಂದ ಶೇಕಡಾ 3.26 ರಿಂದ 8.58 ಕ್ಕೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರವು ಸುಂಕ ಕಡಿತಕ್ಕೆ ಅಗತ್ಯವಾದ ನೀತಿ ಹಸ್ತಕ್ಷೇಪವು ಸಾಮಾನ್ಯ ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.








